ಮಲಪ್ರಭಾ ನದಿ ಅಬ್ಬರ: 20 ಕ್ಕೂ ಹೆಚ್ಚು ಮನೆಗಳು ಮುಳುಗಡೆ
ಗದಗ: ಮಲಪ್ರಭಾ ನದಿ ಅಬ್ಬರ ಹೆಚ್ಚಾಗಿದೆ. ಇದರಿಂದ ಬಡವರ ಬದುಕು ಕೊಚ್ಚಿ ಹೋಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪ್ರವಾಹಕ್ಕೆ 20 ಕ್ಕೂ ಹೆಚ್ಚು ಮನೆಗಳು ಮುಳುಗಿವೆ. ನೀರಲ್ಲಿ ಸಿಲುಕಿ ನಮ್ಮ ಬದುಕು ಕೊಚ್ಚಿ ಹೋಗಿದೆ ಎಂದು ಇಲ್ಲಿನ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಕ್ಷೇತ್ರದ ಶಾಸಕರೂ, ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಊರಿಗೆ ಬಂದ್ರೂ ನಮ್ಮ ಗೋಳು ಕೇಳಿಲ್ಲ. ನಮ್ಮ ಬದುಕು ಮುಳುಗಿರುವ ಪ್ರದೇಶಕ್ಕೆ ಸಚಿವರು ಬಂದಿಲ್ಲ. ಯಾರೂ ನಮ್ಮ ಸಂಕಷ್ಟ ಕೇಳುತ್ತಿಲ್ಲ ಅಂತ ಮಹಿಳೆಯರು […]

ಗದಗ: ಮಲಪ್ರಭಾ ನದಿ ಅಬ್ಬರ ಹೆಚ್ಚಾಗಿದೆ. ಇದರಿಂದ ಬಡವರ ಬದುಕು ಕೊಚ್ಚಿ ಹೋಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪ್ರವಾಹಕ್ಕೆ 20 ಕ್ಕೂ ಹೆಚ್ಚು ಮನೆಗಳು ಮುಳುಗಿವೆ.
ನೀರಲ್ಲಿ ಸಿಲುಕಿ ನಮ್ಮ ಬದುಕು ಕೊಚ್ಚಿ ಹೋಗಿದೆ ಎಂದು ಇಲ್ಲಿನ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಕ್ಷೇತ್ರದ ಶಾಸಕರೂ, ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಊರಿಗೆ ಬಂದ್ರೂ ನಮ್ಮ ಗೋಳು ಕೇಳಿಲ್ಲ. ನಮ್ಮ ಬದುಕು ಮುಳುಗಿರುವ ಪ್ರದೇಶಕ್ಕೆ ಸಚಿವರು ಬಂದಿಲ್ಲ. ಯಾರೂ ನಮ್ಮ ಸಂಕಷ್ಟ ಕೇಳುತ್ತಿಲ್ಲ ಅಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನದಿ ನೀರಿಗೆ ಸಿಲುಕಿ ಜನ ಜೀವನ ಅಸ್ತವ್ಯಸ್ತವಾಗಿದೆ.