ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು: A6 ಆದಿತ್ಯ ಆಳ್ವಾ 7 ದಿನ CCB ಕಸ್ಟಡಿಗೆ

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್​ನ A6 ಆರೋಪಿ ಆದಿತ್ಯ ಆಳ್ವಾನನ್ನು 7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ನಗರದ 33ನೇ ಸಿಟಿ ಸಿವಿಲ್‌ ಕೋರ್ಟ್‌ನಿಂದ ಆದೇಶ ನೀಡಿದೆ.

  • TV9 Web Team
  • Published On - 17:27 PM, 12 Jan 2021
ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು: A6 ಆದಿತ್ಯ ಆಳ್ವಾ 7 ದಿನ CCB ಕಸ್ಟಡಿಗೆ
ಆದಿತ್ಯ ಆಳ್ವಾ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್​ನ A6 ಆರೋಪಿ ಆದಿತ್ಯ ಆಳ್ವಾನನ್ನು 7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ನಗರದ 33ನೇ ಸಿಟಿ ಸಿವಿಲ್‌ ಕೋರ್ಟ್‌ನಿಂದ ಆದೇಶ ನೀಡಿದೆ.

ಆದಿತ್ಯನನ್ನು ಪೊಲೀಸರು ವಿಡಿಯೋ‌ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಹಲವು ದಿನಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದರು.

ಆಪರೇಷನ್ ಆದಿತ್ಯ ಆಳ್ವಾ: ಸಿಸಿಬಿ ತಂಡದಿಂದ ನಡೀತು ರಾತ್ರೋರಾತ್ರಿ ಕಾರ್ಯಾಚರಣೆ