AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಅಕ್ಕ-ತಂಗಿಯರನ್ನು ನೀವು ಇದೇ ರೀತಿ ನೋಡ್ಕೊಳ್ತೀರಾ?; ರಾಂಗ್​ ಆದ ಪ್ರಶಾಂತ್​ ಸಂಬರಗಿ

Prashanth Sambargi: ಮನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗಿತ್ತು. ಮನೆಯ ಸದಸ್ಯರೆಲ್ಲರೂ ಕೂತು ಇದಕ್ಕೆ ಪ್ಲ್ಯಾನ್​ ಮಾಡುತ್ತಿದ್ದರು. ಆಗ ಈ ಘಟನೆ ನಡೆದಿದೆ.

ನಿಮ್ಮ ಅಕ್ಕ-ತಂಗಿಯರನ್ನು ನೀವು ಇದೇ ರೀತಿ ನೋಡ್ಕೊಳ್ತೀರಾ?; ರಾಂಗ್​ ಆದ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ-ಲ್ಯಾಗ್​ ಮಂಜು
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Mar 09, 2021 | 8:25 AM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಡಾಮಿನೇಟ್​ ಮಾಡೋಕೆ ನೋಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಅವರು ಈ ಬಾರಿಯ ಎಲಿಮಿನೇಷನ್​ಗೆ ನಾಮಿನೇಟ್​ ಕೂಡ ಆಗಿದ್ದಾರೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ನಡೆದ ಜಗಳವೊಂದರಲ್ಲಿ ನಿಮ್ಮ ಅಕ್ಕ-ತಂಗಿಯರನ್ನು ನೀವು ಇದೇ ತರಹ ನೋಡಿ ಕೊಳ್ಳುತ್ತೀರಾ ಎಂದು ಲ್ಯಾಗ್​ ಮಂಜುಗೆ ಪ್ರಶಾಂತ್​ ಪ್ರಶ್ನೆ ಮಾಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗಿತ್ತು. ಮನೆಯ ಸದಸ್ಯರೆಲ್ಲರೂ ಕೂತು ಇದಕ್ಕೆ ಪ್ಲ್ಯಾನ್​ ಮಾಡುತ್ತಿದ್ದರು. ಈ ವೇಳೆ ಮಂಜು ಒಂದು ಆಲೋಚನೆಯ ಬಗ್ಗೆ ಹೇಳಿದರು.

ಹೆಣ್ಣಾಗಿ ಹುಟ್ಟಿದವಳೊಬ್ಬಳು ಓದೋಕೆ ಹೋಗುತ್ತಾಳೆ. ಅವಳಿಗೆ ಮನೆಯವರಿಂದಲೇ ತೊಂದರೆ ಎದುರಾಗುತ್ತದೆ. ತಂದೆ-ತಾಯಿ ಯಾರೂ ಅವರಿಗೆ ಬೆಂಬಲ ನೀಡುವುದಿಲ್ಲ. ಅವಳು ಪ್ರತಿ ಹಂತದಲ್ಲೂ ತೊಂದರೆ ಅನುಭವಿಸುತ್ತಾಳೆ. ಹೀಗೆ ತೊಂದರೆ ಅನುಭವಿಸುವ ಅವಳು ನಂತರ ಗೆಲ್ಲುತ್ತಾಳೆ. ಈ ಮೂಲಕ ಅವಳು ಸಮಾಜಕ್ಕೆ ಒಂದು ಸಂದೇಶ ರವಾನೆ ಮಾಡುತ್ತಾಳೆ. ಇದು ನಾಟಕದ ಸಾರಾಂಶ ಎಂದು ಹೇಳಿದರು.

ಇದಕ್ಕೆ ಪ್ರಶಾಂತ್​ ಸಂಬರಗಿ ವಿರೋಧ ವ್ಯಕ್ತಪಡಿಸಿದರು. ನಾವು 21ನೇ ಶತಮಾನದಲ್ಲಿದ್ದೇವೆ. ಇಲ್ಲಿ ಎಲ್ಲವೂ ಬದಲಾಗಿದೆ. ಈಗ ಮನೆಯ ಹೆಣ್ಣುಮಕ್ಕಳಿಗೆ ಬೆಂಬಲ ಕೊಡುತ್ತಾರೆ. ಬ್ರೂಣ ಹತ್ಯೆ ಸಂಪೂರ್ಣವಾಗಿ ನಿಂತಿದೆ. ನಿಮ್ಮ ಕಥೆಯಲ್ಲಿ ಇದ್ದಂತೆ ನಿಮ್ಮ ಅಕ್ಕ ತಂಗಿಯರನ್ನು ನೀವು ಇದೇ ತರ ನೋಡಿ ಕೊಳ್ತೀರಾ ಎಂದು ಪ್ರಶ್ನೆ ಮಾಡಿದರು. ನಂತರ ಈ ಚರ್ಚೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: BBK8: ಬಿಗ್​ ಬಾಸ್​ ಕನ್ನಡ ಎರಡನೇ ವಾರದ ಎಲಿಮಿನೇಷನ್​ಗೆ 8 ಸದಸ್ಯರು ನಾಮಿನೇಟ್​

BBK8: ನಾನು ಕ್ಯಾಪ್ಟನ್​ ಆದ್ರೆ ನಿಂಗ್​ ಐತೆ ಹಬ್ಬ; ಶಮಂತ್​ಗೆ ಎಚ್ಚರಿಕೆ ನೀಡಿದ ಲ್ಯಾಗ್​ ಮಂಜು

Published On - 6:39 am, Tue, 9 March 21

VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್