ಇವರೇ ಭಾರತದ ಅತಿ ಶ್ರೀಮಂತ ಮಹಿಳೆ.. ಯಾರವರು?
ಭಾರತದಲ್ಲೇ ವಾಸವಿರುವ ಅತ್ಯಂತ ಶ್ರೀಮಂತ ಮಹಿಳೆ ಯಾರು ಎಂದು ಹಲವರು ಕುತೂಹಲದಿಂದ ಗೂಗಲ್ ಜಾಲಾಡಿದ್ದರು. ಈ ಕುತೂಹಲಕರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ದೆಹಲಿ: ಬ್ರಿಟನ್ನ ರಾಣಿ ಎಲಿಜಬೆತ್ಗಿಂತಲೂ ಸುಧಾ ಮೂರ್ತಿ ಪುತ್ರಿ, ಇಂಗ್ಲೆಂಡ್ ನಿವಾಸಿ ಅಕ್ಷತಾ ಮೂರ್ತಿ ಶ್ರೀಮಂತೆ ಎಂಬ ವಿಚಾರ ಈಚೆಗಷ್ಟೇ ಸುದ್ದಿಯಾಗಿತ್ತು. ಇದೇ ಹೊತ್ತಿಗೆ ಭಾರತದಲ್ಲೇ ವಾಸವಿರುವ ಅತ್ಯಂತ ಶ್ರೀಮಂತ ಮಹಿಳೆ ಯಾರು ಎಂದು ಹಲವರು ಕುತೂಹಲದಿಂದ ಗೂಗಲ್ ಜಾಲಾಡಿದ್ದರು. ಈ ಕುತೂಹಲಕರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಈಗ ಭಾರತದ ಅತಿ ಶ್ರೀಮಂತ ಮಹಿಳೆ ಎಂಬ ಅಭಿದಾನಕ್ಕೆ ಟೆಕ್ ಲೋಕದ ದೈತ್ಯ ಎಚ್ಸಿಎಲ್ನ ಅಧ್ಯಕ್ಷೆ ರೋಶ್ನಿ ನಾಡಾರ್ ಮಲ್ಹೋತ್ರಾ ಪಾತ್ರರಾಗಿದ್ದಾರೆ. ಕೊಟಾಕ್ ವೆಲ್ತ್ ಮ್ಯಾನೇಜ್ಮೆಂಟ್ ಮತ್ತು ಹುರುನ್ ಇಂಡಿಯಾ ಸಂಸ್ಥೆಗಳ ಸಮೀಕ್ಷೆಯಲ್ಲಿ ₹ 54,850 ಕೋಟಿ ಸಂಪತ್ತು ಹೊಂದಿರುವ ರೋಶ್ನಿ ನಾಡಾರ್ 2020ನೇ ಸಾಲಿನ ಅತಿ ಶ್ರೀಮಂತ ಮಹಿಳೆಯ ಪಟ್ಟಕ್ಕೇರಿದ್ದಾರೆ. 63 ವರ್ಷದ ಮಲ್ಹೋತ್ರಾ, ಇದಕ್ಕೂ ಮೊದಲು ಎಚ್ಸಿಎಲ್ನ ಸಿಇಓ ಹುದ್ದೆಯನ್ನೂ ನಿಭಾಯಿಸಿದ್ದರು.

ಎಚ್ಸಿಎಲ್ನ ಅಧ್ಯಕ್ಷೆ ರೋಶ್ನಿ ನಾಡಾರ್
38 ಮಹಿಳೆಯರ ಬಳಿ 1000 ಕೋಟಿಗೂ ಹೆಚ್ಚು ಸಂಪತ್ತು.. ಶ್ರೀಮಂತ ಮತ್ತು ನಾಯಕತ್ವ ಗುಣಗಳುಳ್ಳ 100 ಮಹಿಳೆಯರ ಕೊಟಾಕ್ನ ಪಟ್ಟಿಯಲ್ಲಿ 8 ಮಹಿಳೆಯರು ಶತಕೋಟಿ ಡಾಲರ್ನಷ್ಟು ಸಂಪತ್ತು ಹೊಂದಿರುವವರಾಗಿ ಹೊರಹೊಮ್ಮಿದ್ದಾರೆ. 38 ಮಹಿಳೆಯರು ₹ 1000 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಸರಾಸರಿ 53 ವರ್ಷಕ್ಕೆ ಈ ಮಹಿಳೆಯರು ಅತಿ ಶ್ರೀಮಂತ ಮಹಿಳೆಯರು ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.
ಎರಡನೇ ಸ್ಥಾನದಲ್ಲಿ ಕಿರಣ್ ಮಜೂಮ್ದಾರ್ ಶಾ ಬಯೋಕಾನ್ನ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಶಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ₹ 36,000 ಕೋಟಿ ಮೌಲ್ಯದ ಸಂಪತ್ತಿನ ಒಡತಿಯಾಗಿರುವ ಅವರು ಸ್ವಯಂ ಬದುಕು ರೂಪಿಸಿಕೊಂಡಿರುವ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ 100 ಮಹಿಳೆಯರ ಪೈಕಿ 39 ಮಂದಿ ಇದೇ ಪಟ್ಟಿಯಲ್ಲಿದ್ದಾರೆ ಎಂಬುದು ವಿಶೇಷ.
ಮುಂಬೈ ಮೂಲದ ಔಷಧ ಕಂಪನಿಯ ಮುಖ್ಯಸ್ಥೆಯಾಗಿರುವ ಲೀನಾ ಗಾಂಧಿ ತಿವಾರಿ 21,340 ಕೋಟಿ ಮೌಲ್ಯದ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಸಾಂಪ್ರದಾಯಿಕ ದಿರಿಸಿನಲ್ಲಿ ಕಿರಣ್ ಮಜುಮ್ದಾರ್ ಶಾ