ನೆಟ್​ಫ್ಲಿಕ್ಸ್ ನ ‘ಎಕೆ ವರ್ಸಸ್ ಎಕೆ’ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲು ವಾಯುಪಡೆ ತಾಕೀತು

ಸಂಭಾಷಣೆಯಲ್ಲಿ ಬಳಕೆಯಾಗಿರುವ ಪದಗಳು ಸೂಕ್ತರೀತಿಯಲ್ಲಿಲ್ಲ ಎಂದು ಭಾರತೀಯ ವಾಯುಪಡೆ (ಐಎಎಫ್) ಅಸಮಧಾನ ವ್ಯಕ್ತಪಡಿಸಿದೆ.

ನೆಟ್​ಫ್ಲಿಕ್ಸ್ ನ ‘ಎಕೆ ವರ್ಸಸ್ ಎಕೆ’ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲು ವಾಯುಪಡೆ ತಾಕೀತು
ಸಾಂದರ್ಭಿಕ ಚಿತ್ರ
shruti hegde

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 09, 2020 | 6:38 PM

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿರುವ ‘ಎಕೆ ವರ್ಸಸ್ ಎಕೆ’ ಚಿತ್ರದ ಪ್ರಚಾರಕ್ಕಾಗಿ ಬಳಸಿರುವ ವಿಡಿಯೊ ಕ್ಲಿಪ್​ನಲ್ಲಿ ಬಳಕೆಯಾಗಿರುವ ಸಮವಸ್ತ್ರ ಸರಿಯಿಲ್ಲ. ಸಂಭಾಷಣೆಯಲ್ಲಿ ಬಳಕೆಯಾಗಿರುವ ಪದಗಳು ಸೂಕ್ತರೀತಿಯಲ್ಲಿಲ್ಲ ಎಂದು ಭಾರತೀಯ ವಾಯುಪಡೆ (ಐಎಎಫ್) ಅಸಮಧಾನ ವ್ಯಕ್ತಪಡಿಸಿದೆ. ಈ ದೃಶ್ಯಗಳನ್ನು ತೆಗೆಯುವಂತೆ ನೆಟ್​ಫ್ಲಿಕ್ಸ್ ಮತ್ತು ಅನುರಾಗ್​ ಕಶ್ಯಪ್ ಅವರಿಗೆ ಸೂಚಿಸಿದೆ.

ಚಿತ್ರದ ಪ್ರಚಾರಕ್ಕಾಗಿ ಅನಿಲ್​ ಕಪೂರ್ ಟ್ವೀಟ್ ಮಾಡಿದ್ದ ವಿಡಿಯೊ ತುಣುಕನ್ನು ರಿಟ್ವೀಟ್ ಮಾಡಿರುವ ವಾಯುಪಡೆ, ಭಾರತೀಯ ಸಶಸ್ತ್ರ ಪಡೆಗಳ ನಡವಳಿಕೆಗೆ ಇದು ವಿರುದ್ಧವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ದೃಶ್ಯಗಳನ್ನು ಹಿಂಪಡೆಯಬೇಕು ಎಂದು ತಾಕೀತುಮಾಡಿದೆ.

ಚಿತ್ರದ ಟ್ರೇಲರ್ ಡಿಸೆಂಬರ್ 7 ರಂದು ಬಿಡುಗಡೆಯಾಗಿದೆ. ವಿಕ್ರಮಾದಿತ್ಯ ಮೋಟ್ವಾನಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ನಿರ್ಮಾಪಕರು ಅನುರಾಗ್ ಕಶ್ಯಪ್.

OTT ವೇದಿಕೆಗೆ ಸೆನ್ಸಾರ್ ಶಿಪ್ ಲಗಾಮು! ಇನ್ನು ಸಿನಿಮಾ, ವೆಬ್ ಸಿರೀಸ್ ಮೇಲೆ ಸರ್ಕಾರದ ಹದ್ದಿನಕಣ್ಣು

Follow us on

Most Read Stories

Click on your DTH Provider to Add TV9 Kannada