ಆಯುಧ ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರಿಂಗ್: ಯುವ ಕಾನ್ಸ್‌ಟೇಬಲ್ ಸಾವು

ಆಯುಧ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಒಬ್ಬ ಕಾನ್ಸ್‌ಟೇಬಲ್ ಅಸುನೀಗಿದ್ದಾರೆ. ಗುಂಡು ತಗುಲಿ ಕಾನ್ಸ್‌ಟೇಬಲ್ ಚೇತನ್ ದುರ್ಮರಣ ಹೊಂದಿದ್ದಾರೆ.

ಆಯುಧ ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರಿಂಗ್: ಯುವ ಕಾನ್ಸ್‌ಟೇಬಲ್ ಸಾವು
ಆಯುಧ ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರಿಂಗ್: ಯುವ ಕಾನ್ಸ್‌ಟೇಬಲ್ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 23, 2021 | 12:55 PM

ದಾವಣಗೆರೆ: ಆಯುಧ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ (ಮಿಸ್ ಫೈರಿಂಗ್) ಒಬ್ಬ ಕಾನ್ಸ್‌ಟೇಬಲ್ ಅಸುನೀಗಿದ್ದಾರೆ. ಗುಂಡು ತಗುಲಿ ಕಾನ್ಸ್‌ಟೇಬಲ್ ಚೇತನ್(28) ದುರ್ಮರಣ ಹೊಂದಿದ್ದಾರೆ.

ಪತಿಯನ್ನ ಕಳೆದುಕೊಂಡ ಗರ್ಭವತಿ ಪತ್ನಿ: ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಘಟನೆ ನಡೆದಿದ್ದು, ಆಯುಧ ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರಿಂಗ್ ಆಗಿ ಸಾವು ಸಂಭವಿಸಿದೆ. ಮೃತ ಕಾನ್ಸ್‌ಟೇಬಲ್ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ. 2012ರಲ್ಲಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದ್ದರು.

ಸಶಸ್ತ್ರ ಮೀಸಲು ಪಡೆಯಲ್ಲಿ ಚೇತನ್ ಕಾನ್ಸ್‌ಟೇಬಲ್ ಆಗಿದ್ದರು. ಅವರ ಪತ್ನಿ ಗರ್ಭವತಿಯಾಗಿದ್ದು, ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದೆ. ದಾವಣಗೆರೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಘಟನೆ ನಡೆದಿದೆ. ಬೆಳಗ್ಗೆ ತರಬೇತಿ ಮುಗಿಸಿ, ಆಯುಧ ಸ್ವಚ್ಛ ಮಾಡುವ ವೇಳ ಅವಘಡ ಸಂಭವಿಸಿದೆ. ಗಾಯಗೊಂಡ ಚೇತನ್​ ಅವರನ್ನು ತುರ್ತಾಗಿ ನಗರ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಚೇತನ ಇನ್ನಿಲ್ಲವಾದರು.

ಪೂರ್ವ ವಲಯ ಐಜಿಪಿ ಎಸ್ ರವಿ, ಎಸ್ಪಿ ಸಿಬಿ ರಿಷ್ಯಂತ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಕಸ್ಮಿಕ ಘಟನೆಯಲ್ಲಿ ಚೇತನ್ ಸಾವನ್ನಪ್ಪಿದ್ದಾನೆ. ಆತನಿಗೆ ಒಬ್ಬ ಗಂಡು ಮಗು ಇದ್ದಾನೆ. ಇಲಾಖೆಯಿಂದ ಮೃತನ ಕುಟುಂಬಕ್ಕೆ ಅಗತ್ಯ ಸಹಾಯ ಮಾಡಲಾಗುವುದು ಎಂದು ಪೂರ್ವ ವಲಯ ಐಜಿಪಿ ಎಸ್ ರವಿ ಹೇಳಿದ್ದಾರೆ.

ಡ್ಯುಯೆಟ್​ ಬಾರ್ ಮಾಲೀಕ ಮನೀಶ್​ ಶೆಟ್ಟಿ ಹತ್ಯೆ ಪ್ರಕರಣ: ನಾಲ್ವರು ಅರೆಸ್ಟ್, ಇಬ್ಬರ ಮೇಲೆ ಖಾಕಿ ಫೈರಿಂಗ್​​

(constable died due to mis firing during cleaning in davangere)

Published On - 12:47 pm, Mon, 23 August 21