ಯಥಾಸ್ಥಿತಿ ಕಾಯ್ದುಕೊಂಡ EPFO ಭವಿಷ್ಯ ನಿಧಿ ಬಡ್ಡಿ ದರ: ಆತಂಕದ ನಡುವೆ ಸಮಾಧಾನಕರ!

EPFO: ಕೊವಿಡ್​-19 ಸಾಂಕ್ರಾಮಿಕ ಮಹಾಮಾರಿಯ ಕಾಟದ ನಡುವೆಯೂ 2020 ಏಪ್ರಿಲ್-ಡಿಸೆಂಬರ್​ ನಡುವಣ ಮೂರು ತ್ರೈಮಾಸಿಕಗಳಲ್ಲಿಯೂ ಸುಮಾರು 50 ಲಕ್ಷ ಮಂದಿ ಹೊಸ ಚಂದಾದಾರರಾಗಿ ಸೇರ್ಪಡೆಯಾಗಿದ್ದಾರೆ.

ಯಥಾಸ್ಥಿತಿ ಕಾಯ್ದುಕೊಂಡ EPFO ಭವಿಷ್ಯ ನಿಧಿ ಬಡ್ಡಿ ದರ: ಆತಂಕದ ನಡುವೆ ಸಮಾಧಾನಕರ!
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
| Updated By: Srinivas Mata

Updated on: Mar 16, 2021 | 11:33 AM

ಸುಮಾರು ಐದು ಕೋಟಿ ಸದಸ್ಯರನ್ನು ಹೊಂದಿರುವ ನೌಕರರ ಭವಿಷ್ಯ ನಿಧಿ ಸಂಘಟನೆಯು (EPFO) ದೇಶದ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿನ ನೌಕರರ ಭವಿಷ್ಯ ಭದ್ರವಾಗಿರಲಿ ಎಂಬ ಸದಾಶಯದೊಂದಿಗೆ ಸಾಮಾಜಿಕ ಭದ್ರತಾ ನಿಧಿಯನ್ನು ಕಾಪಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ನೌಕರರ ಭವಿಷ್ಯ ನಿಧಿ ಯೋಜನೆಗಳಲ್ಲಿ (Employee’s Provident Funds (EPF) Scheme) ಹೂಡಿಕೆ ಪಾಲು ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್​ ಕುಮಾರ್ ಗಂಗ್ವಾರ್ ಅವರು ನಿನ್ನೆ (ಮಾರ್ಚ್ 15, 2021) ಲೋಕಸಭೆಯಲ್ಲಿ ತಿಳಿಸಿದ್ದಾರೆ.

EPFO ಹೂಡಿಕೆಗಳು 2019ನೇ ಆರ್ಥಿಕ ವರ್ಷದಲ್ಲಿ 1,41,346.85 ಕೋಟಿ (1.41 ಲಕ್ಷ ಕೋಟಿ) ರೂಪಾಯಿಯಷ್ಟಿತ್ತು. ಅದು 2020ನೇ ಆರ್ಥಿಕ ವರ್ಷದಲ್ಲಿ 1,68,661 ಕೋಟಿ (1.68 ಲಕ್ಷ ಕೋಟಿ) ರೂಪಾಯಿಯಷ್ಟಾಗಿತ್ತು. ಅದಕ್ಕೂ ಮೊದಲು 2018ನೇ ಆರ್ಥಿಕ ವರ್ಷದಲ್ಲಿ 1,26,661 ಕೋಟಿ (1.26 ಲಕ್ಷ ಕೋಟಿ) ರೂಪಾಯಿಯಷ್ಟಾಗಿತ್ತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ EPFO ಭವಿಷ್ಯ ನಿಧಿ ಮೇಲಿನ ಬಡ್ಡಿ ದರವನ್ನು ಶೇ. 8.5 ರ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. 2014ನೇ ಆರ್ಥಿಕ ವರ್ಷದಿಂದಲೂ ಶೇ. 8.5 ರ ಆದಾಯಕ್ಕಿಂತ ಕಮ್ಮಿ ಇಲ್ಲದಂತೆ ಸತತವಾಗಿ ವಾಪಸಾತಿಗಳಿವೆ. ಸಾಮಾಜಿಕ ಭದ್ರತೆಯ ಸದುದ್ದೇಶದೊಂದಿಗೆ ಮತ್ತು ಮೂಲ ಧನವನ್ನು ಪೋಷಿಸಿಕೊಂಡು ಬರುವ ಬದ್ಧತೆಯೊಂದಿಗೆ EPFO ಕೆಲಸ ನಿರ್ವಹಿಸುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ.

ತನ್ನ ಸದಸ್ಯರಿಗೆ ಉತ್ತಮ ವಾಪಸಾತಿಗಳನ್ನು ನೀಡಬೇಕೆಂದು ಕ್ಷಣಕ್ಷಣಕ್ಕೂ ಏರಿಳಿತ ಕಾಣುವ ಷೇರು ಮಾರುಕಟ್ಟೆಯಲ್ಲಿಯೂ 2015-16ನೇ ಸಾಲಿನಿಂದ EPFO ದಕ್ಷವಾಗಿ ಹಣ ಹೂಡತೊಡಗಿದೆ. ಅದರಿಂದ ಲಾಭವೇ ಹೆಚ್ಚಾಗಿದೆ. ಇದರಿಂದ ಮೂಲಧನದ ಶೇ. 5ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡತೊಡಗಿದ EPFO ಇದೀಗ ಶೇ. 15ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುತ್ತಿದೆ.

ಹಾಗೆಯೇ, 2020 ಡಿಸೆಂಬರ್​ನಲ್ಲಿ ಶೇ. 24ರಷ್ಟು ಮಂದಿ ಹೊಸದಾಗಿ EPFOಗೆ ಚಂದಾದಾರರಾಗಿದ್ದಾರೆ. ಕೊವಿಡ್​-19 ಸಾಂಕ್ರಾಮಿಕ ಮಹಾಮಾರಿಯ ಕಾಟದ ನಡುವೆಯೂ 2020 ಏಪ್ರಿಲ್-ಡಿಸೆಂಬರ್​ ನಡುವಣ ಮೂರು ತ್ರೈಮಾಸಿಕಗಳಲ್ಲಿಯೂ ಸುಮಾರು 50 ಲಕ್ಷ ಮಂದಿ ಹೊಸ ಚಂದಾದಾರರಾಗಿ ಸೇರ್ಪಡೆಯಾಗಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಭವಿಷ್ಯ ನಿಧಿ ಮೇಲಿನ ಬಡ್ಡಿ ದರ ಹೆಚ್ಚಿಸದೇ ಇದ್ದರೂ ಶೇ. 8.5 ದರವನ್ನು ಕಾಪಾಡಿಕೊಂಡು ಬಂದಿರುವುದು ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿರುವುದು ಸದಸ್ಯರ ಭವಿಷ್ಯದ ದೃಷ್ಟಿಯಿಂದ ತೃಪ್ತಿಕರ ಸಂಗತಿಯಾಗಿದೆ.

ಮೂಲ: https://www.money9.com/ 

ಇದನ್ನೂ ಓದಿ: ಇಪಿಎಫ್ ಬಡ್ಡಿದರ ಶೇ 8.5 ನಿಗದಿ: 5 ಕೋಟಿ ಕಾರ್ಮಿಕರಿಗೆ ಖುಷಿಕೊಟ್ಟ ನಿರ್ಧಾರ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್