AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ವ್ಯಕ್ತಿಗಳೇ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ

ಸಾಮಾನ್ಯವಾಗಿ ನಾವೆಲ್ಲರೂ ಸಿರಿವಂತರೇ ಈ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು ಅವರು ಮಾತ್ರ ಸಂತೋಷದಾಯಕ ಜೀವನವನ್ನು ನಡೆಸುತ್ತಾರೆ ಎಂದು ಭಾವಿಸುತ್ತೇವೆ. ಆದ್ರೆ ಏನು ಗೊತ್ತಾ, ಚಾಣಕ್ಯರ ಪ್ರಕಾರ ಕೇವಲ ದುಡ್ಡಿರುವವರು ಮಾತ್ರ ಅದೃಷ್ಟವಂತರಲ್ಲ, ಯಾರ ಈ ಜೀವನದಲ್ಲಿ ಈ ಪ್ರಮುಖ ಸಂಗತಿಗಳಿವೆಯೋ ಅವರೇ ನಿಜವಾದ ಅದೃಷ್ಟವಂತರಂತೆ. ಹಾಗಿದ್ರೆ ಚಾಣಕ್ಯರ ಪ್ರಕಾರ ಅದೃಷ್ಟವಂತ ವ್ಯಕ್ತಿ ಯಾರು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ವ್ಯಕ್ತಿಗಳೇ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Oct 26, 2026 | 7:36 PM

Share

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ನಮ್ಮ ಜೀವನಕ್ಕೆ ಉಪಯುಕ್ತವಾದ ಸಾಕಷ್ಟು ವಿಚಾರಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಅದರಲ್ಲಿ ಒಂದು ಅದೃಷ್ಟವಂತರು ಯಾರು ಎಂಬುದು. ಸಾಮಾನ್ಯವಾಗಿ ನಾವೆಲ್ಲರೂ ದುಡ್ಡು, ಶ್ರೀಮಂತಿಕೆ ಇರುವವರೇ ನಿಜವಾದ ಅದೃಷ್ಟವಂತರು ಎಂದು ನಂಬುತ್ತೇವೆ. ಆದರೆ ಚಾಣಕ್ಯರ ಪ್ರಕಾರ ಕೇವಲ ದುಡ್ಡು ಮಾತ್ರ ವ್ಯಕ್ತಿ ಸಂತೋಷದ ಹಿಂದಿನ ಸೀಕ್ರೆಟ್‌ ಅಲ್ಲ, ದುಡ್ಡೊಂದಿದ್ದರೆ ಮಾತ್ರ ಸಂತೋಷವಾಗಿರಲು ಸಾಧ್ಯವಿಲ್ಲ. ಬದಲಿಗೆ ಯಾವ ವ್ಯಕ್ತಿಯ ಜೀವನದಲ್ಲಿ ಈ ನಾಲ್ಕು ಉತ್ತಮ ಸಂಗತಿಗಳಿವೆಯೋ, ಅವರೇ ನಿಜವಾದ ಅದೃಷ್ಟವಂತರು ಮತ್ತು ಅವರ ಜೀವನ ಸಂತೋಷದಾಯಕವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಆ ನಿಜವಾದ ಅದೃಷ್ಟಶಾಲಿಗಳು ಯಾರು ಎಂಬುದನ್ನು ನೋಡೋಣ ಬನ್ನಿ.

ಉತ್ತಮ ಆಹಾರ ಮತ್ತು ಉತ್ತಮ ಆರೋಗ್ಯ ಪಡೆಯುವವನು ಅದೃಷ್ಟವಂತ:

ಇಂದಿನ ವೇಗದ ಜೀವನದಲ್ಲಿ ಅನೇಕರು ಊಟ, ನಿದ್ರೆ ಬಿಟ್ಟು ಹಣ ಸಂಪಾದನೆ ಮಾಡಲು ಹಾತೊರೆಯುತ್ತಿದ್ದಾರೆ. ಆದರೆ ಚಾಣಕ್ಯರ ಪ್ರಕಾರ ಆರೋಗ್ಯವೇ ನಿಜವಾದ ಶ್ರೀಮಂತಿಕೆ. ಎಷ್ಟೇ ದುಡ್ಡಿದ್ದರೂ, ಆರೋಗ್ಯ ಸರಿಯಿಲ್ಲದಿದ್ದರೆ ಏನು ಪ್ರಯೋಜನ ಹೇಳಿ. ಅಂತಹ ವ್ಯಕ್ತಿ ಸಂತೋಷವಾಗಿರಲು ಕೂಡ ಸಾಧ್ಯವಿಲ್ಲ. ಅದೇ ಆರೋಗ್ಯವಂತ ವ್ಯಕ್ತಿ ನೆಮ್ಮದಿಯ ಮತ್ತು ಸಂತೋಷದಾಯಕ ಜೀವನವನ್ನು ನಡೆಸಬಹುದು. ಅಲ್ಲದೆ ಉತ್ತಮ ಆಹಾರವನ್ನು ಪಡೆಡೆಯುವವನು ಕೂಡ ನಿಜವಾದ ಅದೃಷ್ಟವಂತ ಎನ್ನುತ್ತಾರೆ ಚಾಣಕ್ಯ. ಆಚಾರ್ಯ ಚಾಣಕ್ಯರ ಪ್ರಕಾರ, ಉತ್ತಮ ಆಹಾರ ಮತ್ತು ಉತ್ತಮ ಆರೋಗ್ಯವನ್ನು ಪಡೆಯುವ ಅದೃಷ್ಟ ಹೊಂದಿರುವ ವ್ಯಕ್ತಿಯು ಎಲ್ಲಾ ಸಂತೋಷವನ್ನು ಅನುಭವಿಸಬಹುದು.

ಉತ್ತಮ ಗುಣವುಳ್ಳ ಮಕ್ಕಳ ಪೋಷಕರು ಅದೃಷ್ಟವಂತರು:

ಇಂದಿನ ಪೀಳಿಗೆಯ ಜನ ತಮ್ಮ ತಂದೆ ತಾಯಿಯ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುವದೇ ಇಲ್ಲ. ತಮ್ಮ ಜೀವನವನ್ನು ತಾವು ನೋಡಿಕೊಂಡು ಸುಮ್ಮನಾಗಿಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಗುಣಗಳಿರುವ, ವಿಧೇಯ ಮಕ್ಕಳನ್ನು ಹೊಂದಿರುತ್ತಾರೋ ಅವರೇ ನಿಜವಾದ ಅದೃಷ್ಟವಂತರಾಗಿರುತ್ತಾರೆ. ಅಂತಹ ಮಕ್ಕಳು ತಂದೆ ತಾಯಿಗೆ ನೋವು ಕೊಡದೆ ಅವರನ್ನು ಖುಷಿಯಿಂದ ನೋಡಿಕೊಳ್ಳುತ್ತಾರೆ. ಅಲ್ಲದೆ ಅಂತಹ ಮಕ್ಕಳು ತಮ್ಮ ಹೆತ್ತವರಿಗೆ ಕೀರ್ತಿ ತರುವುದಲ್ಲದೆ, ಇಡೀ ಕುಟುಂಬವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಮೌಲ್ಯಗಳನ್ನು ನೀವು ಏಕೆ ಒದಗಿಸಬೇಕು ಎಂಬುದಕ್ಕೆ ಇದು ಪ್ರಮುಖ ಕಾರಣವಾಗಿದೆ.

ಬೆಂಬಲ ನೀಡುವ ಮತ್ತು ಅರ್ಥಮಾಡಿಕೊಳ್ಳುವ ಸಂಗಾತಿ:

ನಾವು ನಮ್ಮ ಜೀವನದ ಬಹುಪಾಲನ್ನು ನಮ್ಮ ಸಂಗಾತಿಯೊಂದಿಗೆಯೇ ಕಳೆಯುತ್ತೇವೆ. ಹೀಗಿರುವಾಗ ಬೆಂಬಲ ನೀಡದ, ಪ್ರತಿಯೊಂದಕ್ಕೂ ಅನುಮಾನ ಪಡುವ, ನಿತ್ಯ ಹಿಂಸೆ ನೀಡುವ ಸಂಗಾತಿಯಿದ್ದರೆ ಜೀವನವೇ ನರಕವಾಗಿಬಿಡುತ್ತದೆ. ಅದೇ ಉತ್ತಮ ಗುಣವುಳ್ಳ, ಬೆಂಬಲ ನೀಡುವ, ಬೆನ್ನೆಲುಬಾಗಿ ನಿಲ್ಲುವ ಸಂಗಾತಿಯಿದ್ದರೆ ಜೀವನ ಸಂತೋಷದಾಯಕವಾಗಿರುತ್ತದೆ. ಗಂಡ ಮತ್ತು ಹೆಂಡತಿ ಪರಸ್ಪರ ಬೆಂಬಲಿಸಿದಾಗ, ನಂಬಿಕೆ ಗಾಢವಾಗಿದ್ದಾಗ ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿ ಮೇಲುಗೈ ಸಾಧಿಸುತ್ತದೆ. ಇದೇ ಕಾರಣಕ್ಕೆ ಯಾರು ಉತ್ತಮ ಸಂಗಾತಿಯನ್ನು ಹೊಂದಿದ್ದಾರೋ ಅವರೇ ನಿಜವಾದ ಅದೃಷ್ಟವಂತರು ಎಂದು ಚಾಣಕ್ಯರು ಹೇಳಿರೋದು.

ಇದನ್ನೂ ಓದಿ: ಎಂದಿಗೂ ಇಂತಹ ಜನಗಳಿಗೆ ಸಹಾಯ ಮಾಡುವ ತಪ್ಪನ್ನು ಮಾಡಲೇಬೇಡಿ

ಸಂತೃಪ್ತ ಜೀವನ ನಡೆಸುವವರೇ ನಿಜವಾದ ಅದೃಷ್ಟವಂತರು:

ಯಾವುದಕ್ಕೂ ದುರಾಸೆಯಿಲ್ಲದ, ಇತರರ ಬಗ್ಗೆ ಅಸೂಯೆಪಡದ, ತನ್ನಲ್ಲಿರುವದರಲ್ಲಿ ಸಂತೋಷಪಡುವ ವ್ಯಕ್ತಿ ಯಾವಾಗಲೂ ಸಂತೋಷವಾಗಿರುತ್ತಾನೆ. ಅದೇ ಪ್ರತಿಯೊಂದಕ್ಕೂ ದುರಾಸೆ ಪಡುವ, ಬೇರೆಯವರ ಬಗ್ಗೆ ಅಸೂಯೇ ಪಡುವ ವ್ಯಕ್ತಿ ಇತರರ ಬಗ್ಗೆ ಯೋಚಿಸುತ್ತಲೇ ಸಮಯ ಕಳೆಯುತ್ತಾನೆ. ಅವನಿಗೆ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ. ಅದೇ ಯಾವುದೇ ದುರಾಸೆಯಿಲ್ಲದೆ ಸಂತೃಪ್ತ ಜೀವನವನ್ನು ನಡೆಸುವ ವ್ಯಕ್ತಿ ನೆಮ್ಮದಿಯಾಗಿರುತ್ತಾನೆ. ಯಾರು ಸಂತೃಪ್ತ ಜೀವನ ನಡೆಸುತ್ತಾರೋ ಅವರೇ ನಿಜವಾದ ಅದೃಷ್ಟವಂತರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​: ಬೈಕ್​​ಗಳು ಜಖಂ
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಶೂನಲ್ಲಿ ಹೈಡ್ರೋಪೋನಿಕ್ ಗಾಂಜಾ ಇಟ್ಟುಕೊಂಡು ಬಂದು ಬೆಂಗಳೂರಿನಲ್ಲಿ ಲಾಕ್
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ