ಶಕ್ತಿಪೀಠ ಬನಶಂಕರಿ ದೇವಿ ದರ್ಶನಕ್ಕೆ ಸಿದ್ಧತೆ ಹೇಗಿದೆ ಗೊತ್ತಾ?
ಬಾಗಲಕೋಟೆ: ಜೂನ್ 8ರಿಂದ ದೇಶಾದ್ಯಂತ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹಾಗಾಗಿ ರಾಜ್ಯದಲ್ಲೂ ದೇವಸ್ಥಾನಗಳನ್ನು ತೆರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬಾದಾಮಿಯ ತಾಲೂಕಿನ ಬನಶಂಕರಿ ದೇವಸ್ಥಾನದಲ್ಲೂ ಶಕ್ತಿಪೀಠ ಬನಶಂಕರಿ ದೇವಿ ದೇವಸ್ಥಾನ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜೂನ್ 8 ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಆದ್ರೆ ವಿಶೇಷವಾಗಿ ದೇವಸ್ಥಾನದಲ್ಲಿ ನಡೆಯುವ ಸರ್ವಾಂಗ ಅಭಿಷೇಕ ವೀಕ್ಷಣೆಯನ್ನು ಬಂದ್ ಮಾಡಲಾಗಿದೆ. ಬೆಳಗ್ಗೆ 7 ರಿಂದ 9 ಗಂಟೆವರೆಗೆ ಸರ್ವಾಂಗ ಅಭಿಷೇಕ […]
ಬಾಗಲಕೋಟೆ: ಜೂನ್ 8ರಿಂದ ದೇಶಾದ್ಯಂತ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹಾಗಾಗಿ ರಾಜ್ಯದಲ್ಲೂ ದೇವಸ್ಥಾನಗಳನ್ನು ತೆರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬಾದಾಮಿಯ ತಾಲೂಕಿನ ಬನಶಂಕರಿ ದೇವಸ್ಥಾನದಲ್ಲೂ ಶಕ್ತಿಪೀಠ ಬನಶಂಕರಿ ದೇವಿ ದೇವಸ್ಥಾನ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ಜೂನ್ 8 ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಆದ್ರೆ ವಿಶೇಷವಾಗಿ ದೇವಸ್ಥಾನದಲ್ಲಿ ನಡೆಯುವ ಸರ್ವಾಂಗ ಅಭಿಷೇಕ ವೀಕ್ಷಣೆಯನ್ನು ಬಂದ್ ಮಾಡಲಾಗಿದೆ.
ಬೆಳಗ್ಗೆ 7 ರಿಂದ 9 ಗಂಟೆವರೆಗೆ ಸರ್ವಾಂಗ ಅಭಿಷೇಕ ನಡೆಯಲಿದೆ. ಆದ್ರೆ ಭಕ್ತರಿಗೆ ದೇವಸ್ಥಾನದಲ್ಲಿ ಅಮ್ಮನ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತೀರ್ಥ, ಪ್ರಸಾದ, ಪಂಚಾಮೃತ ಇರಲ್ಲ. ಅನ್ನದಾಸೋಹ, ವಸತಿ ಸೌಲಭ್ಯವೂ ಇರುವುದಿಲ್ಲ.
ದೇವಿಯ ದರ್ಶನ ಪಡೆಯಲು ಭಕ್ತರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರದ ಬಾಕ್ಸ್ನಲ್ಲಿಯೇ ನಿಲ್ಲಬೇಕು. ಅಲ್ಲದೆ, ದೇವಸ್ಥಾನದಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಭಕ್ತರು ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.
Published On - 11:55 am, Sat, 6 June 20