ಠಾಕ್ರೆ ಕೆನ್ನೆಗೆ ಬಾರಿಸುವ ಕಾಮೆಂಟ್ ಮಾಡಿ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ರಾಣೆಗೆ ಸಿಕ್ಕಿತು ಜಾಮೀನು

ಮಹಾಡ್​ನ ಪ್ರಥಮ-ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಣೆ ಅವರಿಗೆ ಜಾಮೀನು ನೀಡಿದೆ. ರಾಜ್ಯ ಸರ್ಕಾರದ ಪರ ವಾದಿಸಿದ ವಕೀಲರು ರಾಣೆ ಅವರನ್ನು 7-ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

ಠಾಕ್ರೆ ಕೆನ್ನೆಗೆ ಬಾರಿಸುವ ಕಾಮೆಂಟ್ ಮಾಡಿ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ರಾಣೆಗೆ ಸಿಕ್ಕಿತು ಜಾಮೀನು
ನಾರಾಯಣ ರಾಣೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2021 | 1:27 AM

ಮಹಾರಾಷ್ಟ್ರದ ಮುಖ್ಯಮಂತ್ರಿ ಉಧ್ಧವ್ ಠಾಕ್ರೆ ವಿರುದ್ಧ ಮಾಡಿದ ಕಾಮೆಂಟ್ ಹಿನ್ನಲೆಯಲ್ಲಿ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಮಂಗಳವಾರ ರಾತ್ರಿ ಜಾಮೀನು ಸಿಕ್ಕಿದೆ. ರಾಣೆ ಅವರನ್ನು ಮಂಗಳವಾರ ಬೆಳಗ್ಗೆ ರತ್ನಾಗಿರಿಯ ಸಂಗಮೇಶ್ವರ್ನಲ್ಲಿ ಬಂಧಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷವನನ್ನು ಮರೆತ ಮುಖ್ಯಮಂತ್ರಿ ಠಾಕ್ರೆಯ ಕಪಾಳಕ್ಕೆ ಬಾರಿಸಬೇಕು ಎಂದು ಸೋಮವಾರದಂದು ರಾಯ್ಗಡ್ ನಲ್ಲಿ ಜನ್ ಆಶೀರ್ವಾದ್ ಯಾತ್ರೆಯ ಸಂದರ್ಭದಲ್ಲಿ ಹೇಳಿದ್ದ ರಾಣೆ ಅವರನ್ನು ನಾಸಿಕ್ ನಗರದ ಒಂದು ಪೊಲೀಸ್ ತಂಡ ಬಂಧಿಸಿತ್ತು.

ಮಹಾಡ್​ನ ಪ್ರಥಮ-ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಣೆ ಅವರಿಗೆ ಜಾಮೀನು ನೀಡಿದೆ. ರಾಜ್ಯ ಸರ್ಕಾರದ ಪರ ವಾದಿಸಿದ ವಕೀಲರು ರಾಣೆ ಅವರನ್ನು 7-ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

ಆದರೆ, ಕೇಂದ್ರ ಸಚಿವರ ಪರ ವಕಾಲತ್ತು ಮಾಡಿದ ವಕೀಲರು ಅನಾರೋಗ್ಯ ಸೇರಿದಂತೆ ಬೇರೆ ಹಲವಾರು ಕಾರಣಗಳಿಗೆ ಜಾಮೀನಿ ನೀಡಬೇಕೆಂದು ಕೋರ್ಟ್ಗೆ ಮನವಿ ಮಾಡಿದರು.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ 69 ವರ್ಷ ವಯಸ್ಸಿನ ರಾಣೆ ಅವರು ತಮ್ಮ ತುರ್ತು ಬಂಧನ ಕೋರಿ ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾಗಿರುವ ಎಫ್ ಐ ಆರ್ಗಳನ್ನು ರದ್ದುಗೊಳಿಸಲು ಆದೇಶ ನೀಡಬೇಕೆಂದು ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಲಿದ್ದಾರೆ. ರಾಣೆ ಅವರ ವಿರುದ್ಧ ಕನಿಷ್ಟ ಮೂರು ಕಡೆಗಳಲ್ಲಿ-ನಾಸಿಕ್, ಪುಣೆ ಮತ್ತ್ತು ಮಹಾಡ್ ಎಫ್ ಐ ಆರ್ ದಾಖಲಾಗಿವೆ.

ರಾಣೆ ಅವರು ಮಾಡಿದ ಕಾಮೆಂಟ್ ಮತ್ತು ನಂತರ ನಡೆದ ಬಂಧನ ಮಹಾರಾಷ್ಟ್ರದ ರಾಜಕೀಯ ವಲಯಲದಲ್ಲಿ ತಲ್ಲಣ ಸೃಷ್ಟಿಸಿತ್ತು. ಬಿಜೆಪಿಯ ಕೇಂದ್ರ ನಾಯಕತ್ವ ರಾಣೆ ಅವರ ಬೆನ್ನಿಗೆ ನಿಂತಿತು. ಅವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ನಡೆಸಿರುವ ಕ್ರಮ ರಾಜಕೀಯ ಸೇಡು ಎಂದು ಪಕ್ಷದ ನಾಯಕರು ಹೇಳಿಕೆ ನೀಡಿದರೆ, ರಾಣೆ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಶಿವ ಸೇನೆ ಅಗ್ರಹಿಸಿತ್ತು.

ಬಿಜೆಪಿ, ರಾಣೆಯವರ ಕಾಮೆಂಟ್ ಅನ್ನು ಸಮರ್ಥಿಸಿಕೊಳ್ಳಲಿಲ್ಲವಾದರೂ ಅವರ ಬೆಂಬಲಕ್ಕೆ ಮುಂದಾಯಿತು. ಹಿಂದೆ ಇದೇ ತೆರನಾದ ಕಾಮೆಂಟ್ಗಳನ್ನು ಮುಖ್ಯಮಂತ್ರಿ ಉಧ್ಧವ್ ಠಾಕ್ರೆ ಸೇರಿದಂತೆ ಶಿವ ಸೇನೆಯ ಬೇರೆ ನಾಯಕರು ಮಾಡಿದ್ದನ್ನು ಮುಚ್ಚಿ ಹಾಕಲಾಗಿದೆ ಎಂದು ಬಿಜೆಪಿ ಧುರೀಣರು ಹೇಳಿದ್ದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು, ರಾಣೆ ಅವರು ಗೈರುಹಾಜರಿ ಹೊರತಾಗಿಯೂ ಜನ್ ಆಶೀರ್ವಾದ್ ಯಾತ್ರಾ ಮುಂದುವರಿಯಲಿದೆ ಎಂದು ಹೇಳಿದರು.

ಹಿಂದೆ ಶಿವ ಸೇನೆಯ ಪ್ರಮುಖ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ರಾಣೆ ಅವರನ್ನು 2005 ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಇದನ್ನೂ ಓದಿ:  ಕೇಂದ್ರ ಸಚಿವ ನಾರಾಯಣ್​ ರಾಣೆಯನ್ನು ವಶಕ್ಕೆ ಪಡೆದ ಪೊಲೀಸರು; ಮಧ್ಯಂತರ ರಕ್ಷಣೆ ಅರ್ಜಿ ವಿಚಾರಣೆಗೆ ಬಾಂಬೆ ಹೈಕೋರ್ಟ್ ನಕಾರ