AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಆಚಾರ್ಯ ಚಾಣಕ್ಯರು ನಮ್ಮ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಯಶಸ್ವಿ ಜೀವನ ನಡೆಸಲು ಏನೆಲ್ಲಾ ಮಾಡಬೇಕು ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ನಾವು ಜೀವನದಲ್ಲಿ ಎಂದಿಗೂ ಈ ಕೆಲವು ಜನರನ್ನು ಅವಮಾನಿಸಲೇಬಾರದು ಎಂದಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾರನ್ನು ಜೀವನದಲ್ಲಿ ಯಾರನ್ನು ಅವಮಾನಿಸಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: May 05, 2026 | 10:04 PM

Share

ಚಾಣಕ್ಯ ನೀತಿಯ (Chanakya Niti) ಪ್ರಕಾರ, ನಮ್ಮ ನಡವಳಿಕೆಯು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮಾತ್ರವಲ್ಲ, ಉತ್ತಮ ನಡವಳಿಕೆಯೂ ಮುಖ್ಯ. ನಮ್ಮ ನಡವಳಿಕೆ ಉತ್ತಮ ರೀತಿಯಲ್ಲಿ ಇದ್ದಾಗ ಮಾತ್ರ ಯಶಸ್ಸನ್ನು ಗಳಿಸಲು, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ. ಅದೇ ರೀತಿ ಅಹಂಕಾರ ಭಾವವನ್ನು ಬೆಳೆಸಿಕೊಂಡು ಈ ಕೆಲವು ಜನರನ್ನು ಅವಮಾನಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಜೀವನದಲ್ಲಿ ಯಾವೆಲ್ಲಾ ಜನರನ್ನು ತಪ್ಪಿಯೂ ಅವಮಾನಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ:

ಗುರುಗಳನ್ನು ಅವಮಾನಿಸಬೇಡಿ: ಗುರುವಿಲ್ಲದೆ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಗುರುವನ್ನು ಅಗೌರವಿಸಬಾರದು. ಗುರುವಿನ ಆದೇಶಗಳನ್ನು ಪಾಲಿಸದಿರುವುದು, ಅವರನ್ನು ಅವಮಾನಿಸುವುದು ಜೀವನದಲ್ಲಿ ಅನೇಕ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಜನರನ್ನು ಗೇಲಿ ಮಾಡುವುದರಿಂದ ಅಥವಾ ಅವರನ್ನು ಕೀಳಾಗಿ ನೋಡುವುದರಿಂದ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಪೋಷಕರು: ನಾವು ನಮ್ಮ ಹೆತ್ತವರನ್ನು ಎಂದಿಗೂ ಅವಮಾನಿಸಬಾರದು. ಆಚಾರ್ಯ ಚಾಣಕ್ಯರ ಪ್ರಕಾರ ತಂದೆ ತಾಯಿಯನ್ನು ಅವಮಾನಿಸುವುದು, ವೃದ್ಧಾಪ್ಯದಲ್ಲಿ ಅವರನ್ನು ನಿರ್ಲಕ್ಷಿಸುವುದು ಪಾಪ. ನಮ್ಮ ಹೆತ್ತವರ ಪ್ರೀತಿ ಮತ್ತು ತ್ಯಾಗಗಳನ್ನು ನಾವು ಗುರುತಿಸದಿದ್ದರೆ, ಅವರಿಗೆ ಗೌರವವನ್ನು ನೀಡದಿದ್ದರೆ ಜೀವನದಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ಚಾಣಕ್ಯ.

ಒಳ್ಳೆಯ ಜನರು: ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವ ಜನರನ್ನು ಗೌರವಿಸುವುದು ಬಹಳ ಮುಖ್ಯ. ಅಂತಹ ಒಳ್ಳೆಯ ಜನರನ್ನು ಗೌರವಿಸುವುದರಿಂದ ಮನಸ್ಸಿನ ಶಾಂತಿ ಬರುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಸದಾ ಇತರರ ಮಾತನ್ನು ಕೇಳುವುದರಿಂದ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಗೊತ್ತಾ?

ಜ್ಞಾನವನ್ನು ಹೊಂದಿರುವ ಜನರನ್ನು ಅವಮಾನಿಸಬಾರದು: ಚಾಣಕ್ಯರ ಪ್ರಕಾರ, ಅನುಭವ ಮತ್ತು ಆಳವಾದ ಜ್ಞಾನದ ಸಂಪತ್ತನ್ನು ಹೊಂದಿರುವ ಜನರ ಸಹವಾಸವು ಅಮೂಲ್ಯವಾದುದು. ಇಂತಹ ವ್ಯಕ್ತಿಗಳನ್ನು ಅವಮಾನಿಸುವುದು ಬೌದ್ಧಿಕ ಬಡತನದ ಸಂಕೇತ, ಇದರಿಂದಾಗಿ ಒಬ್ಬ ವ್ಯಕ್ತಿ ಉತ್ತಮ ಜ್ಞಾನ ಪಡೆಯಲು ಸಾಧ್ಯವಿಲ್ಲ. ಅದು ಅವನ ಅವನತಿಗೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ
ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ
ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ
ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ
ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ
ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ
ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ
ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ
ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಸ್ಪಷ್ಟನೆ
ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ
ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ
ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ; ಸುವೇಂದು ಅಧಿಕಾರಿ
ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಬಿಜೆಪಿ ಸಹಿಸುವುದಿಲ್ಲ; ಸುವೇಂದು ಅಧಿಕಾರಿ