Rapidly ಟೆಸ್ಟ್ಗೆ ಹೆದರಿ ಬೆದರಿ ಮನೆಗೋಡಿದ ವ್ಯಾಪಾರಿಗಳು! ಎಲ್ಲಿ?
ಹುಬ್ಬಳ್ಳಿ: ರ್ಯಾಪಿಡ್ ಆಂಟಿಜನ್ ಟೆಸ್ಟ್ಗೆ ವ್ಯಾಪಾರಸ್ಥರು ಹೆದರಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಲಗುಬಗೆಯಿಂದ ಮುಚ್ಚಿ ಮನೆಗೆ ಓಡಿಹೋದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ. ವಿಷಯವೇನೆಂದರೆ, ಹುಬ್ಬಳ್ಳಿಯ ದುರ್ಗದ್ ಬೈಲ್ ಮಾರುಕಟ್ಟೆ ಪ್ರದೇಶದಲ್ಲಿ ಧಾರವಾಡ ಜಿಲ್ಲಾಡಳಿತ ರ್ಯಾಪಿಡ್ ಆಂಟಿಜನ್ ಟೆಸ್ಟ್ ಪ್ರಕ್ರಿಯೆಯನ್ನು ಶುರುವಿಟ್ಟುಕೊಂಡಿತು. ಟೆಸ್ಟ್ಗಳನ್ನು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ನಾಲ್ಕೈದು ವ್ಯಾಪಾರಸ್ಥರ ಫಲಿತಾಂಶ ಕೊವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದು ಆ ಪ್ರದೇಶದಲ್ಲಿ ಅಂಗಡಿಗಳನ್ನಿಟ್ಟುಕೊಂಡಿರುವ ಇತರರಿಗೆ ಗಾಬರಿಯನ್ನುಂಟು ಮಾಡಿತು. ಆದೇ ಸಮಯಕ್ಕೆ ಪಾಸಿಟಿವ್ ಕಂಡುಬಂದ ವ್ಯಾಪಾರಿಗಳ ಅಂಗಡಿಗಳನ್ನು ಮುಚ್ಚಿಸಿದ ಅಧಿಕಾರಿಗಳು ಆಯಾ ಏರಿಯಾಗಳನ್ನು […]
ಹುಬ್ಬಳ್ಳಿ: ರ್ಯಾಪಿಡ್ ಆಂಟಿಜನ್ ಟೆಸ್ಟ್ಗೆ ವ್ಯಾಪಾರಸ್ಥರು ಹೆದರಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಲಗುಬಗೆಯಿಂದ ಮುಚ್ಚಿ ಮನೆಗೆ ಓಡಿಹೋದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.
ವಿಷಯವೇನೆಂದರೆ, ಹುಬ್ಬಳ್ಳಿಯ ದುರ್ಗದ್ ಬೈಲ್ ಮಾರುಕಟ್ಟೆ ಪ್ರದೇಶದಲ್ಲಿ ಧಾರವಾಡ ಜಿಲ್ಲಾಡಳಿತ ರ್ಯಾಪಿಡ್ ಆಂಟಿಜನ್ ಟೆಸ್ಟ್ ಪ್ರಕ್ರಿಯೆಯನ್ನು ಶುರುವಿಟ್ಟುಕೊಂಡಿತು. ಟೆಸ್ಟ್ಗಳನ್ನು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ನಾಲ್ಕೈದು ವ್ಯಾಪಾರಸ್ಥರ ಫಲಿತಾಂಶ ಕೊವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದು ಆ ಪ್ರದೇಶದಲ್ಲಿ ಅಂಗಡಿಗಳನ್ನಿಟ್ಟುಕೊಂಡಿರುವ ಇತರರಿಗೆ ಗಾಬರಿಯನ್ನುಂಟು ಮಾಡಿತು.
ಆದೇ ಸಮಯಕ್ಕೆ ಪಾಸಿಟಿವ್ ಕಂಡುಬಂದ ವ್ಯಾಪಾರಿಗಳ ಅಂಗಡಿಗಳನ್ನು ಮುಚ್ಚಿಸಿದ ಅಧಿಕಾರಿಗಳು ಆಯಾ ಏರಿಯಾಗಳನ್ನು ಲಾಕ್ಡೌನ್ ಸಹ ಮಾಡಿದರು. ಇದರಿಂದ ಮತ್ತಷ್ಟು ಭೀತಿಗೊಳಗಾದ ಉಳಿದ ವ್ಯಾಪಾರಿಗಳು ಟೆಸ್ಟ್ನಿಂದ ತಪ್ಪಿಸಿಕೊಳ್ಳಲು ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೋಡಿದರು.