ಜಮೀನು ವಿವಾದ: ದೊಣ್ಣೆ, ರಾಡ್ ಹಿಡಿದು ಎರಡು ಕುಟುಂಬಗಳ ನಡುವೆ ಮಾರಾಮಾರಿ

ಸಾಧು ಶ್ರೀನಾಥ್​

|

Updated on:May 17, 2020 | 12:43 PM

ಕೋಲಾರ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿರುವ ಘಟನೆ ಕೋಲಾರದ ಹೊಳೇರಹಳ್ಳಿ ಬಳಿ ನಡೆದಿದೆ. ಮೇ 15ರಂದು ಕೋಲಾರ ತಾಲೂಕಿನ ಹೊಳೇರಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಚಿಕ್ಕ ವೆಂಕಟೇಶಪ್ಪ ಮತ್ತು ಅಶೋಕ್ ಎನ್ನುವ ಎರಡು ಕುಟುಂಬದ ಸದಸ್ಯರ ನಡುವೆ ಜಗಳ ಶುರುವಾಗಿತ್ತು. ಆ ಜಗಳ ಎರಡೂ ಕುಟುಂಬದವರು ದೊಣ್ಣೆ, ರಾಡ್​ಗಳನ್ನು ಹಿಡಿದು ಕಿತ್ತಾಡುವಷ್ಟರ ಮಟ್ಟಿಗೆ ಹೋಗಿತ್ತು. ಸ್ವಲ್ಪವೂ ಮಾನವೀಯತೆ ಇಲ್ಲದೆ ರಾಕ್ಷಸರಂತೆ ಮಹಿಳೆಯರ ಮೇಲೆ ದೊಣ್ಣೆ, ರಾಡ್​ಗಳಿಂದ ಹಿಗ್ಗಾಮುಗ್ಗಾ ಹಲ್ಲೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ […]

ಜಮೀನು ವಿವಾದ: ದೊಣ್ಣೆ, ರಾಡ್ ಹಿಡಿದು ಎರಡು ಕುಟುಂಬಗಳ ನಡುವೆ ಮಾರಾಮಾರಿ

ಕೋಲಾರ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿರುವ ಘಟನೆ ಕೋಲಾರದ ಹೊಳೇರಹಳ್ಳಿ ಬಳಿ ನಡೆದಿದೆ. ಮೇ 15ರಂದು ಕೋಲಾರ ತಾಲೂಕಿನ ಹೊಳೇರಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಚಿಕ್ಕ ವೆಂಕಟೇಶಪ್ಪ ಮತ್ತು ಅಶೋಕ್ ಎನ್ನುವ ಎರಡು ಕುಟುಂಬದ ಸದಸ್ಯರ ನಡುವೆ ಜಗಳ ಶುರುವಾಗಿತ್ತು.

ಆ ಜಗಳ ಎರಡೂ ಕುಟುಂಬದವರು ದೊಣ್ಣೆ, ರಾಡ್​ಗಳನ್ನು ಹಿಡಿದು ಕಿತ್ತಾಡುವಷ್ಟರ ಮಟ್ಟಿಗೆ ಹೋಗಿತ್ತು. ಸ್ವಲ್ಪವೂ ಮಾನವೀಯತೆ ಇಲ್ಲದೆ ರಾಕ್ಷಸರಂತೆ ಮಹಿಳೆಯರ ಮೇಲೆ ದೊಣ್ಣೆ, ರಾಡ್​ಗಳಿಂದ ಹಿಗ್ಗಾಮುಗ್ಗಾ ಹಲ್ಲೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಲಾಟೆಯಲ್ಲಿ ಎರಡೂ ಕಡೆಯ 15 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada