
ಮೈಸೂರು: ದೀಪಗಳ ಹಬ್ಬದ ಪ್ರಯುಕ್ತವಾಗಿ ಮೈಸೂರು ಒಡೆಯರ್ ರಾಜಮನೆತನದ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.
ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರವನ್ನ ಒಳಗೊಂಡಿರುವ ದೀಪಾಲಂಕಾರದ ಫೋಟೋವನ್ನು ಪ್ರಮೋದಾ ದೇವಿ ಒಡೆಯರ್ ಹಂಚಿಕೊಂಡಿದ್ದಾರೆ.