ರಾಜ್ಯದಲ್ಲಿಂದು 9,860 ಜನರಿಗೆ ಕೊರೊನಾ ಸೋಂಕು, 113 ಸಾವು

  • TV9 Web Team
  • Published On - 18:35 PM, 2 Sep 2020
ರಾಜ್ಯದಲ್ಲಿಂದು 9,860 ಜನರಿಗೆ ಕೊರೊನಾ ಸೋಂಕು, 113 ಸಾವು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾದ ರುದ್ರನರ್ತನ ಮುಂದುವರಿದಿದ್ದು, ರಾಜ್ಯದಲ್ಲಿಂದು ಹೊಸದಾಗಿ 9,860 ಜನರಿಗೆ ಸೋಂಕು ತಗಲಿರೋದು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,61,341 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 3,420 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ಜೊತೆಗೆ, ಸೋಂಕಿನಿಂದ ರಾಜ್ಯದಲ್ಲಿ ಇವತ್ತು 113 ಜನರು ಸಾವನ್ನಪ್ಪಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ 32 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಈಗ 5,950 ಕ್ಕೆ ಏರಿದೆ. ಬೆಂಗಳೂರು ಒಂದರಲ್ಲೆ ಇದುವರೆಗೆ 2,037 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ನಡುವೆ 2,60,913 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 94,459ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.