Prashanth Sambargi Profile: ಸದಾ ವಿವಾದಗಳ ಬೆನ್ನತ್ತುವ ಪ್ರಶಾಂತ್ ಸಂಬರಗಿ ಈ ಬಾರಿಯ ಬಿಗ್​ಬಾಸ್​ ಸ್ಪರ್ಧಿ

Bigg Boss Kannada Season 8, Prashanth Sambargi Profile: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದ ಬಗ್ಗೆ ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಸಂಬರಗಿ, ಈಗ ಬಿಗ್​ಬಾಸ್ ಮನೆಗೆ ಹೋಗಿ ಮತ್ತ್ಯಾವ ವಿವಾದ ಸೃಷ್ಟಿಸುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದು ಕುಳಿತ್ತಿದ್ದಾರೆ.

Prashanth Sambargi Profile: ಸದಾ ವಿವಾದಗಳ ಬೆನ್ನತ್ತುವ ಪ್ರಶಾಂತ್ ಸಂಬರಗಿ ಈ ಬಾರಿಯ ಬಿಗ್​ಬಾಸ್​ ಸ್ಪರ್ಧಿ
ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆ ಪ್ರವೇಶ
Follow us
ಪೃಥ್ವಿಶಂಕರ
| Updated By: ganapathi bhat

Updated on: Feb 28, 2021 | 10:11 PM

ಈ ಬಾರಿಯ ಕನ್ನಡ ಬಿಗ್​ಬಾಸ್​ಗೆ ಹೋಗುವ ಸೆಲೆಬ್ರೆಟಿಸ್​ಗಳ ಪಟ್ಟಿಯಲ್ಲಿ ಎದ್ದು ಕಾಣುತ್ತಿರುವ ಹೆಸರೆಂದರೆ ಅದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದ ಬಗ್ಗೆ ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಸಂಬರಗಿ, ಈಗ ಬಿಗ್​ಬಾಸ್ ಮನೆಗೆ ಹೋಗಿ ಮತ್ತ್ಯಾವ ವಿವಾದ ಸೃಷ್ಟಿಸುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದು ಕುಳಿತ್ತಿದ್ದಾರೆ. ಮೂಲತಃ ಬೆಳಗಾವಿಯವರಾಗಿರುವ ಸಂಬರಗಿ, ಬೆಳೆದಿದ್ದು ಬೆಂಗಳೂರಿನಲ್ಲಿ. ಪ್ರಶಾಂತ್ ಉದ್ಯಮಿ ಆಗಿದ್ದು, ಅರ್ಜುನ್ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೆ ಡಬ್ಬಿಂಗ್ ಪರ ಹೋರಾಡಿದವರಲ್ಲಿ ಪ್ರಶಾಂತ್ ಕೂಡ ಪ್ರಮುಖರು. ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಸೀಸನ್ 8ರ 14ನೇ ಅಭ್ಯರ್ಥಿಯಾಗಿ ಮನೆ ಪ್ರವೇಶಿಸಿದ್ದಾರೆ.

ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಪ್ರಶಾಂತ್ ವಿರುದ್ಧ ವಾಗ್ಸಮರ ಕೂಡ ನಡೆದಿತ್ತು. ಡಬ್ಬಿಂಗ್​ಗೆ ಅವಕಾಶ ನೀಡದ ಕಾರಣಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.

ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ.. ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣದ ಸುದ್ದಿಗಳು ಪ್ರಸಾರವಾಗುತ್ತಿರುವಾಗ ಪದೇ ಪದೇ ಕೇಳಿ ಬರುವ ಹೆಸರು ಪ್ರಶಾಂತ್ ಸಂಬರಗಿ. ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೆಸರು ಪ್ರತಿದಿನ ಸಾಮಾಜಿಕ ಜಾಲತಾಣ, ಸುದ್ದಿ ವಾಹಿನಿಗಳ ಮೂಲಕ ಜನರಿಗೆ ಚಿರಪರಿಚಿತವಾಗಿದೆ. ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿ ಸಂಜನಾ, ರಾಗಿಣಿಯನ್ನು ಸಂಬರಗಿ ಇನ್ನಿಲ್ಲದಂತೆ ಕಾಡಿದ್ದರು. ನಟಿ ಸಂಜನಾ ಹಾಗೂ ಸಂಬರಗಿ ನಡುವಿನ ಕೋಳಿ ಜಗಳ ತಾರಕಕ್ಕೇರಿ, ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್​ ಆಗಿತ್ತು.

ಈ ಘಟನೆಗೂ ಮುನ್ನ ನಟಿ ಶೃತಿ ಹರಿಹರನ್​, ನಟ ಅರ್ಜುನ್​ ಸರ್ಜಾ ವಿರುದ್ಧ ಆರೋಪಿಸಿದ್ದ ಮೀಟೂ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಬಾರಿ ಚರ್ಚೆಯಲ್ಲಿದ್ದವರು ಪ್ರಶಾಂತ್​ ಸಂಬರಗಿ. ಅಲ್ಲದೆ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿ ಕುಸುಮಾ (ಮೃತ ಜಿಲ್ಲಾಧಿಕಾರಿ ಡಿ.ಕೆ ರವಿ ಪತ್ನಿ) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್​ ಹಾಕಿದ್ದ ಸಂಬರಗಿ, ಸಾರ್ವಜನಿಕ ವಲಯದ ಕೆಂಗಣ್ಣಿಗೆ ಗುರಿಯಾಗಿದ್ದರು.

ಹೀಗೆ ಪದೇ ಪದೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡು, ಸಾರ್ವಜನಿಕವಾಗಿ ಪ್ರಶ್ನೆಗಳು ಉದ್ಭವಿಸಿದಾಗ, ಸಂಬರಿಗೆ ಅವರೆ ತಾನೂ ಯಾರೆಂಬುದನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಪ್ರಶಾಂತ್​ ಸಂಬರಗಿಯೇ ಹೇಳಿರುವಂತೆ ಚಿತ್ರೋದ್ಯಮದ ಜೊತೆಗೆ ನನ್ನದು ಹಳೆಯ ನಂಟು, ಚಿತ್ರೋದ್ಯಮದಲ್ಲಿ ವಿತರಕನಾಗಿ, ಬ್ರಾಂಡ್ ಬಿಲ್ಡರ್ ಆಗಿ, ಜಾಹೀರಾತು ತಂತ್ರಜ್ಞನಾಗಿ ಕೆಲಸ ಮಾಡಿದ್ದೇನೆ ಎಂದ ಸಂಬರಗಿ ಚಿತ್ರೋದ್ಯಮದೊಂದಿಗೆ ತಮ್ಮ ನಂಟನ್ನು ಬಹು ವಿಸ್ತಾರವಾಗಿಯೇ ಹೇಳಿದರು.

ಸುದೀಪ್, ಉಪೇಂದ್ರ ಜೊತೆಗೆ ಕೆಲಸ ಸುದೀಪ್ ಜೊತೆಗೆ ಸಾಹಸಮಯ ಜಾಹೀರಾತು ಮಾಡಿದ್ದು, ಉಪೇಂದ್ರ ಅವರನ್ನು ಬಿಗ್‌ ಎಫ್‌ಎಂ ಗೆ ರಾಯಭಾರಿ ಮಾಡಿದ್ದು, ಉಪೇಂದ್ರ ಕೈಯಲ್ಲಿ ರೆಡಿಯೋಗೆ ಕಾರ್ಯಕ್ರಮ ಮಾಡಿಸಿದ್ದು ಇವುಗಳ ಮೂಲಕ ಚಿತ್ರೋದ್ಯಮದ ನಂಟು ಸಂಬರಗಿಗೆ ಆರಂಭದಲ್ಲಿಯಾಯಿತು. ನಂತರ ರಿಲಯನ್ಸ್ ಸಂಸ್ಥೆಗೆ ಸೇರಿಕೊಂಡ ಪ್ರಶಾಂತ್ ಸಂಬರಗಿ, ರಿಲಯನ್ಸ್‌ನ ಮನೊರಂಜನಾ ವಿಭಾಗ ನಿರ್ಮಿಸುವ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಕಾರ್ಯವನ್ನು ಮಾಡಿದ್ದಾರೆ. ಕೈಟ್ಸ್, ಸಿಂಗಂ, ರಾವಣ್ ಹೀಗೆ ಹಲವು ಸಿನಿಮಾಗಳ ವಿತರಣೆಯನ್ನು ಪ್ರಶಾಂತ್ ಸಂಬರಗಿ ಮಾಡಿದ್ದಾರೆ.

ಬೇರೆ ವ್ಯವಹಾರಗಳಲ್ಲಿಯೂ ತೊಡಗಿಕೊಂಡಿದ್ದೇನೆ: ಸಂಬರಗಿ ನಾನು ಬೇರೆ ಕೆಲವು ವ್ಯವಹಾರಗಳಲ್ಲಿಯೂ ತೊಡಗಿಕೊಂಡಿದ್ದೇನೆ. ನಾನು ಬಿಲ್ಡರ್ ಸಹ ಹೌದು, ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತೇನೆ ಜೊತೆಗೆ ಸಿನಿಮಾ ಉದ್ಯಮದಲ್ಲಿಯೂ ನಾನು ಹಣ ಹೂಡಿದ್ದೇನೆ. ಕೆಲವು ಸಿನಿಮಾಗಳನ್ನು ನೇರ ವಿತರಣೆ ಮಾಡಿದ್ದೇನೆ ಎಂದಿದ್ದಾರೆ ಪ್ರಶಾಂತ್ ಸಂಬರಗಿ.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: 14ನೇ ಸ್ಪರ್ಧಿಯಾಗಿ ಪ್ರಶಾಂತ್​ ಸಂಬರ್ಗಿ​ ಬಿಗ್​ ಬಾಸ್​ ಮನೆಗೆ ಎಂಟ್ರಿ

Raghu Gowda Profile: ಯೂಟ್ಯೂಬ್​​ನಲ್ಲಿ ಚಿತಾಲ್​-ಪತಾಲ್​ ಮಾಡಿದ ರಘು ಗೌಡ ಈಗ ಬಿಗ್​ ಬಾಸ್​ ಮನೆಗೆ