ರಸ್ತೆ ಮೇಲೆ ಬಿದ್ದಿದ್ದ iPhoneನ ವಾಪಸ್ ಮಾಡಿದ ಕಾರ್ಮಿಕನಿಗೆ ಖಾಕಿಯಿಂದ ಸನ್ಮಾನ, ಎಲ್ಲಿ?
ಬೆಂಗಳೂರು: ಕೊವಿಡ್ನಿಂದ ಆರ್ಥಿಕ ಹೊಡೆತ ತಿಂದವರು ಬಹಳಷ್ಟು ಮಂದಿಯಿದ್ದಾರೆ. ಜೀವನ ಸಾಗಿಸಲು ಅಡ್ಡದಾರಿ ಸಹ ಹಿಡಿಯಲು ಮುಂದಾಗಿದ್ದಾರೆ. ಆದರೆ, ಈ ನಡುವೆ ರಸ್ತೆಯಲ್ಲಿ ಬಿದ್ದಿದ್ದ ದುಬಾರಿ iPhoneನ ಅದರ ಮಾಲೀಕನಿಗೆ ಹಿಂದಿರುಗಿಸುವ ಮೂಲಕ ಕಾರ್ಮಿಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಸಂತೋಷ್ ಎಂಬುವವರು ಗಿರಿನಗರದ ಬಳಿ ತಮ್ಮ iPhone ಬೀಳಿಸಿಕೊಂಡು ಹೋಗಿದ್ರು. ಇದೇ ವೇಳೆ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಕಾರ್ಮಿಕ ಲಕ್ಷ್ಮಣನ ಕಣ್ಣಿಗೆ ಅನಾಥವಾಗಿ ಬಿದ್ದಿದ್ದ iPhone ಕಂಡುಬಂತು. ಕೂಡಲೇ ಅದನ್ನು ತೆಗೆದುಕೊಂಡು ಗಿರಿನಗರ ಠಾಣೆಯ ಪೊಲೀಸರಿಗೆ […]

ಬೆಂಗಳೂರು: ಕೊವಿಡ್ನಿಂದ ಆರ್ಥಿಕ ಹೊಡೆತ ತಿಂದವರು ಬಹಳಷ್ಟು ಮಂದಿಯಿದ್ದಾರೆ. ಜೀವನ ಸಾಗಿಸಲು ಅಡ್ಡದಾರಿ ಸಹ ಹಿಡಿಯಲು ಮುಂದಾಗಿದ್ದಾರೆ. ಆದರೆ, ಈ ನಡುವೆ ರಸ್ತೆಯಲ್ಲಿ ಬಿದ್ದಿದ್ದ ದುಬಾರಿ iPhoneನ ಅದರ ಮಾಲೀಕನಿಗೆ ಹಿಂದಿರುಗಿಸುವ ಮೂಲಕ ಕಾರ್ಮಿಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.
ಸಂತೋಷ್ ಎಂಬುವವರು ಗಿರಿನಗರದ ಬಳಿ ತಮ್ಮ iPhone ಬೀಳಿಸಿಕೊಂಡು ಹೋಗಿದ್ರು. ಇದೇ ವೇಳೆ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಕಾರ್ಮಿಕ ಲಕ್ಷ್ಮಣನ ಕಣ್ಣಿಗೆ ಅನಾಥವಾಗಿ ಬಿದ್ದಿದ್ದ iPhone ಕಂಡುಬಂತು. ಕೂಡಲೇ ಅದನ್ನು ತೆಗೆದುಕೊಂಡು ಗಿರಿನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾನೆ.
ಇನ್ನು ಸಂತೋಷ್ರನ್ನ ಪತ್ತೆಹಚ್ಚಿದ ಪೊಲೀಸರು ಆತನನ್ನ ಸಂಪರ್ಕಿಸಿ ಮೊಬೈಲ್ ಹಿಂದಿರುಗಿಸಿದ್ದಾರೆ. ಜೊತೆಗೆ, ಪ್ರಾಮಾಣಿಕತೆ ಮೆರೆದ ಲಕ್ಷ್ಮಣನಿಗೆ ಪೊಲೀಸರು ಸನ್ಮಾನಿಸಿದ್ದಾರೆ. ಒಟ್ನಲ್ಲಿ, ಮುತ್ತು ಒಡೆದರೆ ಹೋಯ್ತು ಬೆಂಗಳೂರಲ್ಲಿ ಮೊಬೈಲ್ ಮಿಸ್ ಆದರೆ ಹೋಯ್ತು ಎನ್ನುವ ಈ ಕಾಲಘಟ್ಟದಲ್ಲಿ ಕೈಗೆ ದುಬಾರಿ iPhone ಸಿಕ್ಕರೂ ಅದನ್ನ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಕಾರ್ಮಿಕ ಲಕ್ಷ್ಮಣ ನಿಜಕ್ಕೂ ಗ್ರೇಟ್.