ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ: ಮೂವರ ಬರ್ಬರ ಕೊಲೆ, ಹುಂಡಿ ಕದ್ದೊಯ್ದ ದುಷ್ಕರ್ಮಿಗಳು

ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ: ಮೂವರ ಬರ್ಬರ ಕೊಲೆ, ಹುಂಡಿ ಕದ್ದೊಯ್ದ ದುಷ್ಕರ್ಮಿಗಳು

ಮಂಡ್ಯ: ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದ ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಂಡ್ಯದ ಗುತ್ತಲು ಬಳಿಯ ಅರ್ಕೇಶ್ವರ ದೇಗುಲದಲ್ಲಿ ಈ ಪೈಶಾಚಿಕ ಘಟನೆ ನಡೆದಿದೆ.

ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ
ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದ ಗಣೇಶ, ಪ್ರಕಾಶ್ ಮತ್ತು ಆನಂದ ಕೊಲೆಯಾದ ದುರ್ದೈವಿಗಳು. ಈ ಮೂವರನ್ನೂ ಹತ್ಯೆಗೈದ ದುಷ್ಕರ್ಮಿಗಳು ಹುಂಡಿಯನ್ನು ಕದ್ದೊಯ್ದಿದ್ದಾರೆ. ಪಾತಕಿಗಳು ಹುಂಡಿಯನ್ನು ದೇವಾಲಯದ ಹೊರಗೆ ಬಿಸಾಡಿದ್ದಾರೆ. ಹುಂಡಿ ಹಣಕ್ಕಾಗಿ ಈ ಕೊಲೆಗಳು ನಡೆದಿವೆ ಎಂದು ಶಂಕಿಸಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Click on your DTH Provider to Add TV9 Kannada