ಸೆಪ್ಟೆಂಬರ್ನಲ್ಲಿ BBMP ಚುನಾವಣೆ ನಡೆಯುತ್ತಾ! ಇಲ್ವಾ?
ಬೆಂಗಳೂರು: ಸೆಪ್ಟೆಂಬರ್ನಲ್ಲಿ BBMP ಚುನಾವಣೆ ನಡೆಯೋದು ಅನುಮಾನ ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಬಿಬಿಎಂಪಿ ವಾರ್ಡ್ಗಳು ಮರು ವಿಂಗಡಣೆಯಾಗಿವೆ. ಹೀಗಾಗಿ, ಮತದಾರರ ಪಟ್ಟಿಯನ್ನು ವಿಂಗಡಣೆ ಮಾಡಬೇಕು. 198 ವಾರ್ಡ್ಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆಗಸ್ಟ್ 20 ರಿಂದ ಶುರುವಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 20 ರಿಂದ 25 ರವರೆಗೂ ಮತದಾರರ ಪಟ್ಟಿ ಸಿದ್ಧಪಡಿಸುವ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ತದನಂತರ ಆಗಸ್ಟ್ 26ರಿಂದ ಸೆಪ್ಟೆಂಬರ್ 14ರವರೆಗೂ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ […]

ಬೆಂಗಳೂರು: ಸೆಪ್ಟೆಂಬರ್ನಲ್ಲಿ BBMP ಚುನಾವಣೆ ನಡೆಯೋದು ಅನುಮಾನ ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಬಿಬಿಎಂಪಿ ವಾರ್ಡ್ಗಳು ಮರು ವಿಂಗಡಣೆಯಾಗಿವೆ. ಹೀಗಾಗಿ, ಮತದಾರರ ಪಟ್ಟಿಯನ್ನು ವಿಂಗಡಣೆ ಮಾಡಬೇಕು. 198 ವಾರ್ಡ್ಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆಗಸ್ಟ್ 20 ರಿಂದ ಶುರುವಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 20 ರಿಂದ 25 ರವರೆಗೂ ಮತದಾರರ ಪಟ್ಟಿ ಸಿದ್ಧಪಡಿಸುವ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ತದನಂತರ ಆಗಸ್ಟ್ 26ರಿಂದ ಸೆಪ್ಟೆಂಬರ್ 14ರವರೆಗೂ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ವಾರ್ಡ್ ಮಟ್ಟದ ಮತದಾರರ ಪಟ್ಟಿ ಅಕ್ಟೋಬರ್ 8 ಕ್ಕೆ ಮುದ್ರಣವಾಗಲಿದೆ. ಅಕ್ಟೋಬರ್ 19ಕ್ಕೆ ಮತದಾರರ ಪಟ್ಟಿಯ ಕರಡು ಪ್ರಕಟವಾಗಲಿದ್ದು ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆ ಸಲ್ಲಿಕೆಗೆ ಅಕ್ಟೋಬರ್ 28 ಕೊನೆಯ ದಿನ. ನವೆಂಬರ್ 30ಕ್ಕೆ ವಾರ್ಡ್ ವಾರು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ನಂತರ ರಾಜ್ಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಚುನಾವಣೆ ನಡೆಯಲಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.