AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2020ರಲ್ಲಿ ವಾಟ್ಸಾಪ್ ನೀಡಿರುವ ಗಿಫ್ಟ್​ಗಳಿವು, ಈವರೆಗೆ ಬಳಸದಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ

ಡಿಸ್ ಅಪಿಯರಿಂಗ್​ನ ಒಮ್ಮೆ ಸಕ್ರಿಯಗೊಳಿಸಿದ ನಂತರ ಕಳುಹಿಸಲಾದ ಹೊಸ ಸಂದೇಶಗಳು ಏಳು ದಿನಗಳ ನಂತರ ಚಾಟ್ ಪೇಜ್​ನಲ್ಲಿ ಕಾಣಿಸುವುದಿಲ್ಲ. ಈ ಹೊಸ ಆಯ್ಕೆ ಎಲ್ಲಾ ಸಂದೇಶಗಳನ್ನು ನಿಯಂತ್ರಿಸುತ್ತದೆ. ಕಳುಹಿಸಿದ ಅಥವಾ ಸ್ವೀಕರಿಸಿದ ಸಂದೇಶಗಳು ಅಳಿಸಿಹೋಗುವ ಮೊದಲು ಯಾವುದೇ ಸಮಸ್ಯೆಗಳನ್ನು ಹುಟ್ಟುಹಾಕುವುದಿಲ್ಲ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.

2020ರಲ್ಲಿ ವಾಟ್ಸಾಪ್ ನೀಡಿರುವ ಗಿಫ್ಟ್​ಗಳಿವು, ಈವರೆಗೆ ಬಳಸದಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ
WhatsApp
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 29, 2020 | 7:22 PM

Share

ಸರ್ವೇ ಸಾಮನ್ಯವಾಗಿ ಬಳಕೆಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಹೊಸ ವೈಶಿಷ್ಟಗಳನ್ನು ಆಗಾಗ ಹೊರ ತರುತ್ತಿರುತ್ತದೆ. ಅದರಂತೆ ಇತ್ತೀಚೆಗೆ ಮತ್ತೊಂದು ಹೊಸ ವೈಶಿಷ್ಟ ಪರಿಚಯಿಸಿದ್ದು, ವಾಟಾಟ್ಸಪ್​ನಲ್ಲಿ ‘ಡಿಸ್ ಅಪಿಯರಿಂಗ್’ನ ಆನ್ ಮಾಡುವ ಮೂಲಕ ಮಾಡಿದ ಮೆಸೆಜ್ಗಳು ಕಣ್ಣಿಗೆ ಕಾಣುವುದಿಲ್ಲ ಎಂದು ವಾಟ್ಸಾಪ್ ಬಿಡುಗಡೆ ಮಾಡಿದ ಅಧಿಕೃತ ದಾಖಲೆಯಲ್ಲಿ ತಿಳಿದಿದೆ.

ಡಿಸ್ ಅಪಿಯರಿಂಗ್​ನ ಒಮ್ಮೆ ಸಕ್ರಿಯಗೊಳಿಸಿದ ನಂತರ ಕಳುಹಿಸಲಾದ ಹೊಸ ಸಂದೇಶಗಳು ಏಳು ದಿನಗಳ ನಂತರ ಚಾಟ್ ಪೇಜ್ನಲ್ಲಿ ಕಾಣಿಸುವುದಿಲ್ಲ. ಈ ಹೊಸ ಆಯ್ಕೆ ಎಲ್ಲಾ ಸಂದೇಶಗಳನ್ನು ನಿಯಂತ್ರಿಸುತ್ತದೆ. ಕಳುಹಿಸಿದ ಅಥವಾ ಸ್ವೀಕರಿಸಿದ ಸಂದೇಶಗಳು ಅಳಿಸಿಹೋಗುವ ಮೊದಲು ಯಾವುದೇ ಸಮಸ್ಯೆಗಳನ್ನು ಹುಟ್ಟುಹಾಕುವುದಿಲ್ಲ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.

ಸ್ಟೋರೇಜ್ ಮ್ಯಾನೇಜ್​ನೆಂಟ್ ಟೂಲ್: ಕೆಲವೇ ವಾರಗಳ ಹಿಂದೆ ವಾಟ್ಸಾಪ್ ಸ್ಟೋರೇಜ್​ಗೆ ಸಂಬಂಧಿಸಿದ ಹೊಸ ಮತ್ತು ಸುಧಾರಿತ ಮ್ಯಾನೇಜ್​ಮೆಂಟ್​ ಟೂಲ್​ ಬಿಡುಗಡೆ ಮಾಡಿದ್ದು, ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಫಾರ್ವಡ್ ಮಾಡಿದ ಎಲ್ಲಾ ಫೋಟೋಗಳು, ಸ್ಟೊರೇಜ್ ಮ್ಯಾನೇಜ್​ಮೆಂಟ್​ನಲ್ಲಿರುವ ಫೈಲ್​ಗಳನ್ನು ಪರಿಶೀಲಿಸಿ ಎಲ್ಲರಿಗೂ ಒಮ್ಮೆ ಅಳಿಸಬಹುದು (Delete ALL). ಅಲ್ಲದೇ ವೈಯಕ್ತಿಕ ಚಾಟ್​ಗೆ ಸಂಬಂಧಿಸಿದ ಎಲ್ಲಾ ರೀತಿಯ ಮೆಸೇಜ್​ಗಳನ್ನು ಪ್ರತ್ಯೇಕವಾಗಿ ಅಳಿಸಲು ಅವಕಾಶವಿದೆ.

ವೀಡಿಯೋ ಕಾನ್ಫರೆನ್ಸ್​ಗೆ ಹೆಚ್ಚಿನ ಅವಕಾಶ: ಕೊರೊನಾ ಲಾಕ್​ಡೌನ್​ ನಿರ್ಬಂಧ ಆರಂಭವಾದ ಮೇಲೆ ಅನಿವಾರ್ಯವಾಗಿ ಆನ್​ಲೈನ್ ಮಾತುಕತೆಗಳು ಹೆಚ್ಚಾದವು. ವಾಟ್ಸಾಪ್​ನಲ್ಲಿ ಈ ಹಿಂದೆ ಕೇವಲ 4 ಜನರು ಮಾತ್ರ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಂಪರ್ಕ ಸಾಧಿಸಲು ಅವಕಾಶವಿತ್ತು. ಇದನ್ನು 8 ಜನರ ಸಂಪರ್ಕಕ್ಕೆ ಹೆಚ್ಚಿಸಲಾಯಿತು. ಇದರಿಂದ ಲಾಕ್​ಡೌನ್​ ವೇಳೆಯಲ್ಲಿ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಿದೆ.

ವಾಟ್ಸಾಪ್ ಮೂಲಕ ಹಣ ಪಾವತಿಸಲು ಸಾಧ್ಯ: ಗೂಗಲ್ ಪೇ, ಫೋನ್ ಪೇಗಳಲ್ಲಿ ಆನ್ಲೈನ್ ಮೂಲಕ ಹಣ ವರ್ಗಾಯಿಸುವುದು ಸಹಜ. ಇದರಂತೆ ವಾಟ್ಸಾಪ್ ಮೂಲಕವು ಹಣ ವರ್ಗಾಯಿಸುವುದಕ್ಕೆ ಅವಕಾಶ ಇರುವುದು ವಿಶೇಷ. ವಾಟ್ಸಾಪ್ ಮೂಲಕವೇ ಹಣವನ್ನು ಕಳುಹಿಸುವ ಸೇವೆಯನ್ನು ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ಪ್ರಸ್ತುತ ದೇಶದಲ್ಲಿ 40 ಕೋಟಿಗೂ ಹೆಚ್ಚು ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಈ ಪೈಕಿ ಕೇವಲ 2 ಕೋಟಿ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ವಾಟ್ಸಾಪ್ ಹೇಳಿದೆ. ಈ ಸೇವೆ 2021ರ ಜನವರಿ 1ರಿಂದ ಜಾರಿಗೆ ಬರಲಿದೆ.

ಡಾರ್ಕ್​ ಮೋಡ್: ನಿರಂತರವಾಗಿ ಮೊಬೈಲ್ ಬಳಕೆ ಮಾಡುವುದರಿಂದ ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿಗೆ ಕಣ್ಣಿನ ದೋಷಯಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಮೊಬೈಲ್​ಗಳ ಅತಿರೇಕ ಬಳಕೆ ಕಾರಣವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ವಾಟ್ಸಾಪ್ ತನ್ನ ಅಪ್ಲಿಕೇಶನ್​ನಲ್ಲಿ ಡಾರ್ಕ್ ಮೋಡ್ ಎಂಬ ವಿಶೇಷ ಆಯ್ಕೆಯನ್ನು ನೀಡಿದೆ. ಡಾರ್ಕ್ ಮೋಡ್​ನಿಂದ ಮೊಬೈಲ್ ಬೆಳಕಿನ ಕಿರಣಗಳು ಕಣ್ಣಿನ ಮೇಲೆ ತೀರಾ ಕೆಟ್ಟ ಪರಿಣಾಮ ಬೀರುವುದಿಲ್ಲ.

ಡಾರ್ಕ್​ಮೋಡ್ ಬಳಸುವುದು ಹೇಗೆ? ವಾಟ್ಸಾಪ್ ಅಪ್ಲಿಕೇಶನ್ ತೆರೆದು (ಓಪನ್) ಸೆಟ್ಟಿಂಗ್ ಆಯ್ಕೆಗೆ ಹೋಗಿ, ಚಾಟ್ಸ್ ಎಂಬ ಆಯ್ಕೆಯನ್ನು ಒತ್ತಬೇಕು. ನಂತರ ಥೀಮ್ ಎಂಬ ಮತ್ತೊಂದು ಆಯ್ಕೆ ಸಿಗುತ್ತದೆ. ಅದರ ಮೇಲೆ ಒತ್ತಿದ ನಂತರ ಲೈಟ್ ಹಾಗೂ ಡಾರ್ಕ್ ಮೋಡ್​ಗಳನ್ನು ಬಳಸಲು ಅವಕಾಶವಿರುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಚಾಟ್ ಕಣ್ಮರೆಯಾಗುತ್ತೆ ಗೊತ್ತಾ.. ಹೊಸ ಸೌಲಭ್ಯ ಬಳಸೋದು ಹೇಗೆ?!

Published On - 5:25 pm, Sun, 29 November 20