ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನ ಇಂದು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನ ಇಂದು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭದಲ್ಲೇ ಎರಡು ವಿಕೆಡ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ಟೀಂ ಆಸಿಸ್ಗೆ ಸ್ಮಿತ್ ಮತ್ತು ಲಾಬುಶೆನ್ ಅವರ ಅರ್ಧಶತಕದ ಜೊತೆಯಾಟ ತಂಡಕ್ಕೆ ನೆರವಾಗಿದೆ.
ಈಗಾಗಲೇ ಸರಣಿಯಲ್ಲಿ ಎರಡು ತಂಡಗಳು ತಲಾ 1 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿವೆ. ಹೀಗಾಗಿ ಇಂದು ನೆಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯ ಎರಡು ತಂಡಗಳಿಗೂ ಪ್ರತಿಷ್ಠೆಯ ಪಂದ್ಯವಾಗಿದೆ. ಬ್ರಿಸ್ಬೇನ್ ಮೈದಾನದಲ್ಲಿ ಆಸಿಸ್ ಪಡೆ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು ಈ ಪಂದ್ಯವನ್ನು ಗೆಲುವು ಆತ್ಮವಿಶ್ವಾಸದಲ್ಲಿ ಬಿಗುತ್ತಿದೆ.
ಟೀಂ ಇಂಡಿಯಾ ಸಹ ಗೆಲುವನ್ನ ಅಷ್ಟು ಸುಲಭವಾಗಿ ಬಿಟ್ಟುಕೊಡುವ ತಂಡವಾಗಿಲ್ಲ. ಹೀಗಾಗಿ ಟೀಂ ಇಂಡಿಯಾ ಕೂಡ ಈ ಪಂದ್ಯವನ್ನ ಗೆಲ್ಲುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.ಆದರೆ ಟೀಂ ಇಂಡಿಯಾಕ್ಕೆ ತಂಡದ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರ ನಡೆದಿದ್ದಾರೆ.
ಈ ಎಲ್ಲಾ ಸವಾಲುಗಳನ್ನು ಮುಂದಿಟ್ಟುಕೊಂಡು ಟೀಂ ಇಂಡಿಯಾ ಇಂದಿನ ಪಂದ್ಯಕ್ಕೆ ಸಿದ್ದವಾಗಿದೆ. ಈಗಾಗಲೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಆಸ್ಟ್ರೇಲಿಯಾ ತಂಡ 3 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿದೆ. ಆಸಿಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಹಾಗೂ ಹ್ಯಾರಿಸ್ ಬಹುಬೇಗನೆ ವಿಕೆಟ್ ಒಪ್ಪಿಸಿದರು. ಕೇವಲ 1 ರನ್ ಗಳಿಸಿದ್ದ ವಾರ್ನರ್ ವೇಗಿ ಸಿರಾಜ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಹಾಗೆಯೇ ಹ್ಯಾರಿಸ್ ಕೂಡ 5 ರನ್ ಗಳಿಸಿ ಠಾಕೂರ್ಗೆ ವಿಕೆಟ್ ಒಪ್ಪಿಸಿದರು.
ಹೀಗಾಗಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಸ್ಮಿತ್ ಹಾಗೂ ಲಾಬುಶೆನ್ ನಡುವಿನ ಅರ್ಧ ಶತಕದ ಜೊತೆಯಾಟ ತಂಡಕ್ಕೆ ಭದ್ರ ಬುನಾದಿ ಹಾಕಿತು. 36 ರನ್ಗಳಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಸ್ಮಿತ್ ಅವರನ್ನು ವಾಷಿಂಗ್ಟನ್ ಸುಂದರ್ ತಮ್ಮ ಸ್ಫಿನ್ ಬಲೆಗೆ ಕೆಡುವಿದರು. ಸದ್ಯ ದಿನದ 2ನೇ ಸೆಷನ್ ಆಡುತ್ತಿರುವ ಆಸಿಸ್ ತಂಡದ ಲಾಬುಶೆನ್ ಹಾಗೂ ಮ್ಯಾಥ್ಯೂ ವೆಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನವದೀಪ್ ಸೈನಿಗೆ ಇಂಜುರಿ..
ಬ್ರಿಸ್ಬೇನ್ ಟೆಸ್ಟ್ನಲ್ಲಿ ಸಹ ಟೀಮ್ ಇಂಡಿಯಾ ಆಟಗಾರರು ತಮ್ಮ ಗಾಯದ ಸಮಸ್ಯೆಯಿಂದ ಮೈದಾನದಿಂದ ಹೊರಹೋಗುವ ಸರಣಿಯನ್ನು ಮುಂದುವರೆಸಿದ್ದಾರೆ. 36 ನೇ ಓವರ್ ಎಸೆಯಲು ಬಂದ ವೇಗದ ಬೌಲರ್ ನವದೀಪ್ ಸೈನಿ ಬೌಲಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾದರು. ಹೀಗಾಗಿ ತಮ್ಮ ಓವರ್‌ನಲ್ಲಿ 5 ಎಸೆತಗಳನ್ನು ಹಾಕಿದ ನಂತರ ಅತೀವಾ ನೋವಿನಿಂದ ಮೈದಾನದಿಂದ ಹೊರನಡೆದರು. ಆದರಿಂದ ಸೈನಿ ತನ್ನ ಓವರ್‌ನ ಕೊನೆಯ ಎಸೆತವನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಸೈನಿ ಓವರನ್ನು ಪೂರ್ಣಗೊಳಿಸಿದರು.