ಹೇಳಿದ್ದು 10ಸಾವಿರ ರೂ, ಕೊಟ್ಟಿದ್ದು 4ಸಾವಿರ.. ಗಾರ್ಮೆಂಟ್ಸ್​ ಕಂಪನಿ ಕೊರೊನಾ ಧೋಖಾ

ಹೇಳಿದ್ದು 10ಸಾವಿರ ರೂ, ಕೊಟ್ಟಿದ್ದು 4ಸಾವಿರ.. ಗಾರ್ಮೆಂಟ್ಸ್​ ಕಂಪನಿ ಕೊರೊನಾ ಧೋಖಾ

ಬೆಂಗಳೂರು: 10 ಸಾವಿರ ರೂಪಾಯಿ ಎಂದು ಭರವಸೆ ನೀಡಿ ಬದಲಿಗೆ 4 ಸಾವಿರ ರೂಪಾಯಿ ಮಾತ್ರ ಸಂಬಳ ನೀಡಿದ್ದಾರೆ ಎಂದು ಪೀಣ್ಯದ ರಾಜಗೋಪಾಲನಗರದಲ್ಲಿರುವ ಗಾರ್ಮೆಂಟ್ಸ್ ಕಂಪನಿಯ ವಿರುದ್ಧ ನೌಕರರು ಆರೋಪಿಸಿದ್ದಾರೆ.

ಬೆಂಗಳೂರು ಶರ್ಟ್ ಗಾರ್ಮೆಂಟ್ಸ್​ ಕಂಪನಿಯ ನೌಕರರಿಂದ ಪ್ರತಿಭಟನೆ ನಡೆದಿದ್ದು ಕೊರೊನಾ ವೇಳೆ 10,000 ರೂಪಾಯಿ ಸಂಬಳ ನೀಡುವ ಭರವಸೆಕೊಟ್ಟು ನಮ್ಮ ಬಳಿ ಕೆಲಸ ಮಾಡಿಸಿದ್ದರು. ಆದರೆ, ಈಗ ಕೇವಲ 4 ಸಾವಿರ ರೂಪಾಯಿ ನೀಡುತ್ತಿದ್ದಾರೆಂದು ನೌಕರರು ಪ್ರತಿಭಟನೆ ನಡೆಸಿದರು.

ಕೊರೊನಾ ‌ಸಮಯದಲ್ಲಿ‌ ಮಾಸ್ಕ್, PPE ಕಿಟ್ ತಯಾರಿಕೆಗೆ ನೌಕರರನ್ನು ಬಳಸಿಕೊಂಡಿದ್ದು ಬಳಿಕ ಅವುಗಳಿಗೆ ಬೇಡಿಕ ಕಡಿಮೆಯಾಗ್ತಾ ಇದ್ದ ಹಾಗೆ ನಮ್ಮನ್ನು ಬೀದಿಗೆ ತಳಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಉದ್ಯೋಗಿಗಳಿಂದ ಪ್ರತಿಭಟನೆ ನಡೆದಿದ್ದು ಕಳೆದ ಎರಡು ತಿಂಗಳಿನಿಂದ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.

ಜೊತೆಗೆ, ಕೊರೊನಾ ಸಂಕಷ್ಟದಲ್ಲಿ ಜೀವನ ನಡೆಸಲು ಕಷ್ಟಾವಾಗಿದೆ. ಇವರು ಕೊಡುತ್ತಿರುವ ನಾಲ್ಕು ಸಾವಿರದಲ್ಲಿ ಜೀವನ ನಡಿಸೊದು ಹೇಗೆ ಅಂತಾ ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Click on your DTH Provider to Add TV9 Kannada