ಈ ಐಪಿಎಲ್ನಲ್ಲಿ ಌನ್ರಿಖ್ ನೊರ್ಕಿಯರಿಂದ ಬೆಂಕಿಯುಗುಳುವ ಎಸೆತಗಳು!
ವಿಶ್ವದ ಪ್ರಮುಖ ಕ್ರೀಡಾ ಈವೆಂಟ್ಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಮೊಟ್ಟಮೊದಲ ಸೀಸನ್ ಆಟುತ್ತಿರುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಌನ್ರಿಖ್ ನೊರ್ಕಿಯ, ದಿನವಿಡೀ ಉರಿಬಿಸಿಲಿನಲ್ಲಿ ಬೆಂದು ಹೋಗುವ ಯುನೈಡೆಟ್ ಅರಬ್ ಎಮಿರೇಟ್ಸ್ನ ಪಿಚ್ಗಳಲ್ಲಿ ರಾತ್ರಿ ಹೊತ್ತಿನಲ್ಲೂ ಕಿಚ್ಚು ಹಚ್ಚುತ್ತಿದ್ದಾರೆ. ಅವರ ಬೆಂಕಿಯುಗುಳುವ ಎಸೆತಗಳು ಬ್ಯಾಟ್ಸ್ಮನ್ಗಳಲ್ಲಿ ಗಾಬರಿ ಹುಟ್ಟಿಸುತ್ತಿವೆ. ಹೌದು, ಅದು ಅಕ್ಷರಶಃ ಸತ್ಯ. ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಎಸೆತವನ್ನು ಬುಧುವಾರದಂದು ರಾಜಸ್ತಾನ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಬೌಲ್ ಮಾಡಿದ ನೊರ್ಕಿಯ, ತಮ್ಮ ದೇಶದವರೇ ಆದ […]

ವಿಶ್ವದ ಪ್ರಮುಖ ಕ್ರೀಡಾ ಈವೆಂಟ್ಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಮೊಟ್ಟಮೊದಲ ಸೀಸನ್ ಆಟುತ್ತಿರುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಌನ್ರಿಖ್ ನೊರ್ಕಿಯ, ದಿನವಿಡೀ ಉರಿಬಿಸಿಲಿನಲ್ಲಿ ಬೆಂದು ಹೋಗುವ ಯುನೈಡೆಟ್ ಅರಬ್ ಎಮಿರೇಟ್ಸ್ನ ಪಿಚ್ಗಳಲ್ಲಿ ರಾತ್ರಿ ಹೊತ್ತಿನಲ್ಲೂ ಕಿಚ್ಚು ಹಚ್ಚುತ್ತಿದ್ದಾರೆ. ಅವರ ಬೆಂಕಿಯುಗುಳುವ ಎಸೆತಗಳು ಬ್ಯಾಟ್ಸ್ಮನ್ಗಳಲ್ಲಿ ಗಾಬರಿ ಹುಟ್ಟಿಸುತ್ತಿವೆ.
ಹೌದು, ಅದು ಅಕ್ಷರಶಃ ಸತ್ಯ. ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಎಸೆತವನ್ನು ಬುಧುವಾರದಂದು ರಾಜಸ್ತಾನ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಬೌಲ್ ಮಾಡಿದ ನೊರ್ಕಿಯ, ತಮ್ಮ ದೇಶದವರೇ ಆದ ಡೇಲ್ ಸ್ಟೀನ್ ಅವರ ದಾಖಲೆಯನ್ನು ಉತ್ತಮಪಡಿಸಿದ್ದಾರೆ.
ಬುಧವಾರದಂದು ನೊರ್ಕಿಯ ಒಂದು ಎಸೆತವನ್ನು 156.22 ಕಿ.ಮೀ/ಗಂಟೆ ವೇಗದಲ್ಲಿ ಬೌಲ್ ಮಾಡಿದರು. ಅಂದು ಅವರ ಮೂರು ಎಸೆತಗಳು ಸ್ಟೀನ್ ಬೌಲ್ ಮಾಡಿದ 154.40 ಕಿ.ಮೀ/ಗಂಟೆ ಕ್ಕಿಂತ ಜಾಸ್ತಿ ವೇಗದಲ್ಲಿದ್ದವು.

ನೊರ್ಕಿಯ, 156.22 ಕಿ.ಮೀ/ಗಂಟೆ ವೇಗದಲ್ಲಿ ಚೆಂಡೆಸದ ನಂತರ, 155.21 ಮತ್ತು 154.74 ಕಿ.ಮೀ/ಗಂಟೆ ವೇಗದ ಎಸೆತಗಳನ್ನು ಸಹ ಬೌಲ್ ಮಾಡಿದರು.
ಸ್ಟೀನ್ ನಂತರದ ಸ್ಥಾನದಲ್ಲಿ ಮತ್ತೊಬ್ಬ ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೊ ರಬಾಡ (154.23 ಕಿ.ಮೀ/ಗಂಟೆ) ಇದ್ದಾರೆ. ಐಪಿಎಲ್ನಲ್ಲಿ ದಾಖಲಾಗಿರುವ 10 ಅತಿವೇಗದ ಎಸೆತಗಳಲ್ಲಿ 5 ನೊರ್ಕಿಯ ಹೆಸರಿಗಿವೆ. ಅವರು ಮತ್ತೆರಡು ಬಾರಿ, 154. 21 ಮತ್ತು 153.72 ಕಿ.ಮೀ/ಗಂಟೆ ವೇಗದ ಎಸೆತಗಳನ್ನು ಬೌಲ್ ಮಾಡಿದ್ದಾರೆ. ರಬಾಡ ಇನ್ನೊಂದು ಸಂದರ್ಭದಲ್ಲಿ 153.91 ಕಿ.ಮೀ/ಗಂಟೆ ವೇ
ಗದಲ್ಲಿ ಬೌಲ್ ಮಾಡಿದ್ದಾರೆ. ಈ ಪಟ್ಟಿಯಲ್ಲಿರುವ ಇತರ ಇಬ್ಬರು ಬೌಲರ್ಗಳೆಂದರೆ, ಇಂಗ್ಲೆಂಡ್ನ ಜೊಫ್ರಾ ಆರ್ಚರ್ (153.62 ಕಿ.ಮೀ/ಗಂಟೆ) ಮತ್ತು ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ (153.56ಕಿ.ಮೀ/ಗಂಟೆ).
Published On - 6:01 pm, Thu, 15 October 20




