AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಯಾರು ಎಂಬ ಸತ್ಯ ಸೀತಾಳಿಗೆ ತಿಳಿದು ಹೋಗುತ್ತಾ? ಪೊಲೀಸರಿಂದ ಗೊತ್ತಾಗುತ್ತೆ ಅಸಲಿ ವಿಚಾರ?

Seetha Raama: ಸಿಹಿಗೆ ಕಥೆ ಹೇಳಿ ಅವಳನ್ನು ಮಲಗಿಸಿ ಮನೆಗೆ ಹೊರಡುವಷ್ಟರಲ್ಲಿ ಬಾಗಿಲ ಮುಂದೆ ಪೊಲೀಸರು ಬಂದು ನಿಂತಿರುವುದು ರಾಮನಿಗೆ ಕಾಣುತ್ತದೆ. ಭಾರ್ಗವಿ ರಾಮ್​ನನ್ನು ಹುಡುಕಲು ಪೊಲೀಸರನ್ನು ಕಳುಹಿಸಿರುತ್ತಾಳೆ. ತನ್ನನ್ನೇ ಹುಡುಕಿ ಪೊಲೀಸರು ಬಂದಿದ್ದಾರೆ ಎಂದು ತಿಳಿದ ರಾಮ್, ತನ್ನ ವಿಚಾರ ಸೀತಾಳಿಗೆ ತಿಳಿದರೆ ಎಂಬ ಭಯದಿಂದ ನಡುಗಿ ಹೋಗುತ್ತಾನೆ.  

ರಾಮ್ ಯಾರು ಎಂಬ ಸತ್ಯ ಸೀತಾಳಿಗೆ ತಿಳಿದು ಹೋಗುತ್ತಾ? ಪೊಲೀಸರಿಂದ ಗೊತ್ತಾಗುತ್ತೆ ಅಸಲಿ ವಿಚಾರ?
ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Oct 05, 2023 | 8:03 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 60: ದಿನಪೂರ್ತಿ ರಾಮನ ಜೊತೆಗೆ ಸಮಯ ಕಳೆದ ಸಿಹಿ, ಅವನು ತೋರಿಸುವ ಪ್ರೀತಿ ನೋಡಿ ರಾಮನನ್ನು ದೇವರಂತೆ ಕಾಣುತ್ತಾಳೆ. ಸಿಹಿಯ ಮಾತುಗಳನ್ನು ಕೇಳಿದ ರಾಮನಿಗೆ ಏನು ಹೇಳಬೇಕು ಎಂದು ತಿಳಿಯದೇ ಅವಳನ್ನು ಪ್ರೀತಿಯಿಂದ ಮುದ್ದಾಡುತ್ತಾನೆ. ರೆಸ್ಟ್ ಮಾಡಿ ಬಂದ ಸೀತಾ, ರೂಮಿನಿಂದ ಬರುವಾಗ ಎಡವುತ್ತಾಳೆ. ಹೆದರಿದ ರಾಮ್ ಆ್ಯಂಬುಲೆನ್ಸ್​ಗೆ ಫೋನ್ ಮಾಡುತ್ತಾನೆ. ನಿಮಗೆ ವಿಳಾಸ ತಿಳಿಸುತ್ತೇನೆ ಎನ್ನುವುದರಲ್ಲಿ ಸೀತಾ ಬೇಡ ಎನ್ನುತ್ತಾಳೆ. ಆದರೂ ಪಟ್ಟು ಬಿಡದ ರಾಮ್ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಾನೆ.

ಆ್ಯಂಬುಲೆನ್ಸ್ ಅವರು ರಾಮ್ ಮನೆಗೆ ಫೋನ್ ಮಾಡಿ, ಆ್ಯಂಬುಲೆನ್ಸ್ ಬೇಕು ಎಂದು ರಾಮ್ ಕರೆ ಮಾಡಿದ್ದರು ಎಂಬ ವಿಷಯವನ್ನು ತಿಳಿಸುತ್ತಾರೆ. ಮನೆಯವರು ಆ ಮಾತನ್ನು ಕೇಳಿ ಹೆದರುತ್ತಾರೆ. ಅದರಲ್ಲಿಯೂ ತಾತಾ ತನ್ನ ಮೊಮ್ಮಗನಿಗೆ ಏನಾಗಿರಬಹುದು ಎಂದು ಚಿಂತೆ ಮಾಡಲು ಶುರು ಮಾಡುತ್ತಾನೆ. ಮಾವನನ್ನು ಸಮಾಧಾನ ಪಡಿಸುವಂತೆ ಭಾರ್ಗವಿ ನಾಟಕವಾಡುತ್ತಾಳೆ.

ರಾಮ್ ಚಿಕ್ಕಪ್ಪ ಸತ್ಯ, ಭಾರ್ಗವಿಯೇ ರಾಮನಿಗೆ ಏನೋ ಮಾಡಿದ್ದಾಳೆ ಎಂದು ಹೆದರಿ ಆಕೆಯನ್ನು ಗದರಲು ಬರುತ್ತಾನೆ. ಆದರೆ ಅವಳು ಅವನನ್ನೇ ಹೆದರಿಸಿ ಕಳುಹಿಸುತ್ತಾಳೆ. ಬಳಿಕ ಅಶೋಕ್​ಗೆ ಕಾಲ್ ಮಾಡಿ ರಾಮ್ ಎಲ್ಲಿದ್ದಾನೆ ಎಂದು ಕೇಳುತ್ತಾಳೆ. ಅವನಿಗೆ ರಾಮ್, ಮನೆಯಲ್ಲೂ ಇಲ್ಲ, ಆಫೀಸ್ ನಲ್ಲಿಯೂ ಇಲ್ಲ ಎಂಬುದನ್ನು ಕೇಳಿ ಚಿಂತೆಯಾಗುತ್ತದೆ. ಆದರೆ ಸತ್ಯ ಏನು ಎಂದು ಗೊತ್ತಿಲ್ಲದಿದ್ದರೂ ರಾಮ್ ಮನೆಗೆ ಬರುವುದು ತಡವಾಗುತ್ತದೆ ಎನ್ನುತ್ತಾನೆ.

ಇದನ್ನೂ ಓದಿ: ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?

ಇನ್ನು ಸಿಹಿ ತನ್ನ ಮನೆಯಲ್ಲಿಯೇ ಇರು ಎಂದರೂ ರಾಮ್ ತಾನು ಮನೆಗೆ ಹೊರಡುತ್ತೇನೆ ಎಂದು ಸಿದ್ಧವಾಗುತ್ತಾನೆ. ಆಗ ಸೀತಾ ಆಸ್ಪತ್ರೆಗೆ ಕೊಟ್ಟ ಹಣವನ್ನು ಕೊಡುತ್ತೇನೆ ಎಂದು ಬ್ಲಾಂಕ್ ಚೆಕ್ ಬರೆದು ರಾಮ್ ಬೇಡ ಬೇಡ ಎಂದರೂ ಕೊಡುತ್ತಾಳೆ. ಅಂತೂ ಇಂತೂ ಸಿಹಿಗೆ ಕಥೆ ಹೇಳಿ ಅವಳನ್ನು ಮಲಗಿಸಿ ಮನೆಗೆ ಹೊರಡುವಷ್ಟರಲ್ಲಿ ಬಾಗಿಲ ಮುಂದೆ ಪೊಲೀಸರು ಬಂದು ನಿಂತಿರುವುದು ಕಾಣುತ್ತದೆ. ಭಾರ್ಗವಿ ರಾಮ್ ನನ್ನು ಹುಡುಕಲು ಪೊಲೀಸರನ್ನು ಕಳುಹಿಸಿರುತ್ತಾಳೆ. ತನ್ನನ್ನೇ ಹುಡುಕಿ ಪೊಲೀಸರು ಬಂದಿದ್ದಾರೆ ಎಂದು ತಿಳಿದ ರಾಮ್, ತನ್ನ ವಿಚಾರ ಸೀತಾಳಿಗೆ ತಿಳಿದರೇ ಎಂಬ ಭಯದಿಂದ ನಡುಗಿ ಹೋಗುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:02 am, Thu, 5 October 23

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು