AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Day 1 : ಬಿಗ್​ ಬಾಸ್​ ಮೊದಲ ದಿನವೇ ಪ್ರೀತಿ-ಪ್ರೇಮ, ನಾಮಿನೇಷನ್, ಕಣ್ಣೀರು ಮತ್ತು ಡ್ರಾಮಾ!

Bigg Boss Kannada Season 8 (Day 1): "ಬಿಗ್​ಬಾಸ್​ ಕನ್ನಡ ಸೀಸನ್​ 8” ಸ್ಪರ್ಧಿಗಳು ಆರಂಭದಲ್ಲಿಯೇ ವೀಕ್ಷಕರ ಗಮನ ಸೆಳೆಯಲು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಮೊದಲ ದಿನವೇ ಕೆಲವರ ವರ್ತನೆ ಹೈಲೈಟ್​ ಆಗಿದೆ. ಎಲಿಮಿನೇಷನ್​ ಭಯವೂ ಶುರುವಾಗಿದೆ.

Bigg Boss Kannada Day 1 : ಬಿಗ್​ ಬಾಸ್​ ಮೊದಲ ದಿನವೇ ಪ್ರೀತಿ-ಪ್ರೇಮ, ನಾಮಿನೇಷನ್, ಕಣ್ಣೀರು ಮತ್ತು ಡ್ರಾಮಾ!
ಬಿಗ್​ ಬಾಸ್ ಕನ್ನಡ ಅಭ್ಯರ್ಥಿಗಳು
ಆಯೇಷಾ ಬಾನು
| Edited By: |

Updated on:Mar 07, 2023 | 11:22 AM

Share

ಬಿಗ್​ ಬಾಸ್​ ಮನೆ ಪ್ರವೇಶ ಮಾಡಿರುವ ಸ್ಪರ್ಧಿಗಳ ಅಸಲಿ ಮುಖ ಏನು ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ. ಈಗ ತಾನೇ ಈ ಜನಪ್ರಿಯ ರಿಯಾಲಿಟಿ ಶೋ ಆರಂಭವಾಗಿದ್ದು, ಮನೆಯ ಎಲ್ಲ ಸದಸ್ಯರ ಮೇಲೂ ವೀಕ್ಷಕರು ಕಣ್ಣಿಟ್ಟಿದ್ದಾರೆ. ಅಚ್ಚರಿ ಎಂದರೆ, ಮೊದಲ ದಿನವೇ ಮನೆಯೊಳಗೆ ಹಲವು ಬೆಳವಣಿಗೆ ನಡೆದಿದೆ. ಒಬ್ಬರು ಲವ್​ನಲ್ಲಿ ಬಿದ್ದಿದ್ದಾರೆ.​ ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ, ಕೆಲವರು ಡ್ರಾಮಾ ಮಾಡಿದ್ದಾರೆ. ಮತ್ತೆ ಕೆಲವರು ಕಣ್ಣೀರು ಸುರಿಸಿದ್ದಾರೆ. ಹೀಗೆ ಮೊದಲ ದಿನ ಆದ ಬೆಳವಣಿಗೆ ಒಂದೆರಡಲ್ಲ!

ಶಮಂತ್​ಗೆ ಯಾರ ಮೇಲೆ ಲವ್​? ಬಿಗ್​ ಬಾಸ್​ ಮನೆ ಪ್ರವೇಶಿಸಿದವರ ನಡುವೆ ಪ್ರೀತಿ ಪ್ರೇಮದ ಗುಸುಗುಸು ಕೇಳಿಬರುವುದು ಹೊಸದೇನೂ ಅಲ್ಲ. ಅದು ಈ ಸೀಸನ್​ನಲ್ಲೂ ಮುಂದುವರಿಯುತ್ತಿದೆ. ಮೊದಲ ವಾರದ ಕ್ಯಾಪ್ಟನ್​ ಆಗಿರುವ ಶಮಂತ್​ ಅಲಿಯಾಸ್​ ಬ್ರೋ ಗೌಡ ಅವರ ಹೊಸ ಲವ್​ ಸ್ಟೋರಿ ಶುರು ಆಗಿದೆ. ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಮನೆಯ ಇತರ ಸದಸ್ಯರ ಜೊತೆ ಸ್ವತಃ ಶಮಂತ್​ ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ಇಷ್ಟ ಆಗಿರುವ ಹುಡುಗಿ ಯಾರು ಎಂಬುದನ್ನು ಅವರು ಬಾಯಿಬಿಟ್ಟಿಲ್ಲ. ನಾಳೆವರೆಗೂ ಕಾಯಿರಿ ಎಂದು ಹೇಳುವ ಮೂಲಕ ಸಸ್ಪೆನ್ಸ್​ ಕಾಪಾಡಿಕೊಂಡಿದ್ದಾರೆ. ಆದರೆ ಈ ಪ್ರೀತಿ ನಿಜವೋ ಅಥವಾ ಬರೀ ಆಟದ ತಂತ್ರವೋ ಎಂದು ವೀಕ್ಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಸಂಬರಗಿ ಮತ್ತು ದಿವ್ಯಾ ನಡುವೆ ಹೆಚ್ಚಿದ ಒಡನಾಟ! ಬಿಗ್​ ಬಾಸ್​ಗೆ ಬಂದು ಹಲವು ದಿನ ಕಳೆದ ಬಳಿಕ ಕೆಲವು ಸದಸ್ಯರ ನಡುವೆ ಅತಿಯಾದ ಆತ್ಮೀಯತೆ ಬೆಳೆಯುತ್ತದೆ. ಆದರೆ ಪ್ರಶಾಂತ್​ ಸಂಬರಗಿ ಅವರು ಆರಂಭದಲ್ಲಿಯೇ ನಟಿ ದಿವ್ಯಾ ಉರುಡುಗ ಜೊತೆ ಹೆಚ್ಚು ಆತ್ಮೀಯತೆಯಿಂದ ಬೆರೆಯುತ್ತಿದ್ದಾರೆ. ದಿವ್ಯಾ ಬಗ್ಗೆ ಅವರು ವಿಶೇಷವಾಗಿ ಗಮನ ಹರಿಸುತ್ತಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಪ್ರೇಕ್ಷಕರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಸಂಬರಗಿ ಈ ರೀತಿ ಮಾಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಲ್ಲರು ಬಿಗ್​ ಬಾಸ್​ ಆಟದ ಅಸಲಿಯತ್ತು ಬಲ್ಲವರು.

ಐವರ ಮೇಲೆ ಎಲಿಮಿನೇಷನ್​ ತೂಗುಗತ್ತಿ! ಎಲಿಮಿನೇಷನ್​ ಎಂಬ ಪದ ಕೇಳುತ್ತಿದ್ದಂತೆಯೇ ಬಿಗ್​ ಬಾಸ್​ ಸ್ಪರ್ಧಿಗಳಿಗೆ ನಡುಕು ಶುರು ಆಗುತ್ತದೆ. ಹಾಗಂತ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕದ ಪ್ರಶ್ನೆ ಈಗಾಗಲೇ ವೀಕ್ಷಕರ ಮನದಲ್ಲಿ ಮೂಡಿದೆ. ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಪ್ರಶಾಂತ್​ ಸಂಬರಗಿ, ನಿರ್ಮಲಾ ಚೆನ್ನಪ್ಪ, ಧನುಶ್ರೀ, ನಿಧಿ ಸುಬ್ಬಯ್ಯ ಮತ್ತು ಮಂಜು ಪಾವಗಡ ನಾಮಿನೇಟ್​ ಅಗಿದ್ದಾರೆ. ಎಲಿಮಿನೇಟ್ ಆಗದೇ ಮನೆಯಲ್ಲೇ ಉಳಿದುಕೊಳ್ಳಲು ಅವರು ಕಷ್ಟಪಡಬೇಕಿದೆ.

ಶುರುವಾಯಿತು ಕಣ್ಣೀರಿನ ಕಥೆ ಮನೆಯೊಳಗೆ ಕಾಲಿಟ್ಟಿರುವ 18 ಸ್ಪರ್ಧಿಗಳು ಕೂಡ ಬೇರೆ ಬೇರೆ ಹಿನ್ನೆಲೆಯಿಂದ ಬಂದಿದ್ದಾರೆ. ಎಲ್ಲರಿಗೂ ಅವರದ್ದೇ ಆದ ನೋವಿನ ಕಥೆ ಇದೆ. ಮೊದಲ ದಿನವೇ ಗೇಮ್​ನಲ್ಲಿ ತಮ್ಮ ಟೀಮ್​ ಸೋತಿದ್ದಕ್ಕೆ ಶುಭಾ ಪೂಂಜಾ ಸೋಲಿನ ಹೊಣೆ ಹೊತ್ತುಕೊಂಡರು. ಅದೇ ವೇಳೆ ಅವರು ಗಳಗಳನೆ ಅತ್ತರು! ನಾಮಿನೇಟ್ ಆಗಿ ನಂತರ ಬಚಾವ್​ ಆದ ಶಂಕರ್ ಅಶ್ವತ್ ಅವರು ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿದರು. ಅವರನ್ನು ನಾಮಿನೇಟ್​ ಮಾಡಿದ್ದಕ್ಕೆ ಕ್ಷಮೆ ಹೇಳಿ, ಗೀತಾ ಭಾರತಿ ಭಟ್​ ಕೂಡ ಭಾವುಕರಾದರು.

Published On - 1:52 pm, Tue, 2 March 21

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ