AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ಸೆಂಟರ್‌ನಲ್ಲಿ 240 ಕೋಟಿ ರೂ. ಹಗರಣ? CM ಸೆಕ್ರೆಟರಿ ಹೆಸರೇಕೆ ಕೇಳಿಬರ್ತಿದೆ?

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಹೊರವಲಯದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕಂದ್ರದಲ್ಲಿ ನಿರ್ಮಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ಈಗ ರಾಜ್ಯಕ್ಕೆ ಹೆಮ್ಮೆಯಾಗುವ ಬದಲು ಭ್ರಷ್ಟಾಚಾರದ ಕೇಂದ್ರವಾಗುತ್ತಿದೆಯಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರ ಸಂಬಂಧಿಗೆ ಕಾಂಟ್ರಾಕ್ಟ್ ನೀಡಿದ್ದು ಭಾರೀ ಅವ್ಯವಹಾರ ನಡೆದಿದೆಯೆಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಾಜ್ಯ ಸರ್ಕಾರ ಕೊವಿಡ್ ಕೇರ್‌ ಸೆಂಟರ್ ಉಪಕರಣ ಖರೀದಿ ವಿಚಾರದಲ್ಲಿ […]

ಕೋವಿಡ್  ಸೆಂಟರ್‌ನಲ್ಲಿ 240 ಕೋಟಿ ರೂ. ಹಗರಣ? CM ಸೆಕ್ರೆಟರಿ ಹೆಸರೇಕೆ ಕೇಳಿಬರ್ತಿದೆ?
Guru
Guru| Edited By: ಸಾಧು ಶ್ರೀನಾಥ್​|

Updated on:Jul 16, 2020 | 1:30 PM

Share

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಹೊರವಲಯದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕಂದ್ರದಲ್ಲಿ ನಿರ್ಮಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ಈಗ ರಾಜ್ಯಕ್ಕೆ ಹೆಮ್ಮೆಯಾಗುವ ಬದಲು ಭ್ರಷ್ಟಾಚಾರದ ಕೇಂದ್ರವಾಗುತ್ತಿದೆಯಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರ ಸಂಬಂಧಿಗೆ ಕಾಂಟ್ರಾಕ್ಟ್ ನೀಡಿದ್ದು ಭಾರೀ ಅವ್ಯವಹಾರ ನಡೆದಿದೆಯೆಂದು ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಾಜ್ಯ ಸರ್ಕಾರ ಕೊವಿಡ್ ಕೇರ್‌ ಸೆಂಟರ್ ಉಪಕರಣ ಖರೀದಿ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆಸಿದೆ. ಕೋವಿಡ್ ಕೇರ್ ಗೆ ಬೇಕಾದ ಹಾಸಿಗೆ, ದಿಂಬು, ಹೊದಿಕೆಗಳನ್ನು 100 ದಿನಗಳಿಗೆ ಬಾಡಿಗೆ ಪಡೆಯುವುದರ ಮೂಲಕ 240 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಒಟ್ಟಾರೆ ನಾಲ್ಕು ಜನ ಗುತ್ತಿಗೆದಾರರಿಗೆ ಈ ಸಂಬಂಧ ಗುತ್ತಿಗೆ ನೀಡಲಾಗಿದೆ. ಇವರೆಲ್ಲಾ ಬೆಂಗಳೂರಿನ ಮಂತ್ರಿಗಳ ಸಂಬಂಧಿಕರು ಎಂದು ಹೇಳಲಾಗುತ್ತಿದೆ. ಕೋವಿಡ್ ಹೆಸರನ್ನು ಹೇಳಿಕೊಂಡು ಬಿಜೆಪಿ ಮುಖಂಡರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿದ್ದರೂ ಬಿಜೆಪಿಯಿಂದ ಹಣದ ಲೂಟಿ ಮಾತ್ರ ನಿಂತಿಲ್ಲ ಎಂದು ಲಕ್ಷ್ಮಣ್ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ಕೋವಿಡ್ ನಿಯಂತ್ರಣ ವಿಚಾರದಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ಕೊರೊನಾ ಸೋಂಕಿತರನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ, ಬಿಜೆಪಿ ಮುಖಂಡರು ಕೇವಲ ಹೇಳಿಕೆಗೆ ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕಿಡಿಕಾರಿದ್ದಾರೆ.

Published On - 1:29 pm, Thu, 16 July 20

Follow Us
Guru
Guru
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ