ಮನುಷ್ಯನ ಸಂಕೀರ್ಣತೆಯನ್ನು ಆಧರಿಸಿದ ಕಥಾವಸ್ತು ರಂಗಭೂಮಿಗೆ ಬೇಕಿದೆ: ಎಸ್​.ಎನ್.ಸೇತುರಾಮ್

‘ಸಿದ್ಧಾಂತ ಆಧಾರಿತ ಕಥಾವಸ್ತುವಿನಿಂದ ರಂಗಭೂಮಿಗೆ ಏಳಿಗೆ ಇಲ್ಲ. ಹಾಗಾಗಿ ನಾಟಕದ ಕಥಾವಸ್ತುಗಳಲ್ಲಿ ಪರಿಷ್ಕರಣೆಯಾಗುವ ತುರ್ತು ಅವಶ್ಯಕತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸದ್ಯದ ಕೊರೋನಾಕ್ಕೂ ಸ್ಥಗಿತಗೊಂಡ ರಂಗಭೂಮಿಗೂ ಸಂಬಂಧವೇ ಇಲ್ಲ’ ಎಂದು ರಂಗಕರ್ಮಿ, ಕಿರುತೆರೆ ನಿರ್ದೇಶಕ ಎನ್.ಎಸ್.ಸೇತುರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮನುಷ್ಯನ ಸಂಕೀರ್ಣತೆಯನ್ನು ಆಧರಿಸಿದ ಕಥಾವಸ್ತು ರಂಗಭೂಮಿಗೆ ಬೇಕಿದೆ:  ಎಸ್​.ಎನ್.ಸೇತುರಾಮ್
’ತಮಾಷಾ ರಂಗಸಮ್ಮಿಲನ’ದಲ್ಲಿ ನಿರ್ದೇಶಕರಾದ ಎನ್.ಎಸ್.ಸೇತುರಾಮ್, ಟಿ.ಎಸ್.ನಾಗಾಭರಣ ಮತ್ತು ಶಂಕರ ಫೌಂಡೇಶನ್​ನ ರಶ್ಮಿ ಹೆಗಡೆ.
Follow us
guruganesh bhat
|

Updated on:Dec 20, 2020 | 5:11 PM

ಬೆಂಗಳೂರು: ‘ಸಿದ್ಧಾಂತ ಆಧಾರಿತ ಕಥಾವಸ್ತುವಿನಿಂದ ರಂಗಭೂಮಿಗೆ ಏಳಿಗೆ ಇಲ್ಲ. ಹಾಗಾಗಿ ನಾಟಕದ ಕಥಾವಸ್ತುಗಳಲ್ಲಿ ಪರಿಷ್ಕರಣೆಯಾಗುವ ತುರ್ತು ಅವಶ್ಯಕತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸದ್ಯದ ಕೊರೋನಾಕ್ಕೂ ಸ್ಥಗಿತಗೊಂಡ ರಂಗಭೂಮಿಗೂ ಸಂಬಂಧವೇ ಇಲ್ಲ’ ಎಂದು ರಂಗಕರ್ಮಿ, ಕಿರುತೆರೆ ನಿರ್ದೇಶಕ ಎಸ್.ಎನ್. ಸೇತುರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಶಂಕರ ಫೌಂಡೇಶನ್ ಸಹಯೋಗದಲ್ಲಿ ನಡೆಯುತ್ತಿರುವ ಮೂರು ದಿನಗಳ ‘ತಮಾಷಾ ರಂಗಸಮ್ಮಿಲನ’ದಲ್ಲಿ ಪಾಲ್ಗೊಂಡ ಅವರು, ‘ಕೊರೋನಾ ಕಾಲದಲ್ಲಿಯೂ ನಾವು ಮದುವೆ, ಮುಂಜಿವೆ, ಶ್ರಾದ್ಧ, ಪ್ರವಾಸ, ಪಾರ್ಟಗಳಿಗೆ ಹೋಗುತ್ತಿಲ್ಲವೆ? ಇದು ರಂಗಚಟುವಟಿಕೆಗಳಿಗೂ ಯಾಕೆ ಅನ್ವಯಿಸುವುದಿಲ್ಲ? ಸಮಸ್ಯೆ ಇರುವುದು ನಾಟಕದ ವಸ್ತುವಿಷಯಗಳಲ್ಲಿ. ನಾವು ಜನ ಬರುವಂಥ ನಾಟಕಗಳನ್ನು ಮಾಡುತ್ತಿಲ್ಲವಷ್ಟೇ. ಪ್ರತೀ ವರ್ಷ 400 ನಾಟಕಗಳು ಪ್ರದರ್ಶನಗೊಳ್ಳುತ್ತವೆ ಆದರೆ ಶೇ 10 ರಷ್ಟು ಪ್ರದರ್ಶನಗಳಿಗೆ ಮಾತ್ರ ರಂಗಮಂದಿರಗಳು ಭರ್ತಿಯಾಗಿರುತ್ತವೆ ಎಂದರೆ ಇದರ ಹಿಂದಿನ ಕಾರಣವನ್ನು ನಾವು ಗಂಭೀರವಾಗಿ ಯೋಚಿಸಬೇಕಿದೆ’ ಎಂದರು.

‘80ರ ದಶಕದಲ್ಲಿ ಕಾರಂತರು ಸೃಷ್ಟಿಸಿದ ನಾಟಕದ ಟ್ರೆಂಡ್ ಯಾಕೆ ಮುಂದುವರಿಯಲಿಲ್ಲ? ಇದಕ್ಕೆ ನಾವು ಕಿರುತೆರೆಯ ಕಡೆ ಕೈತೋರಿಸುತ್ತೇವೆ. ಆದರೆ ಅದು ಸಮಂಜಸ ಉತ್ತರವಲ್ಲ. ಜಾತಿ ಮತ ಪಂಥ ವರ್ಗಗಳನ್ನು ಕೇಂದ್ರೀಕರಿಸುವ ಬದಲು ಮನುಷ್ಯ ಬದುಕಿನ ಸಂಕೀರ್ಣತೆಗಳನ್ನು, ಸಂಬಂಧಗಳೊಳಗಿನ ತವಕ, ತಲ್ಲಣಗಳನ್ನು ಮತ್ತು ಒಟ್ಟಾರೆಯಾಗಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವಂಥ ಕಥಾವಸ್ತುಗಳನ್ನು ರಂಗದ ಮೇಲೆ ತರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿ, ‘ಮನುಷ್ಯ ಮನುಷ್ಯನನ್ನು ಒಂದುಗೂಡಿಸುವ ಸೃಜನಶೀಲ ಕ್ಷೇತ್ರ ರಂಗಭೂಮಿ. ಇಂದಿನ ಯುವಕಲಾವಿದರು ರಂಗಭೂಮಿಯನ್ನು ಚಿಮ್ಮು ಹಲಗೆಯಂತೆ (ಸ್ಪ್ರಿಂಗ್ ಬೋರ್ಡ್​) ಉಪಯೋಗಿಸಿಕೊಳ್ಳದೆ ನಿರಂತರ ಕಲಿಕೆ, ಬದ್ಧತೆಯಿಂದ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ನೀವು ಅದಕ್ಕೆ ಬೇಕು. ಅದಕ್ಕೆ ನೀವು ಬೇಕು. ಸ್ವಲ್ಪ ಗಂಭೀರವಾಗಿ ಯೋಚಿಸಿ’ ಎಂದರು.

ಜನವರಿ ಮೊದಲ ವಾರದಲ್ಲಿ ಬೆಂಗಳೂರಿನ ಅನೇಕ ರಂಗಮಂದಿರಗಳು ಪುನಾರಂಭಗೊಳ್ಳಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಈ ರಂಗಸಮ್ಮಿಲನ ಅರ್ಥಪೂರ್ಣವಾಗಿದೆ. ಬೆಂಗಳೂರಿನ ಹತ್ತು ರಂಗ ನಿರ್ದೇಶಕರು, ಹತ್ತು ನಾಟಕಕಾರರು, ನಲವತ್ತು ನಟರುಗಳನ್ನು ಗುರುತಿಸಿ, ಹತ್ತು ತಂಡಗಳಾಗಿ ವಿಂಗಡಿಸಿ, ಒಂದೇ ಸೂರಿನಡಿ ಹತ್ತು ಕಿರು ನಾಟಕಗಳನ್ನು ಬರೆದು, ವಿನ್ಯಾಸಗೊಳಿಸಿ, ನಿರ್ದೇಶಿಸಿ, ತಾಲೀಮು ನಡೆಸಿ ಪ್ರದರ್ಶಿಸುವ ವಿನೂತನ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ. ಹಿರಿಯ ರಂಗಕರ್ಮಿಗಳಾದ ಮಂಗಳಾ ಎನ್, ಸುಂದರ್, ಶಶಿಧರ್ ಭಾರೀಘಾಟ್, ಎಂ ಸಿ ಆನಂದ್, ಜಯಲಕ್ಷ್ಮೀ ಪಾಟೀಲ್, ಬೇಲೂರು ರಘುನಂದನ್, ರಾಜೇಂದ್ರ ಕಾರಂತ ಅವರುಗಳ ಜೊತೆಗೆ ಹಲವಾರು ಯುವ ರಂಗಕರ್ಮಿಗಳೂ ಹಾಗು ನಟರು ಇದರ ಭಾಗವಾಗಿದ್ದಾರೆ.

ಶಂಕರ ಫೌಂಡೇಶನ್,  ನಟ ಡಾಲಿ ಧನಂಜಯ ಅವರ ಡಾಲಿ ಪಿಚ್ಚರ್ಸ ಹಾಗೂ ಸಾಲಿಡ್ ಥಿಯೇಟರ್ಸ್ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ.

Published On - 4:36 pm, Sun, 20 December 20

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್