ಸತತ 5 ಗಂಟೆ ಶೋಧ ಬಳಿಕ ರೈತ ಶಿವಪುತ್ರ ನಾಟೀಕಾರ ದೇಹ ಪತ್ತೆ
ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಬಳಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ರೈತನ ಶವ ಇಂದು ಪತ್ತೆಯಾಗಿದೆ. ನಿನ್ನೆ ಹೊಲಕ್ಕೆ ತೆರಳುತ್ತಿದ್ದ ವೇಳೆ ರೈತ ಶಿವಪುತ್ರ ನಾಟೀಕಾರ ಕೊಚ್ಚಿಹೋಗಿದ್ದ. ಇಂದು ಸತತ 5 ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ ರೈತನ ಶವ ಪತ್ತೆಯಾಗಿದೆ. ಶವವನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ದೇವರಹಿಪ್ಪರಗಿ: ಜಮೀನಿಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಹೋದ ರೈತ ನಿನ್ನೆ ಸಂಜೆ ಕೊಚ್ಚಿಹೋಗಿದ್ದ ಕಲಬುರಗಿ ವ್ಯಕ್ತಿ ಶವವಾಗಿ ಪತ್ತೆ ಇತ್ತ ಕಲಬುರಗಿ ಜಿಲ್ಲೆಯ ಕಮಲಾಪುರ […]

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಬಳಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ರೈತನ ಶವ ಇಂದು ಪತ್ತೆಯಾಗಿದೆ. ನಿನ್ನೆ ಹೊಲಕ್ಕೆ ತೆರಳುತ್ತಿದ್ದ ವೇಳೆ ರೈತ ಶಿವಪುತ್ರ ನಾಟೀಕಾರ ಕೊಚ್ಚಿಹೋಗಿದ್ದ. ಇಂದು ಸತತ 5 ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ ರೈತನ ಶವ ಪತ್ತೆಯಾಗಿದೆ. ಶವವನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.
ದೇವರಹಿಪ್ಪರಗಿ: ಜಮೀನಿಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಹೋದ ರೈತ
ನಿನ್ನೆ ಸಂಜೆ ಕೊಚ್ಚಿಹೋಗಿದ್ದ ಕಲಬುರಗಿ ವ್ಯಕ್ತಿ ಶವವಾಗಿ ಪತ್ತೆ
ಇತ್ತ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಜವಳಗಾ ಗ್ರಾಮದಲ್ಲಿ ನೀರುಪಾಲಾಗಿದ್ದ ಗ್ರಾಮಸ್ಥನೊಬ್ಬನ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಕುಪ್ಪಣ್ಣನ (32) ಶವ ಪತ್ತೆಯಾಗಿದೆ. ಕುಪ್ಪಣ್ಣ ಜವಳಗಾ ಬಳಿಯ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು.




