ಶಾಸಕರ ಮನೆ ಆವರಣದಲ್ಲಿದ್ದ ಗಂಧದ ಮರಕ್ಕೇ ಕೊಡಲಿ ಹಾಕುವ ಯತ್ನ
ವಿಜಯಪುರ: ಶಾಸಕರ ಮನೆ ಆವರಣದಲ್ಲಿದ್ದ ಗಂಧದ ಮರ ಕಳ್ಳತನಕ್ಕೆ ಯತ್ನ ನಡೆದಿದೆ. ಜಿಲ್ಲೆಯ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಮನೆಯಲ್ಲಿ ಮರಗಳ್ಳತನದ ಯತ್ನ ನಡೆದಿದೆ. ವಿಜಯಪುರದ ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಖದೀಮರು ಇಂದು ನಸುಕಿನ ಜಾವ ಗಂಧದ ಮರ ಕಳ್ಳತನಕ್ಕೆ ಯತ್ನಿಸಿದ್ದಾರೆ. ಗಂಧದ ಮರವನ್ನು ಬುಡಸಮೇತ ಕತ್ತರಿಸಲು ಮುಂದಾದರು. ಆದರೆ, ಮರ ಕಡಿಯುತ್ತಿದ್ದ ವೇಳೆ ಮನೆಯಲ್ಲಿದ್ದವರು ಎಚ್ಚೆತ್ತ ಹಿನ್ನೆಲೆಯಲ್ಲಿ ಕಳ್ಳರು ಸ್ಥಳದಲ್ಲೇ ಗಂಧದ ಮರಬಿಟ್ಟು ಪರಾರಿಯಾಗಿದ್ದಾರೆ.

ವಿಜಯಪುರ: ಶಾಸಕರ ಮನೆ ಆವರಣದಲ್ಲಿದ್ದ ಗಂಧದ ಮರ ಕಳ್ಳತನಕ್ಕೆ ಯತ್ನ ನಡೆದಿದೆ. ಜಿಲ್ಲೆಯ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಮನೆಯಲ್ಲಿ ಮರಗಳ್ಳತನದ ಯತ್ನ ನಡೆದಿದೆ.
ವಿಜಯಪುರದ ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಖದೀಮರು ಇಂದು ನಸುಕಿನ ಜಾವ ಗಂಧದ ಮರ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಗಂಧದ ಮರವನ್ನು ಬುಡಸಮೇತ ಕತ್ತರಿಸಲು ಮುಂದಾದರು. ಆದರೆ, ಮರ ಕಡಿಯುತ್ತಿದ್ದ ವೇಳೆ ಮನೆಯಲ್ಲಿದ್ದವರು ಎಚ್ಚೆತ್ತ ಹಿನ್ನೆಲೆಯಲ್ಲಿ ಕಳ್ಳರು ಸ್ಥಳದಲ್ಲೇ ಗಂಧದ ಮರಬಿಟ್ಟು ಪರಾರಿಯಾಗಿದ್ದಾರೆ.



