Beauty Tips: ಹುಬ್ಬುಗಳನ್ನು ದಟ್ಟವಾಗಿ ಕಾಣುವಂತೆ ಮಾಡುವುದು ಹೇಗೆ?
ನಿಮ್ಮ ಆಹಾರದಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಕೊರತೆಯು ಹುಬ್ಬಿನ ಕೂದಲು ಉದುರುವಿಕೆಗೆ ಕಾರಣವಾಗಬಹುದು. ನಿಮ್ಮ ಆಹಾರದಲ್ಲಿ ಹೆಚ್ಚು ಕಬ್ಬಿಣ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇರಿಸುವುದರಿಂದ ನಿಮ್ಮ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಬಹುದು.
ಹುಬ್ಬುಗಳ ಕೂದಲು ಕೂಡ ನಮ್ಮ ತಲೆ ಕೂದಲಿನಷ್ಟೇ ಮುಖ್ಯವಾದುದು. ಆದರೆ, ಬಹುತೇಕ ಜನರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಐಬ್ರೋ ಮಾಡಿಸಲು ಮಹಿಳೆಯರು ಹುಬ್ಬುಗಳನ್ನು ಟ್ರಿಮ್ ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ, ಈಗ ತೆಳುವಾದ ಹುಬ್ಬಿಗಿಂತಲೂ ದಪ್ಪವಾದ ಹುಬ್ಬುಗಳೇ ಟ್ರೆಂಡ್ ಆಗಿದೆ. ಹಾಗಾದರೆ, ತೆಳುವಾದ ನಿಮ್ಮ ಹುಬ್ಬನ್ನು ದಪ್ಪವಾಗಿ ಕಾಣುವಂತೆ ಮಾಡುವುದು ಹೇಗೆ?
ಹುಬ್ಬುಗಳನ್ನು ಮತ್ತೆ ಬೆಳೆಯುವಂತೆ ಮಾಡುವುದು ಹೇಗೆ? ಎಂಬ ಪ್ರಶ್ನೆ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ನಿಮ್ಮ ಆಹಾರದಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು, ಹುಬ್ಬಿನ ಸೀರಮ್‌ಗಳನ್ನು ಹಚ್ಚುವುದು ಮತ್ತು ನೈಸರ್ಗಿಕ ತೈಲಗಳನ್ನು ಬಳಸುವುದರಿಂದ ಹುಬ್ಬಿನ ಕೂದಲು ಮತ್ತೆ ವೇಗವಾಗಿ ಬೆಳೆಯುವಂತೆ ಮಾಡಬಹುದು. ಇದರಿಂದ ತೆಳ್ಳಗಿರುವ ನಿಮ್ಮ ಹುಬ್ಬಿನಲ್ಲಿ ಕೂದಲು ಬೆಳೆದು, ದಪ್ಪವಾಗಿ ಕಾಣುತ್ತದೆ.
ಹುಬ್ಬುಗಳು ಮತ್ತೆ ಬೆಳೆಯುತ್ತವೆಯೇ?:
ಹುಬ್ಬಿನ ಕೂದಲನ್ನು ನೀವು ಕಿತ್ತಷ್ಟೂ ಮತ್ತೆ ಮತ್ತೆ ಬೆಳೆಯುತ್ತಲೇ ಇರುತ್ತದೆ. ಈ ಕೂದಲು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಆದರೆ, ಆ ಎಳೆಯ ಕೂದಲು ನಿಮ್ಮ ಹಳೆಯ ಕೂದಲಿನಷ್ಟು ಉದ್ದ ಹಾಗೂ ದಪ್ಪವಾಗಬೇಕೆಂದರೆ ನೀವು ಕಾಯಬೇಕಾಗುತ್ತದೆ. ನಿಮ್ಮ ಹುಬ್ಬುಗಳು ಬೇಗ ಬೆಳೆಯಲು ಹೀಗೆ ಮಾಡಿ ನೋಡಿ.
ಇದನ್ನೂ ಓದಿ: ಕೂದಲು ಬೆಳವಣಿಗೆಗೆ ಜಾಸ್ಮಿನ್ ಎಣ್ಣೆಯನ್ನು ತಯಾರಿಸುವುದು ಹೇಗೆ?
ನಿಮ್ಮ ಆಹಾರವನ್ನು ಪೌಷ್ಟಿಕಗೊಳಿಸಿ:
ನಿಮ್ಮ ಆಹಾರದಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಕೊರತೆಯು ಹುಬ್ಬಿನ ಕೂದಲು ಉದುರುವಿಕೆಗೆ ಕಾರಣವಾಗಬಹುದು. ನಿಮ್ಮ ಆಹಾರದಲ್ಲಿ ಹೆಚ್ಚು ಕಬ್ಬಿಣ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇರಿಸುವುದರಿಂದ ನಿಮ್ಮ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಬಹುದು.
ಕಬ್ಬಿಣಾಂಶದ ಆಹಾರ ಸೇವಿಸಿ:
ಕಬ್ಬಿಣಾಂಶ ಹೇರಳವಾಗಿರುವ ಒಣಗಿದ ಕಾಳುಗಳು, ಡ್ರೈ ಫ್ರೂಟ್ಸ್ (ಉದಾಹರಣೆಗೆ: ಎಪ್ರಿಕಾಟ್, ಒಣದ್ರಾಕ್ಷಿ), ಮೊಟ್ಟೆಯ ಹಳದಿ ಭಾಗ, ಕೆಂಪು ಮಾಂಸ, ಲಿವರ್, ಸಿಂಪಿಗಳು, ಸಾಲ್ಮನ್ ಮತ್ತು ಟ್ಯೂನ ಮೀನು, ಧಾನ್ಯಗಳನ್ನು ಹೆಚ್ಚು ಸೇವಿಸಿ. ನೀವು ಮಾಂಸಾಹಾರ ತಿನ್ನದಿದ್ದರೆ ನೀವು ಬೇಯಿಸಿದ ಬೀನ್ಸ್, ಧಾನ್ಯಗಳನ್ನು ಸೇವಿಸಬಹುದು.
ಇದನ್ನೂ ಓದಿ: ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?
ನೈಸರ್ಗಿಕ ತೈಲಗಳನ್ನು ಬಳಸಿ:
ಆಲಿವ್ ಮತ್ತು ರೋಸ್ಮರಿ ಎಣ್ಣೆಯಂತಹ ನೈಸರ್ಗಿಕ ತೈಲಗಳು ಹುಬ್ಬಿನ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ವ್ಯಾಸಲಿನ್ ಮುಂತಾದ ಪೆಟ್ರೋಲಿಯಂ ಜೆಲ್ಲಿ ಕೂಡ ಹುಬ್ಬಿನ ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ನೀವು ಮೊಡವೆ ಪೀಡಿತ ಚರ್ಮವನ್ನು ಹೊಂದಿದ್ದರೆ ನಿಮ್ಮ ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚದಿರುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ