‘ಸಿದ್ದರಾಮಯ್ಯರ ಸರ್ಕಾರ ಇದ್ದಿದ್ದರೆ ಜನ ಮಣ್ಣು ತಿನ್ನುತ್ತಿದ್ದರೇನೋ’ -ಸಿದ್ದುಗೆ ಬೊಮ್ಮಾಯಿ ಟಾಂಗ್
ಹಾವೇರಿ: GST ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯರ ಸರ್ಕಾರ ಇದ್ದಿದ್ದರೆ ಜನ ಮಣ್ಣು ತಿನ್ನುತ್ತಿದ್ದರೇನೋ. ಆದ್ರೆ ರಾಜ್ಯದಲ್ಲಿರುವುದು ಯಡಿಯೂರಪ್ಪ ನೇತೃತ್ವದ ಸರ್ಕಾರ. ನಮ್ಮ ಸರ್ಕಾರದಲ್ಲಿ ಅಂಥದ್ದು ಯಾವುದೂ ಆಗುವುದಿಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಇಂಥ ಸಮಯದಲ್ಲಿ ತೊಂದರೆಯಾಗಬಾರದೆಂದು ಚರ್ಚಿಸಿದ್ದೇವೆ. ಚರ್ಚೆಯು ಕೂಡ ಈಗ ಒಂದು ಹಂತಕ್ಕೆ ಬಂದಿದೆ. ರಾಜ್ಯಕ್ಕೆ ಬಡ್ಡಿ, ಅಸಲು ಭಾರ ಆಗೋದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. […]

ಹಾವೇರಿ: GST ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯರ ಸರ್ಕಾರ ಇದ್ದಿದ್ದರೆ ಜನ ಮಣ್ಣು ತಿನ್ನುತ್ತಿದ್ದರೇನೋ. ಆದ್ರೆ ರಾಜ್ಯದಲ್ಲಿರುವುದು ಯಡಿಯೂರಪ್ಪ ನೇತೃತ್ವದ ಸರ್ಕಾರ. ನಮ್ಮ ಸರ್ಕಾರದಲ್ಲಿ ಅಂಥದ್ದು ಯಾವುದೂ ಆಗುವುದಿಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಇಂಥ ಸಮಯದಲ್ಲಿ ತೊಂದರೆಯಾಗಬಾರದೆಂದು ಚರ್ಚಿಸಿದ್ದೇವೆ. ಚರ್ಚೆಯು ಕೂಡ ಈಗ ಒಂದು ಹಂತಕ್ಕೆ ಬಂದಿದೆ. ರಾಜ್ಯಕ್ಕೆ ಬಡ್ಡಿ, ಅಸಲು ಭಾರ ಆಗೋದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ರಾಜ್ಯಕ್ಕೆ ಭಾರ ಆಗದಿರುವ ವ್ಯವಸ್ಥೆಯನ್ನ ಕೇಂದ್ರ ಸೂಚಿಸಿದೆ. ಇಂದು ಅಥವಾ ನಾಳೆ ಅದು ಲಿಖಿತ ರೂಪದಲ್ಲಿ ಬರುತ್ತದೆ. ಲಿಖಿತ ರೂಪದಲ್ಲಿ ಬಂದ ಬಳಿಕ ಸ್ಪಷ್ಟ ಅಭಿಪ್ರಾಯ ತಿಳಿಸುತ್ತೇವೆ. GST ಕೌನ್ಸಿಲ್ ಸಭೆಯಲ್ಲಿ ಎಲ್ಲವೂ ಒಟ್ಟಾಗಿ ಚರ್ಚಿಸಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ಇದನ್ನು ಬಗೆಹರಿಸಲು ಸಿದ್ದರಾಮಯ್ಯ ಪರಿಹಾರ ಹೇಳಬೇಕು. ಆದರೆ ಈ ವಿಚಾರದಲ್ಲಿ ಅವರು ರಾಜಕಾರಣ ಮಾಡಬಾರದು ಎಂದು ಜಿಲ್ಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.



