AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿದರೆ ನೀವು ಕೂಡ ಜೀವನದಲ್ಲಿ ಶ್ರೀಮಂತಿಕೆ ಗಳಿಸಬಹುದು

ಜೀವನದಲ್ಲಿ ಶ್ರೀಮಂತಿಕೆಯನ್ನು ಗಳಿಸಬೇಕು, ರಿಚ್‌ ಆಗಿ ಜೀವನ ನಡೆಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಕಷ್ಟಪಟ್ಟು ದುಡಿಯುವವರು ಅನೇಕರಿದ್ದಾರೆ. ಕಷ್ಟಪಟ್ಟು ದುಡಿದ್ರೆ ಮಾತ್ರ ಸಾಲದು ಸಂಪತ್ತು, ಶ್ರೀಮಂತಿಕೆ ಗಳಿಸಲು ಈ ಕೆಲವೊಂದು ಅಭ್ಯಾಸಗಳನ್ನು ಪಾಲಿಸಲೇಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ಕಡು ಬಡವನನ್ನೂ ಸಹ ಶ್ರೀಮಂತನನನ್ನಾಗಿ ಮಾಡುವ ಆ ಒಳ್ಳೆಯ ಅಭ್ಯಾಸಗಳು ಯಾವುದೆಂಬುದನ್ನು ನೋಡೋಣ ಬನ್ನಿ.

Chanakya Niti: ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿದರೆ ನೀವು ಕೂಡ ಜೀವನದಲ್ಲಿ ಶ್ರೀಮಂತಿಕೆ ಗಳಿಸಬಹುದು
ಸಾಂದರ್ಭಿಕ ಚಿತ್ರ Image Credit source: vecteezy
ಮಾಲಾಶ್ರೀ ಅಂಚನ್​
|

Updated on: Oct 20, 2026 | 6:46 PM

Share

ಯಶಸ್ವಿ ಜೀವನವನ್ನು ನಡೆಸಬೇಕು, ಶ್ರೀಮಂತಿಕೆಯನ್ನು (wealth) ಗಳಿಸಬೇಕು ಎಂಬ ಹಂಬಲ ಯಾರಿಗೆ ತಾನೇ ಇರೋಲ್ಲ. ಹಣ ಸಂಪಾದನೆ ಮಾಡುವ ಸಲುವಾಗಿ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಹೆಚ್ಚಿನವರಿಗೆ ಎಷ್ಟೇ ಶ್ರಮ ವಹಿಸಿ ದುಡಿದರೂ ಜೀವನದಲ್ಲಿ ಮುಂದೆ ಬರಲು ತುಂಬಾನೇ ಕಷ್ಟಸಾಧ್ಯ. ಅನೇಕರಿಗೆ ಇದೊಂದು ಸವಾಲು ಅಂತಾನೇ ಹೇಳಬಹುದು. ಈ ಸವಾಲನ್ನು ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಹೇಗೆ ಎಂಬ ಸರಳ ಸಲಹೆಯನ್ನು ಆಚಾರ್ಯ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಅವರ ಪ್ರಕಾರ ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಡವನು ಸಹ ರಾಜನಂತೆ ಜೀವನ ನಡೆಸುತ್ತಾರೆ. ಹಾಗಿದ್ರೆ ಶ್ರೀಮಂತಿಕೆಯನ್ನು ಗಳಿಸಲು ವ್ಯಕ್ತಿಯೊಬ್ಬ ಅಳವಡಿಸಿಕೊಳ್ಳಲೇಬೇಕಾದ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಕಠಿಣ ಪರಿಶ್ರಮದಿಂದ ಎಂದಿಗೂ ಹಿಂಜರಿಯಬಾರದು:

ಕಷ್ಟಪಟ್ಟು ಕೆಲಸ ಮಾಡಲು ಹೆದರುವ ಹಾಗೂ ಸೋಮಾರಿತನವನ್ನು ತೋರುವ ವ್ಯಕ್ತಿ  ಎಂದಿಗೂ ಶ್ರೀಮಂತನಾಗಲಾರ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಶ್ರೀಮಂತರಾಗಲು ಮೊದಲ ಮಂತ್ರ “ಕಠಿಣ ಪರಿಶ್ರಮ”. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ.

ಸಮಯವನ್ನು ವ್ಯರ್ಥ ಮಾಡಬಾರದು:

ಸಮಯವನ್ನು ವ್ಯರ್ಥ ಮಾಡುವವರು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧ್ಯವಿಲ್ಲ. ಅದೇ ರೀತಿ ಶ್ರೀಮಮಂತಿಕೆಯನ್ನು ಗಳಿಸಲು ಸಹ ಸಾಧ್ಯವಿಲ್ಲ. ಹೌದು ಇಂದಿನ ಕೆಲಸಗಳನ್ನು ನಾಳೆಗೆ  ಮುಂದೂಡುವ ವ್ಯಕ್ತಿ, ಅಥವಾ ಸೋಮಾರಿತನದಿಂದ ಸಮಯವನ್ನು ವ್ಯರ್ಥ ಮಾಡುವವನು ಜೀವನದಲ್ಲಿ ಏನನ್ನೂ ಗಳಿಸಲು ಸಾಧ್ಯವಿಲ್ಲ. ಸಿಕ್ಕ ಸಮಯ ಹಾಗೂ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವವನು ಮಾತ್ರ ಜೀವನದಲ್ಲಿ ಯಶಸ್ಸು ಹಾಗೂ ಶ್ರೀಮಂತಿಕೆಯನ್ನು ಗಳಿಸುತ್ತಾನೆ.

ವ್ಯರ್ಥ ಖರ್ಚುಗಳನ್ನು ಮಾಡಲೇಬಾರದು:

ಶ್ರೀಮಂತಿಕೆ ಗಳಿಸಲು ಕಷ್ಟಪಟ್ಟು ದುಡಿದರೆ ಮಾತ್ರ ಸಾಕಾಗುವುದಿಲ್ಲ, ಸಂಪಾದಿಸಿದ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಕೂಡ ತಿಳಿದಿರಬೇಕು.  ದುಡ್ಡಿದ್ದ ತಕ್ಷಣ ಏನೇನೋ ಖರೀದಿಸಿ, ವ್ಯರ್ಥ ಮಾಡುವ ಬದಲು ಅದೇ ಹಣವನ್ನು ಉಳಿತಾಯ ಮಾಡಬೇಕು, ಜೊತೆಗೆ ಸರಿಯಾದ ಸ್ಥಳದಲ್ಲಿ ಹೂಡಿಕೆಯನ್ನು ಮಾಡಬೇಕು. ಹಣ ಉಳಿಸುವ ಅಭ್ಯಾಸವು ನಿಮ್ಮ ದೊಡ್ಡ ಆಸ್ತಿ ಎಂದು ಚಾಣಕ್ಯ ಹೇಳುತ್ತಾರೆ. ಅದೇ ಹಣವನ್ನು ಯೋಚಿಸದೆ ವ್ಯರ್ಥ ಮಾಡುವ ವ್ಯಕ್ತಿ ಬಡವನಾಗಿಯೇ ಉಳಿಯುತ್ತಾನೆ.

ಇದನ್ನೂ ಓದಿ: 50 ದಾಟಿದ್ರೂ ಯುವಕರಂತೆ ಯಂಗ್‌ ಆಗಿ ಕಾಣಿಸಲು ದೈನಂದಿನ ಜೀವನದಲ್ಲಿ ಈ ಸರಳ ಸಲಹೆಗಳನ್ನು ಅನುಸರಿಸಿ

ಬಹು ಆದಾಯದ ಮೂಲಗಳನ್ನು ರಚಿಸಿ:

ಆರ್ಥಿಕ ಸ್ಥಿರತೆಯ ಬಗ್ಗೆ ಚಾಣಕ್ಯ ಒಂದು ಪ್ರಮುಖ ಅಂಶವನ್ನು ಒತ್ತಿ ಹೇಳಿದ್ದಾರೆ.  ಅದೇನೆಂದರೆ ಒಬ್ಬ ವ್ಯಕ್ತಿ ಕೇವಲ ಒಂದು ಆದಾಯದ ಮೂಲವನ್ನು ಮಾತ್ರ ಅವಲಂಬಿಸಬಾರದು. ಒಂದೇ ಒಂದು ಆದಾಯದ ಮೂಲವಿದ್ದರೆ, ಬಿಕ್ಕಟ್ಟುಗಳನ್ನು ಎದುರಿಸಲು ಕಷ್ಟಸಾಧ್ಯವಾಗಬಹುದು ಮತ್ತು ಏಳಿಗೆಯನ್ನು ಸಾಧಿಸಲು ಕಷ್ಟಸಾಧ್ಯವಾಗಬಹುದು. ಆದ್ದರಿಂದ, ಬಹು ಆದಾಯದ ಮೂಲಗಳನ್ನು ರಚಿಸಿ. ಒಂದು ಕೆಲಸದೊಂದಿಗೆ, ಇನ್ನೊಂದು ಏನಾದರೂ ಮಾಡಿ. ಚಿಕ್ಕ ವಯಸ್ಸಿನಿಂದಲೇ ಈ ದಿಕ್ಕಿನಲ್ಲಿ ಶ್ರಮಿಸುವವರು ಭವಿಷ್ಯದಲ್ಲಿ ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಹಣವನ್ನು ಹೂಡಿಕೆ ಮಾಡಿ, ಖರ್ಚು ಮಾಡಬೇಡಿ:

ಚಾಣಕ್ಯ ನೀತಿಯ ಪ್ರಕಾರ, ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡುವವರು ಮಾತ್ರ ಕಾಲಾನಂತರದಲ್ಲಿ ಏಳಿಗೆ ಹೊಂದುತ್ತಾರೆ. ಅಜಾಗರೂಕ ಖರ್ಚು ಬಡತನಕ್ಕೆ ಕಾರಣವಾಗುತ್ತದೆ, ಆದರೆ ಹೂಡಿಕೆ ಭವಿಷ್ಯವನ್ನು ಭದ್ರಪಡಿಸುತ್ತದೆ. ಅದೇ ರೀತಿ ಜೀವನದಲ್ಲಿ ಏಳಿಗೆಯನ್ನು ಸಾಧಿಸಲು ನಾವು ಯಾವ ರೀತಿಯ ಜನರೊಂದಿಗೆ ಇರುತ್ತೇವೆ ಎಂಬುವುದು ಸಹ ಬಹಳ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More