CCB ಕಚೇರಿಗೆ ಅಗಮಿಸಿದ ED ಅಧಿಕಾರಿ, ನಟೀಮಣಿಯರ ವಿಚಾರಣೆಯಲ್ಲಿ ಸಂಚಲನ!
ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಶೆಯ ನಂಟಿದೆ ಎಂದ ಪ್ರಕರಣ ಸಂಬಂಧ ಸಿಸಿಬಿ ಕಚೇರಿಗೆ ED ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಸಿಸಿಬಿ ಮುಖ್ಯಸ್ಥರಿಂದ ಪ್ರಕರಣ ಸಂಬಂಧ ಮಾಹಿತಿ ಪಡೆಯಲಿದ್ದಾರೆ. ಮಾದಕ ದ್ರವ್ಯ ಕುರಿತು ತನಿಖೆ ನಡೆಸುವ ಅಧಿಕಾರ EDಗೆ ಇದೆ. ಹೀಗಾಗಿ ಇಡಿ ಜೋನಲ್ ಡೈರೆಕ್ಟರ್ ರಮಣಗುಪ್ತ ಸೂಚನೆಯಂತೆ ಬೆಂಗಳೂರು ಜೋನಲ್ನ ಹಿರಿಯ ಅಧಿಕಾರಿ ಬಸವರಾಜು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ನಟೀಮಣಿಯರ ವಿಚಾರಣೆಯಲ್ಲಿ ಸಂಚಲನ! ಒಂದು ಕಡೆ ಡ್ರಗ್ಸ್ ದಂಧೆ ಬಗ್ಗೆ ನಟೀಮಣಿಯರಿಬ್ಬರೂ ದಿವ್ಯ ಮೌನಕ್ಕೆ ಜಾರಿದ್ದಾರೆ. […]

ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಶೆಯ ನಂಟಿದೆ ಎಂದ ಪ್ರಕರಣ ಸಂಬಂಧ ಸಿಸಿಬಿ ಕಚೇರಿಗೆ ED ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಸಿಸಿಬಿ ಮುಖ್ಯಸ್ಥರಿಂದ ಪ್ರಕರಣ ಸಂಬಂಧ ಮಾಹಿತಿ ಪಡೆಯಲಿದ್ದಾರೆ.
ಮಾದಕ ದ್ರವ್ಯ ಕುರಿತು ತನಿಖೆ ನಡೆಸುವ ಅಧಿಕಾರ EDಗೆ ಇದೆ. ಹೀಗಾಗಿ ಇಡಿ ಜೋನಲ್ ಡೈರೆಕ್ಟರ್ ರಮಣಗುಪ್ತ ಸೂಚನೆಯಂತೆ ಬೆಂಗಳೂರು ಜೋನಲ್ನ ಹಿರಿಯ ಅಧಿಕಾರಿ ಬಸವರಾಜು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.
ನಟೀಮಣಿಯರ ವಿಚಾರಣೆಯಲ್ಲಿ ಸಂಚಲನ! ಒಂದು ಕಡೆ ಡ್ರಗ್ಸ್ ದಂಧೆ ಬಗ್ಗೆ ನಟೀಮಣಿಯರಿಬ್ಬರೂ ದಿವ್ಯ ಮೌನಕ್ಕೆ ಜಾರಿದ್ದಾರೆ. ಸಿಸಿಬಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಇವರಿಬ್ಬರ ಬಾಯಿ ಬಿಡಿಸಲು. ಪರಿಸ್ಥಿತಿ ಹೀಗಿರುವಾಗ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ಸಿಸಿಬಿ ಅಧಿಕಾರಿಗಳ ಭೇಟಿಗೆ ಬಂದಿರುವುದು, ಪ್ರಕರಣದಲ್ಲಿ ಸಂಚಲನ ತಂದಿದೆ. ಇಂದಿನಿಂದ ಈ ನಟೀಮಣಿಯರ ವಿಚಾರಣೆ ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತದಾ? ಕಾದುನೋಡಬೇಕಿದೆ.




