ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ! 1ವಾರದಲ್ಲಿ 3ಕಡೆ ಕಳ್ಳರ ಕೈಚಳಕ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಒಂದೇ ವಾರದಲ್ಲಿ ನಗರದ ಮೂರು ಕಡೆ ಸರಗಳ್ಳತನವಾಗಿರುವ ಘಟನೆ ನಡೆದಿದೆ. ನಿನ್ನೆಯಷ್ಟೇ ನಂದಿನಿ ಲೇಔಟ್ನಲ್ಲಿ ಸರ ಕದ್ದು ಕಿಡಿಗೇಡಿಗಳು ಪರಾರಿಯಾಗಿದ್ದರು. ಇದೀಗ ನಾಯಂಡಹಳ್ಳಿಯ ಐಟಿಐ ಲೇಔಟ್ನಲ್ಲಿ ಬೈಕ್ನಲ್ಲಿ ಬಂದಿದ್ದ ಮೂವರು ಮಹಿಳೆಯ ಸರ ಕಸಿದು ಎಸ್ಕೇಪ್ ಆಗಿದ್ದಾರೆ. ನಾಯಂಡಹಳ್ಳಿಯ ಐಟಿ ಲೇಔಟ್ನ ಕೈಲಾಶ್ ದೇವಾಲಯ ಬಳಿ ಬೈಕ್ನಲ್ಲಿ ಬಂದಿದ್ದ ಮೂವರು ಶಾಂತಾ(47) ಎಂಬುವರ ಸರ ಕದ್ದು ಪರಾರಿಯಾಗಿದ್ದಾರೆ. ಹೊಂಚು ಹಾಕಿ ಮಹಿಳೆಯ ಸುಮಾರು 50 ಗ್ರಾಂ […]
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಒಂದೇ ವಾರದಲ್ಲಿ ನಗರದ ಮೂರು ಕಡೆ ಸರಗಳ್ಳತನವಾಗಿರುವ ಘಟನೆ ನಡೆದಿದೆ. ನಿನ್ನೆಯಷ್ಟೇ ನಂದಿನಿ ಲೇಔಟ್ನಲ್ಲಿ ಸರ ಕದ್ದು ಕಿಡಿಗೇಡಿಗಳು ಪರಾರಿಯಾಗಿದ್ದರು. ಇದೀಗ ನಾಯಂಡಹಳ್ಳಿಯ ಐಟಿಐ ಲೇಔಟ್ನಲ್ಲಿ ಬೈಕ್ನಲ್ಲಿ ಬಂದಿದ್ದ ಮೂವರು ಮಹಿಳೆಯ ಸರ ಕಸಿದು ಎಸ್ಕೇಪ್ ಆಗಿದ್ದಾರೆ.
ನಾಯಂಡಹಳ್ಳಿಯ ಐಟಿ ಲೇಔಟ್ನ ಕೈಲಾಶ್ ದೇವಾಲಯ ಬಳಿ ಬೈಕ್ನಲ್ಲಿ ಬಂದಿದ್ದ ಮೂವರು ಶಾಂತಾ(47) ಎಂಬುವರ ಸರ ಕದ್ದು ಪರಾರಿಯಾಗಿದ್ದಾರೆ. ಹೊಂಚು ಹಾಕಿ ಮಹಿಳೆಯ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಎಗರಿಸಿ ಕ್ಷಣಾರ್ಧದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಸರಗಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜನವರಿ 9 ರಂದು ಆರ್.ಟಿ.ನಗರದ ಗಿಡ್ಡಪ್ಪ ಬ್ಲಾಕ್ನಲ್ಲಿ ಸರಗಳ್ಳತನ ನಡೆದಿತ್ತು. 55 ವರ್ಷದ ನಿರ್ಮಲಾ ಎಂಬ ಮಹಿಳೆಯನ್ನು ಗಾಯಗೊಳಿಸಿ ಸರ ಕಸಿದು ಆರೋಪಿಗಳು ಎಸ್ಕೇಪ್ ಆಗಿದ್ದರು. ನಿನ್ನೆ ನಂದಿನಿ ಲೇಔಟ್ನಲ್ಲಿ ಮಹಿಳೆಯ ಸರ ಎಗರಿಸಿ ಆರೋಪಿಗಳು ಪರಾರಿಯಾಗಿದ್ದರು.
Published On - 5:25 pm, Sun, 12 January 20