ಬೆಂಗಳೂರಿನಲ್ಲಿ ಕೇಳಿ ಬಂತು ಭಾರೀ ಪ್ರಮಾಣದ ನಿಗೂಢ ಶಬ್ದ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 1.20ರ ಸುಮಾರಿಗೆ ಭಾರಿ ಪ್ರಮಾಣದ ನಿಗೂಢ ಶಬ್ದ ಕೇಳಿಸಿದೆ. ಈ ಶಬ್ದದಿಂದ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ವೈಟ್‌ಫೀಲ್ಡ್, ಇಂದಿರಾನಗರ, ಕೆ.ಆರ್.ಪುರಂ, ಟಿನ್‌ಫ್ಯಾಕ್ಟರಿ, HSR ಲೇಔಟ್, ಬೊಮ್ಮಸಂದ್ರ, ಜಯನಗರ, ಜೆಪಿ ನಗರ ಸೇರಿದಂತೆ ಅರ್ಧ ಬೆಂಗಳೂರಿಗೆ ನಿಗೂಢ ಶಬ್ದ ಕೇಳಿಸಿದೆ. ಶಬ್ದ ಕೇಳಿಸಿಕೊಂಡ ಜನ ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ಶಬ್ದ ಎಲ್ಲಿಂದ ಬಂತು ಎಂಬುವುದರ ಬಗ್ಗೆ ವಿಪತ್ತು ನಿರ್ವಹಣಾ ಕೇಂದ್ರ ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಭೂಕಂಪನದ ಅನುಭವ […]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 1.20ರ ಸುಮಾರಿಗೆ ಭಾರಿ ಪ್ರಮಾಣದ ನಿಗೂಢ ಶಬ್ದ ಕೇಳಿಸಿದೆ. ಈ ಶಬ್ದದಿಂದ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ವೈಟ್‌ಫೀಲ್ಡ್, ಇಂದಿರಾನಗರ, ಕೆ.ಆರ್.ಪುರಂ, ಟಿನ್‌ಫ್ಯಾಕ್ಟರಿ, HSR ಲೇಔಟ್, ಬೊಮ್ಮಸಂದ್ರ, ಜಯನಗರ, ಜೆಪಿ ನಗರ ಸೇರಿದಂತೆ ಅರ್ಧ ಬೆಂಗಳೂರಿಗೆ ನಿಗೂಢ ಶಬ್ದ ಕೇಳಿಸಿದೆ.
ಶಬ್ದ ಕೇಳಿಸಿಕೊಂಡ ಜನ ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ಶಬ್ದ ಎಲ್ಲಿಂದ ಬಂತು ಎಂಬುವುದರ ಬಗ್ಗೆ ವಿಪತ್ತು ನಿರ್ವಹಣಾ ಕೇಂದ್ರ ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಭೂಕಂಪನದ ಅನುಭವ ಆಗಿಲ್ಲ: ಬೆಂಗಳೂರಿನಲ್ಲಿ ಯಾವುದೇ ರೀತಿಯ ಭೂಕಂಪನದ ಅನುಭವ ಆಗಿಲ್ಲ. ರಿಕ್ಟರ್ ಮಾಪಕದಲ್ಲಿ ಯಾವುದೇ ರೀತಿ ಪ್ರಮಾಣ ದಾಖಲಾಗಿಲ್ಲ. ನಮಗೆ ಹಲವು ದೂರವಾಣಿ ಕರೆಗಳು ಬರುತ್ತಿವೆ. ಆದ್ರೇ ಏನಾಗಿದೆ ಅನ್ನೋದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸ್ಥಳೀಯವಾಗಿ ಬ್ಲಾಸ್ಟಿಂಗ್ ಏನಾದ್ರೂ ಆಗಿದ್ಯಾ ಅನ್ನೋದನ್ನ ನೋಡಬೇಕು. ಸಾಮಾನ್ಯವಾಗಿ ಬ್ಲಾಸ್ಟಿಂಗ್‌ನಲ್ಲಿ ಈ ಮಟ್ಟಿಗಿನ ಭಾರೀ ಶಬ್ಧ ಬರಲ್ಲ. ಹೆಚ್ಚು ಶಬ್ದ ಬಂದಿರುವ ಹಿನ್ನೆಲೆಯಲ್ಲಿ ಏನು ಅನ್ನೋದನ್ನ ಪತ್ತೆ ಹಚ್ಚಬೇಕಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ಟಿವಿ9ಗೆ ಮಾಹಿತಿ ನೀಡಿದ್ದಾರೆ.
Published On - 2:05 pm, Wed, 20 May 20