ಕಾಲುವೆಗೆ ಬಿದ್ದ ಬಾಲಕನನ್ನು ಉಳಿಸಲು ಸೀರೆಯನ್ನೇ ಬಿಚ್ಚಿ ಕೊಟ್ಟ ಮಹಾತಾಯಿ
ವಿಜಯಪುರ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಸಲು ಮಹಿಳೆ ಸೀರೆಯನ್ನೇ ಬಿಚ್ಚಿಕೊಟ್ಟ ಘಟನೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಿನ್ನೆ ಸಾಯಂಕಾಲ ನಡೆದಿದೆ. ಆಟವಾಡಲು ಸಹೋದರನೊಂದಿಗೆ ಹೋಗಿದ್ದ ಬಾಲಕ ಅರುಣ ದೊಡಮನಿ (7) ಕೆಬಿಜೆಎನ್ಎಲ್ ಎಡದಂಡೆ ಕಾಲುವೆಯಲ್ಲಿ ಆಯತಪ್ಪಿ ಬಿದ್ದಿದ್ದ. ಈ ವೇಳೆ ಬಾಲಕನನ್ನು ರಕ್ಷಿಸಲು ಮಹಿಳೆ ಸಕೀನಾ ಬೇಗಂ ಕೂಗಿಕೊಂಡಿದ್ದಾರೆ. ಆಗ ಸ್ಥಳಕ್ಕೆ ಬಂದ ಶಿಕ್ಷಕ ಮಹೇಶ್, ತನಗೆ ಪೂರ್ಣ ಈಜು ಬರಲ್ಲ ಅಂದಿದ್ದಾರೆ. ತಕ್ಷಣ ಸಕೀನಾ ಬೇಗಂ ಹಿಂದೆಮುಂದೆ ಯೋಚಿಸದೆ ಸೀರೆಯನ್ನು ಬಿಚ್ಚಿ, ಸೀರೆಯ […]

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಸಲು ಮಹಿಳೆ ಸೀರೆಯನ್ನೇ ಬಿಚ್ಚಿಕೊಟ್ಟ ಘಟನೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಿನ್ನೆ ಸಾಯಂಕಾಲ ನಡೆದಿದೆ.
ಆಟವಾಡಲು ಸಹೋದರನೊಂದಿಗೆ ಹೋಗಿದ್ದ ಬಾಲಕ ಅರುಣ ದೊಡಮನಿ (7) ಕೆಬಿಜೆಎನ್ಎಲ್ ಎಡದಂಡೆ ಕಾಲುವೆಯಲ್ಲಿ ಆಯತಪ್ಪಿ ಬಿದ್ದಿದ್ದ. ಈ ವೇಳೆ ಬಾಲಕನನ್ನು ರಕ್ಷಿಸಲು ಮಹಿಳೆ ಸಕೀನಾ ಬೇಗಂ ಕೂಗಿಕೊಂಡಿದ್ದಾರೆ. ಆಗ ಸ್ಥಳಕ್ಕೆ ಬಂದ ಶಿಕ್ಷಕ ಮಹೇಶ್, ತನಗೆ ಪೂರ್ಣ ಈಜು ಬರಲ್ಲ ಅಂದಿದ್ದಾರೆ. ತಕ್ಷಣ ಸಕೀನಾ ಬೇಗಂ ಹಿಂದೆಮುಂದೆ ಯೋಚಿಸದೆ ಸೀರೆಯನ್ನು ಬಿಚ್ಚಿ, ಸೀರೆಯ ಒಂದು ತುದಿಯನ್ನು ಶಿಕ್ಷಕ ಮಹೇಶ್ಗೆ ಕೊಟ್ಟು ಕಾಲುವೆಗೆ ಇಳಿಸಿದ್ರು.
ಸೀರೆಯ ಮತ್ತೊಂದು ತುದಿಯನ್ನು ತಾನೇ ಹಿಡಿದು ಸಹಾಯ ಮಾಡಿದ್ರು. ಈ ರೀತಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಲು ಸಕೀನಾ ಬೇಗಂ ಸಹಾಯ ಮಾಡಿದರು. ಮಹಾಭಾರತದಲ್ಲಿ ಕರ್ಣ ತನ್ನ ರಕ್ಷಾ ಕವಚ, ಕುಂಡಲಗಳನ್ನು ಕತ್ತರಿಸಿ ಕೊಟ್ಟಂತೆ. ಸಕೀನಾ ಬೇಗಂ ತನ್ನ ಸೀರೆಯನ್ನೇ ಬಿಚ್ಚಿ ಕೊಟ್ಟು ಬಾಲಕನ ಜೀವ ಉಳಿಸಿದ್ದಾರೆ. ಮಹಿಳೆಯ ಈ ಕಾರ್ಯಕ್ಕೆ ಎಲ್ಲೆಡೆ ಈಗ ಶ್ಲಾಘನೆ ವ್ಯಕ್ತವಾಗಿದೆ.