ಅಂಗಡಿ ಮನೇವ್ರಿಗೆ ಬಿಜೆಪಿ ಟಿಕೆಟ್ ಕೊಡ್ಲಿ.. ನಾನು ಗೆಲ್ಲಿಸ್ತೇನೆ- ಕೈ ನಾಯಕ ಹುಕ್ಕೇರಿ ಹೈಕಮಾಂಡಿಗೆ ಸವಾಲ್!
ಬೆಳಗಾವಿ: ದಿ. ಸುರೇಶ್ ಅಂಗಡಿಯವರ ಮನೆಯವರಿಗೆ ಬಿಜೆಪಿ ಟಿಕೆಟ್ ನೀಡಲಿ. ಅವರ ಮನೆಯವರ ಪರವಾಗಿ ನಾನು ಪ್ರಚಾರ ಮಾಡುವೆ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಪ್ರಕಾಶ್ ಹುಕ್ಕೇರಿ ಬಾಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮಾತು ಕೇಳಿಬಂದಿದೆ. .. ನಮಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ ನಾನು ಅವರ ಪರವಾಗಿ ಪ್ರಚಾರ ಮಾಡಿ ನನ್ನ ಮಗನ ರೀತಿ ಅವರನ್ನು ಗೆಲ್ಲಿಸುತ್ತೇನೆ. ನನ್ನ ಮೇಲೆ ಕಾಂಗ್ರೆಸ್ ಹೈಕಮಾಂಡ್ ಏನು […]

ಬೆಳಗಾವಿ: ದಿ. ಸುರೇಶ್ ಅಂಗಡಿಯವರ ಮನೆಯವರಿಗೆ ಬಿಜೆಪಿ ಟಿಕೆಟ್ ನೀಡಲಿ. ಅವರ ಮನೆಯವರ ಪರವಾಗಿ ನಾನು ಪ್ರಚಾರ ಮಾಡುವೆ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಪ್ರಕಾಶ್ ಹುಕ್ಕೇರಿ ಬಾಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮಾತು ಕೇಳಿಬಂದಿದೆ.
.. ನಮಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ ನಾನು ಅವರ ಪರವಾಗಿ ಪ್ರಚಾರ ಮಾಡಿ ನನ್ನ ಮಗನ ರೀತಿ ಅವರನ್ನು ಗೆಲ್ಲಿಸುತ್ತೇನೆ. ನನ್ನ ಮೇಲೆ ಕಾಂಗ್ರೆಸ್ ಹೈಕಮಾಂಡ್ ಏನು ಕ್ರಮ ಕೈಗೊಳ್ಳುತ್ತೋ ಕೈಗೊಳ್ಳಲಿ. ನಮಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿ ಹೇಳಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published On - 11:53 am, Tue, 27 October 20