AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಬ್ಬ ಅಜರುದ್ದೀನ್ ಎಂಟ್ರಿ.. ಕೇವಲ 37 ಎಸೆತಗಳಲ್ಲಿ ಬಾರಿಸಿದ್ದು ಬರೋಬ್ಬರಿ 100 ರನ್..!​

ಮೊಹಮ್ಮದ್ ಅಜರುದ್ದೀನ್ ತಮ್ಮ ಶತಕದ ಆಟದಲ್ಲಿ ಕೇವಲ ನಾಲ್ಕು ಡಾಟ್ ಬಾಲ್​ಗಳನ್ನು ಆಡಿ, ಒಂಬತ್ತು ಬೌಂಡರಿ ಮತ್ತು 11 ಸಿಕ್ಸರ್‌ಗಳ ಸಹಾಯದಿಂದ 54 ಎಸೆತಗಳಲ್ಲಿ ಅಜೇಯ 137 ರನ್ ಗಳಿಸಿದರು

ಮತ್ತೊಬ್ಬ ಅಜರುದ್ದೀನ್ ಎಂಟ್ರಿ.. ಕೇವಲ 37 ಎಸೆತಗಳಲ್ಲಿ ಬಾರಿಸಿದ್ದು ಬರೋಬ್ಬರಿ 100 ರನ್..!​
ಮೊಹಮ್ಮದ್ ಅಜರುದ್ದೀನ್
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Jan 15, 2021 | 3:17 PM

ಕೇರಳ ತಂಡದ ಆಟಗಾರ ಮೊಹಮ್ಮದ್ ಅಜರುದ್ದೀನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸ್ಫೋಟಕ ಇನ್ನಿಂಗ್ಸ್​ ಆಡಿ ಈಗ ಕ್ರಿಕೆಟ್​ ಜಗತ್ತಿನಲ್ಲಿ ಹೊಸ ಭರವಸೆ ಹುಟ್ಟು ಹಾಕಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಮುಂಬೈ ವಿರುದ್ಧ 37 ಎಸೆತಗಳಲ್ಲಿ ಶತಕ ಬಾರಿಸಿದರು.

ಶತಕದ ಆಟದಲ್ಲಿ ಕೇವಲ ನಾಲ್ಕು ಡಾಟ್ ಬಾಲ್​.. ರಿಷಭ್ ಪಂತ್ 2018 ರಲ್ಲಿ 32 ಎಸೆತಗಳಲ್ಲಿ ಶತಕ ಬಾರಿಸಿದ್ದರು. ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ನಂತರ ಭಾರತೀಯರಲ್ಲಿ ಅತಿ ವೇಗದ ಶತಕ ಗಳಿಸಿದವರ ಸಾಲಿಗೆ ಅಜರುದ್ದೀನ್ ಸೇರ್ಪಡೆಗೊಂಡರು. ಮೊಹಮ್ಮದ್ ಅಜರುದ್ದೀನ್ ತಮ್ಮ ಶತಕದ ಆಟದಲ್ಲಿ ಕೇವಲ ನಾಲ್ಕು ಡಾಟ್ ಬಾಲ್​ಗಳನ್ನು ಆಡಿದರು. 9 ಬೌಂಡರಿ ಮತ್ತು 11 ಸಿಕ್ಸರ್‌ಗಳ ಸಹಾಯದಿಂದ 54 ಎಸೆತಗಳಲ್ಲಿ ಅಜೇಯ 137 ರನ್ ಗಳಿಸಿದ ಅಜರುದ್ದೀನ್, ಕೇರಳ ಪರ ಟಿ 20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮೊದಲು 2013 ರಲ್ಲಿ ರೋಹನ್ ಪ್ರೇಮ್ ಅಜೇಯ 92 ರನ್ ಗಳಿಸಿರುವುದು ಕೇರಳದ ಗರಿಷ್ಠ ಸ್ಕೋರ್ ಆಗಿತ್ತು.

ಮೊಹಮ್ಮದ್ ಅಜರುದ್ದೀನ್ ಅವರ ಶತಕದ ನೆರವಿನಿಂದ ಕೇರಳ ತಂಡ 16 ನೇ ಓವರ್‌ನಲ್ಲಿ ಮುಂಬೈ ನೀಡಿದ 197 ರನ್​ಗಳ ಗುರಿ ತಲುಪಿತು. ಮೊಹಮ್ಮದ್ ಅಜರುದ್ದೀನ್ ಸಿಕ್ಸರ್ ಬಾರಿಸುವುದರ ಮೂಲಕ ತಂಡಕ್ಕೆ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ಇದಕ್ಕೂ ಮುನ್ನ ಮುಂಬೈ ಏಳು ವಿಕೆಟ್‌ಗಳಿಗೆ 196 ರನ್ ಗಳಿಸಿತ್ತು.

ಮುಂಬೈ ಪರ ಆದಿತ್ಯ ತಾರೆ (42) ಮತ್ತು ಯಶಸ್ವಿ ಜೈಸ್ವಾಲ್ (40) ಹೆಚ್ಚು ರನ್ ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ (38), ಶಿವಂ ದುಬೆ (26), ಸಿದ್ಧೇಶ್ ಲಾಡ್ (21) ಕೂಡ ವೇಗವಾಗಿ ರನ್ ಗಳಿಸಿದರು. ಕೇರಳ ತಂಡದ ವೇಗದ ಬೌಲರ್‌ಗಳಾದ ಕೆ.ಎಂ.ಆಸಿಫ್ (25/3) ಮತ್ತು ಜಲಾಜ್ ಸಕ್ಸೇನಾ (34/3) ಮುಂಬೈ ಬ್ಯಾಟ್ಸ್‌ಮನ್​ಗಳನ್ನ ಕಾಡುವಲ್ಲಿ ಯಶಸ್ವಿಯಾದರು.

ಮುಂಬೈ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ ಅಜರುದ್ದೀನ್.. ಮುಂಬೈನ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ 26 ವರ್ಷದ ಮೊಹಮ್ಮದ್ ಅಜರುದ್ದೀನ್, ರಾಬಿನ್ ಉತ್ತಪ್ಪ ಅವರೊಂದಿಗೆ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 129 ರನ್ ಸೇರಿಸಿದರು. ಇದರಲ್ಲಿ ಉತ್ತಪ್ಪ ಅವರ ಕೊಡುಗೆ ಕೇವಲ 33 ರನ್. ಉಳಿದ ರನ್ಗಳನ್ನು ಮೊಹಮ್ಮದ್ ಅಜರುದ್ದೀನ್ ಗಳಿಸಿದರು. ಮುಂಬೈನ ಎಲ್ಲಾ ಬೌಲರ್‌ಗಳನ್ನು ಕಾಡಿದ ಅಜರುದ್ದೀನ್, ತುಷಾರ್ ದೇಶಪಾಂಡೆಯನ್ನು ಇನ್ನಿಲ್ಲದಂತೆ ಕಾಡಿದರು. ದೇಶಪಾಂಡೆ ಎರಡು ಓವರ್‌ಗಳಲ್ಲಿ 43 ರನ್ ಹರಿದುಬಂತು.

ದೇಶಿ T20ಯಲ್ಲಿ ಅತಿ ಹೆಚ್ಚು ರನ್​ ಬಾರಿಸಿದ್ದವರಲ್ಲಿ ಅಜರ್​ಗೆ 3ನೇ ಸ್ಥಾನ.. ಮೊಹಮ್ಮದ್ ಅಜರುದ್ದೀನ್ ಅವರ ಅಜೇಯ 137 ರನ್​ಗಳ ಇನ್ನಿಂಗ್ಸ್, ದೇಶಿ T20ಯಲ್ಲಿ ಅತಿ ಹೆಚ್ಚು ರನ್​ ಬಾರಿಸಿದ್ದವರಲ್ಲಿ ಅಜರುದ್ದೀನ್ ಮೂರನೇಯವರೆನಿಸಿಕೊಳ್ಳುವಂತೆ ಮಾಡಿತು. ಮೊದಲನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಇದ್ದು, 2019 ರಲ್ಲಿ ಸಿಕ್ಕಿಂ ವಿರುದ್ಧ 147 ರನ್​ ಬಾರಿಸಿದ್ದರು. ನಂತರ 2021 ರ ಜನವರಿ 13 ರಂದು ಮಿಜೋರಾಂ ವಿರುದ್ಧ 146 ರನ್ ಪುನೀತ್ ಬಿಶ್ತ್ ಬ್ಯಾಟ್​ನಿಂದ ಬಂದಿತ್ತು. ನಂತರದ ಸ್ಥಾನವನ್ನು ಈಗ ಅಜರುದ್ದೀನ್ ತುಂಬಿದ್ದಾರೆ. ಅಜರ್​ ನಂತರ, ಕೆ.ಎಲ್ ರಾಹುಲ್ (132 ನಾಟ್ ಔಟ್) ಮತ್ತು ಮನೀಶ್ ಪಾಂಡೆ (129 ನಾಟ್ ಔಟ್) ನಂತರದ ಸ್ಥಾನದಲ್ಲಿದ್ದಾರೆ.

ಮತ್ತೆ ಹಳೆ ಚಾಳಿ ಮುಂದುವರೆಸಿದ ಶ್ರೀಶಾಂತ್.. ಇದಕ್ಕೆ 19ರ ಪೋರನ ಉತ್ತರ ಹೇಗಿತ್ತು? ವಿಡಿಯೋ ನೋಡಿ..