ವಾರದ ಅಂತರದಲ್ಲಿ ಕೊರೊನಾದಿಂದ ವೃದ್ದ ದಂಪತಿ ಸಾವು, ಎಲ್ಲಿ?
ಬಳ್ಳಾರಿ: ಕೊರೊನಾ ಸೋಂಕಿತ ವೃದ್ಧ ದಂಪತಿ ಒಂದೇ ವಾರದ ಅಂತರದಲ್ಲಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬದ 7 ಜನರಿಗೆ ಕೊರೊನಾ ಸೋಂಕು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಕಳೆದ ದಿನಗಳ ಹಿಂದೆ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕುಟುಂಬದ ಏಳು ಜನರಲ್ಲಿ ಕಳೆದ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ 60 ವರ್ಷದ ಮಹಿಳೆ ಸಾವನ್ನಪ್ಪಿದರೆ, ಇಂದು ಮಹಿಳೆಯ ಪತಿ 66 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಕುಟುಂಬದಲ್ಲಿ […]
ಬಳ್ಳಾರಿ: ಕೊರೊನಾ ಸೋಂಕಿತ ವೃದ್ಧ ದಂಪತಿ ಒಂದೇ ವಾರದ ಅಂತರದಲ್ಲಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಕುಟುಂಬದ 7 ಜನರಿಗೆ ಕೊರೊನಾ ಸೋಂಕು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಕಳೆದ ದಿನಗಳ ಹಿಂದೆ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಕುಟುಂಬದ ಏಳು ಜನರಲ್ಲಿ ಕಳೆದ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ 60 ವರ್ಷದ ಮಹಿಳೆ ಸಾವನ್ನಪ್ಪಿದರೆ, ಇಂದು ಮಹಿಳೆಯ ಪತಿ 66 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಕುಟುಂಬದಲ್ಲಿ ಉಳಿದ ಸದಸ್ಯರಿಗೆ ಬಳ್ಳಾರಿ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.