ಲೈನ್ ರಿಪೇರಿ ವೇಳೆ ಪವರ್ On ಮಾಡಿಸಿದ ಅಧಿಕಾರಿಗಳು, ಪವರ್ಮನ್ಗೆ shock
ಮೈಸೂರು: ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪವರ್ಮನ್ಗೆ ಗಾಯವಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ರಾಂಪುರದಲ್ಲಿ ಬೆಳಕಿಗೆ ಬಂದಿದೆ. ರಾಂಪುರ ನಾಲೆ ಬಳಿ 11ಕೆ.ವಿ ಪವರ್ ಲೈನ್ ದುರಸ್ತಿ ಮಾಡುವ ವೇಳೆ ಅಧಿಕಾರಿಗಳು ಪವರ್ ಆನ್ ಮಾಡಿಸಿದ್ದಾರಂತೆ. ಇದರಿಂದ ಪವರ್ಮನ್ (ಲೈನ್ಮನ್) ಕೆ.ಎಸ್. ಮಂಜುಗೆ ಕರೆಂಟ್ ತಾಗಿ ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಮತ್ತು ದವಡೆ ಹಾಗೂ ಹಲ್ಲುಗಳ ಮುರಿದಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಂಜುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು […]

ಮೈಸೂರು: ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪವರ್ಮನ್ಗೆ ಗಾಯವಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ರಾಂಪುರದಲ್ಲಿ ಬೆಳಕಿಗೆ ಬಂದಿದೆ.

ರಾಂಪುರ ನಾಲೆ ಬಳಿ 11ಕೆ.ವಿ ಪವರ್ ಲೈನ್ ದುರಸ್ತಿ ಮಾಡುವ ವೇಳೆ ಅಧಿಕಾರಿಗಳು ಪವರ್ ಆನ್ ಮಾಡಿಸಿದ್ದಾರಂತೆ. ಇದರಿಂದ ಪವರ್ಮನ್ (ಲೈನ್ಮನ್) ಕೆ.ಎಸ್. ಮಂಜುಗೆ ಕರೆಂಟ್ ತಾಗಿ ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಮತ್ತು ದವಡೆ ಹಾಗೂ ಹಲ್ಲುಗಳ ಮುರಿದಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಂಜುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು KPTCL ಅಧಿಕಾರಿಗಳ ವಿರುದ್ಧ ಪವರ್ಮನ್ ಮಂಜು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ದೂರಿನಲ್ಲಿ ನಂಜನಗೂಡು ತಾಲೂಕು ಹುಲ್ಲಹಳ್ಳಿ ಉಪ ಶಾಖೆಯ ಜ್ಯೂನಿಯರ್ ಇಂಜಿನಿಯರ್ ಸಂತೋಷ್ ಕುಮಾರ್ ಹಾಗೂ ಪವರ್ ಸ್ಟೇಷನ್ ಇನ್ಜಾರ್ಜ್ ಪುಟ್ಟರಾಜು ಹೆಸರು ಉಲ್ಲೇಖಿಸಲಾಗಿದೆಯಂತೆ.



