AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳಗಿ ಗ್ರಾಮಸ್ಥರಿಗೆ ಕೊನೆಗೂ ತಪ್ಪಿತು ತೆಪ್ಪದ ಓಡಾಟ, ಬದುಕಿನ ಪರದಾಟ!

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮಸ್ಥರು ತಮ್ಮ ಎಲ್ಲಾ ಕೆಲಸಗಳಿಗೂ ರಟ್ಟೀಹಳ್ಳಿ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಗ್ರಾಮದ ಶಾಲೆಯಲ್ಲಿ ಕೇವಲ ಐದನೇ ತರಗತಿಯವರೆಗೆ ಮಾತ್ರ ಓದುವ ಅವಕಾಶವಿದ್ದು, ನಂತರದ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರಲೇಬೇಕು. ಆದರೆ, ಗ್ರಾಮದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ರಟ್ಟೀಹಳ್ಳಿ ಪಟ್ಟಣಕ್ಕೆ ಬರಲು ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಿತ್ತು. ಇದಕ್ಕೆ ಕಾರಣ ಎರಡು ಸ್ಥಳಗಳ ಮಧ್ಯ ಹರಿಯುವ ಕುಮುದ್ವತಿ ನದಿ. ಹೀಗಾಗಿ, ನದಿಯ ಎರಡೂ ಬದಿಗೆ ಕಟ್ಟಲಾಗಿದ್ದ ಹಗ್ಗವನ್ನ ಬಳಸಿ ತೆಪ್ಪದ […]

ಮಳಗಿ ಗ್ರಾಮಸ್ಥರಿಗೆ ಕೊನೆಗೂ ತಪ್ಪಿತು ತೆಪ್ಪದ ಓಡಾಟ, ಬದುಕಿನ ಪರದಾಟ!
KUSHAL V
| Edited By: ಸಾಧು ಶ್ರೀನಾಥ್​|

Updated on:Jul 16, 2020 | 11:51 AM

Share

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮಸ್ಥರು ತಮ್ಮ ಎಲ್ಲಾ ಕೆಲಸಗಳಿಗೂ ರಟ್ಟೀಹಳ್ಳಿ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಗ್ರಾಮದ ಶಾಲೆಯಲ್ಲಿ ಕೇವಲ ಐದನೇ ತರಗತಿಯವರೆಗೆ ಮಾತ್ರ ಓದುವ ಅವಕಾಶವಿದ್ದು, ನಂತರದ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರಲೇಬೇಕು.

ಆದರೆ, ಗ್ರಾಮದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ರಟ್ಟೀಹಳ್ಳಿ ಪಟ್ಟಣಕ್ಕೆ ಬರಲು ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಿತ್ತು. ಇದಕ್ಕೆ ಕಾರಣ ಎರಡು ಸ್ಥಳಗಳ ಮಧ್ಯ ಹರಿಯುವ ಕುಮುದ್ವತಿ ನದಿ.

ಹೀಗಾಗಿ, ನದಿಯ ಎರಡೂ ಬದಿಗೆ ಕಟ್ಟಲಾಗಿದ್ದ ಹಗ್ಗವನ್ನ ಬಳಸಿ ತೆಪ್ಪದ ಮೂಲಕ ರಟ್ಟೀಹಳ್ಳಿಗೆ ಬಂದು ಹೋಗುವ ದುಃಸ್ಥಿತಿಯಿತ್ತು. ಇನ್ನು ಮಳೆಗಾಲದಲ್ಲಂತೂ ಇವರ ಅವಸ್ಥೆ ಕೇಳಲೇಬೇಡಿ. ಒಂದು ವೇಳೆ ತೆಪ್ಪದಲ್ಲಿ ಹೋಗಲು ಇಷ್ಟವಿಲ್ಲದಿದ್ರೆ ರಸ್ತೆ ಮುಖಾಂತರ ಹತ್ತಾರು ಕಿ.ಮೀ ಬಳಸಿಕೊಂಡು ಪಟ್ಟಣ ತಲುಪಬೇಕಾಗುತ್ತಿತ್ತು. ಹಾಗಾಗಿ, ಗ್ರಾಮಸ್ಥರು ಕಷ್ಟನೋ ಸುಖನೋ ವಿಧಿಯಿಲ್ಲದೆ ತೆಪ್ಪದಲ್ಲಿ ಓಡಾಡಬೇಕಿತ್ತು.

ಸೇತುವೆ ಇದ್ದರೂ ಇಲ್ಲದಂತಾಗಿತ್ತು ವಿಪರ್ಯಾಸವೆಂದರೆ, ಕುಮುದ್ವತಿ ನದಿಗೆ ಅಡ್ಡವಾಗಿ ರಟ್ಟೀಹಳ್ಳಿ ಮತ್ತು ಮಳಗಿ ಗ್ರಾಮದ ನಡುವೆ ಸಂಪರ್ಕ ಕಲ್ಪಿಸುವ ಒಂದು ಸೇತುವೆಯನ್ನ ಬಹಳ ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಆದರೆ, ಬ್ರಿಡ್ಜ್ ತಲುಪಲು ಎರಡೂ ಬದಿಯಲ್ಲಿ ರಸ್ತೆಯ ನಿರ್ಮಾಣ ಮಾಡಿರಲಿಲ್ಲ. ಹೀಗಾಗಿ, ಜನರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಸೇತುವೆ ಇದ್ದೂ ಇಲ್ಲದಂತಾಗಿತ್ತು.

ಹೀಗಾಗಿ, ಗ್ರಾಮಸ್ಥರು ಬ್ರಿಡ್ಜ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮಾಡಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತಲೇ ಬಂದಿದ್ದರು.

ಕೊನೆಗೂ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಆಡಳಿತ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಾಣ ಮಾಡಿದೆ. ಇದರಿಂದ ಗ್ರಾಮಸ್ಥರ ತೆಪ್ಪದ ಓಡಾಟದಿಂದ ಖಾಯಂ ಮುಕ್ತಿ ಸಿಕ್ಕಿದೆ.ಪ್ರಭುಗೌಡ.ಎನ್.ಪಾಟೀಲ

Published On - 11:45 am, Thu, 16 July 20

Follow Us