ಭಾರತದ ಪರ ಬಿಳಿ ಉಡುಪು ಧರಿಸಿದ 301ನೇ ಆಟಗಾರರ ವಾಷಿಂಗ್ಟನ್ ಸುಂದರ್..! ಅಷ್ಟೂ ಟೆಸ್ಟ್​ ಆಟಗಾರರ ಪಟ್ಟಿ ಇಲ್ಲಿದೆ

ವಿಶೇಷವೆಂದರೆ ನಟರಾಜನ್ ಟೀಂ ಇಂಡಿಯಾಕ್ಕೆ ಬಿಳಿ ಬಟ್ಟೆ ತೊಟ್ಟು ಆಡುತ್ತಿರುವ 300 ನೇ ಟೆಸ್ಟ್ ಆಟಗಾರನಾಗಿದ್ದರೆ, ಟೆಸ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 301 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸುಂದರ್ ಪಾತ್ರರಾಗಿದ್ದಾರೆ.

  • TV9 Web Team
  • Published On - 10:43 AM, 15 Jan 2021
ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್

ಬ್ರಿಸ್ಬೇನ್‌: ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಈಗಾಗಲೇ ಪ್ರಾರಂಭವಾಗಿದೆ. ವಿಶೇಷವೆಂದರೆ ಟೆಸ್ಟ್​ ಆರಂಭಕ್ಕೂ ಒಂದು ದಿನ ಮುಂಚೆ ತಂಡವನ್ನು ಪ್ರಕಟಿಸುತ್ತಿದ್ದ ಟೀಂ ಇಂಡಿಯಾ, ಈ ಪಂದ್ಯದಲ್ಲಿ ಟಾಸ್ ಸಮಯದಲ್ಲಿ ಆಡುವ ಹನ್ನೊಂದರ ಬಳಗವನ್ನು ಘೋಷಿಸಿತು.

ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್​ಗೆ ಚೊಚ್ಚಲ ಟೆಸ್ಟ್ ಪಂದ್ಯಗಳನ್ನ ಆಡಲು ಗ್ರೀನ್​ ಸಿಗ್ನಲ್​ ನೀಡಲಾಗಿದೆ. ವಾಡಿಕೆಯಂತೆ ಪಂದ್ಯ ಆರಂಭಕ್ಕೆ ಒಂದು ದಿನ ಮೊದಲು ತಂಡವನ್ನ ಘೋಷಣೆ ಮಾಡಲಾಗುತ್ತದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬದಲಾವಣೆ ಮಾಡಿದ್ದು, ಟಾಸ್​ ಬಳಿಕ ಹನ್ನೊಂದು ಆಟಗಾರರ ಲಿಸ್ಟ್​ ಬಿಡುಗಡೆ ಮಾಡಿತು.

ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಆಟಗಾರರು ಬಳಲುತ್ತಿದ್ದು, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಹನುಮಾ ವಿಹಾರಿ ಅವರು ಸರಣಿಯ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಟಿ ನಟರಾಜನ್ ಮತ್ತು ಮಾಯಾಂಕ್ ಅಗರ್ವಾಲ್ ಗಾಯಗೊಂಡವರ ಬದಲಿಗೆ ಮೈದಾನಕ್ಕಿಳಿದಿದ್ದಾರೆ.

ಸರಣಿಯಾದ್ಯಂತದ ಗಾಯಗಳಿಂದಾಗಿ ಟೀಮ್ ಇಂಡಿಯಾ ಹಲವಾರು ಹಿನ್ನಡೆ ಅನುಭವಿಸಿತು. ಗಾಯಗಳಿಂದಾಗಿ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯನ್ನು ಈ ತಂಡ ಈಗಾಗಲೇ ಅನುಭವಿಸಿದೆ. ಇದಲ್ಲದೆ, ನಾಯಕ ವಿರಾಟ್ ಕೊಹ್ಲಿ ಕೂಡ ಪಿತೃತ್ವ ರಜೆಯೊಂದಿಗೆ ಮೊದಲ ಟೆಸ್ಟ್ ನಂತರ ಭಾರತಕ್ಕೆ ವಾಪಾಸ್ಸಾಗಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ತಂಡವು ಆತಿಥೇಯರನ್ನು 8 ವಿಕೆಟ್‌ಗಳಿಂದ ಸೋಲಿಸಿದ ಕಾರಣ, ಮೊದಲ ಟೆಸ್ಟ್‌ನ ಹೀನಾಯ ಸೋಲನ್ನು ಮರೆಯುವಂತೆ ಮಾಡಿತು. ಆದರೆ ಸಿಡ್ನಿ ಟೆಸ್ಟನ್ನು ಡ್ರಾ ಮಾಡಿಕೊಳ್ಳಲ್ಲಷ್ಟೇ ತಂಡ ಶಕ್ತವಾಯಿತು. ಆದರಿಂದ 4 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು ತಲಾ ಒಂದೊಂದು ಪಂದ್ಯವನ್ನ ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ ಇಂದಿನ ಪಂದ್ಯ ಎರಡು ತಂಡಗಳಿಗೂ ಬಹುಮುಖ್ಯವಾಗಿದೆ.

ಟಿ.ನಟರಾಜನ್​ ಹಾಗೂ ವಾಷಿಂಗ್ಟನ್ ಸುಂದರ್​ ಟೆಸ್ಟ್​ಗೆ ಪಾದಾರ್ಪಣೆ..
ಆಸಿಸ್​ ಪ್ರವಾಸದಲ್ಲಿ ಟೀಂ ಇಂಡಿಯಾದ ಬಹಳಷ್ಟು ಆಟಗಾರರು ಗಾಯದ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಹೀಗಾಗಿ ಬಯಸದೆ ಬಂದ ಭಾಗ್ಯವೆಂಬಂತೆ ಟಿ ನಟರಾಜನ್​ ಹಾಗೂ ವಾಷಿಂಗ್ಟನ್ ಸುಂದರ್​ ತಮ್ಮ ಮೊದಲ ಅಂತರಾಷ್ಟೀಯ ಟೆಸ್ಟ್​ ಪಂದ್ಯವನ್ನ ಇಂದು ಆಡುತ್ತಿದ್ದಾರೆ. ವಿಶೇಷವೆಂದರೆ ನಟರಾಜನ್ ಟೀಂ ಇಂಡಿಯಾಕ್ಕೆ ಬಿಳಿ ಬಟ್ಟೆ ತೊಟ್ಟು ಆಡುತ್ತಿರುವ 300 ನೇ ಟೆಸ್ಟ್ ಆಟಗಾರನಾಗಿದ್ದರೆ, ಟೆಸ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 301 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸುಂದರ್ ಪಾತ್ರರಾಗಿದ್ದಾರೆ.

301 ಭಾರತದ ಟೆಸ್ಟ್​ ಆಟಗಾರರ ಸಂಪೂರ್ಣ ವಿವರಕ್ಕಾಗಿ ಈ ಲಿಂಕ್​ ಒತ್ತಿ..