AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಉಚಿತವಾಗಿ ಪಡೆಯುವ ವಸ್ತುಗಳು ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತೆ ಗೊತ್ತಾ?

ಆಚಾರ್ಯ ಚಾಣಕ್ಯರು ರಾಜಕೀಯ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಉಚಿತವಾಗಿ ಪಡೆಯುವ ಏನಾದರೂ ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತದೆ ಎಂಬುದನ್ನೂ ಸಹ ವಿವರಿಸಿದ್ದಾರೆ. ಯಾವುದೇ ಶ್ರಮವಿಲ್ಲದೆ ಉಚಿತವಾಗಿ ಪಡೆಯುವ ಯಾವುದೇ ಸಂಗತಿಗಳಾಗಿದ್ದರೂ ಸರಿ, ಅವು ಖುಷಿಯನ್ನು ನೀಡಬಹುದು. ಆದರೆ ಇವು ವ್ಯಕ್ತಿಯನ್ನು ಕ್ರಮೇಣವಾಗಿ ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Chanakya Niti: ಉಚಿತವಾಗಿ ಪಡೆಯುವ ವಸ್ತುಗಳು ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತೆ ಗೊತ್ತಾ?
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Feb 15, 2026 | 4:19 PM

Share

ಪುಕ್ಕಟ್ಟೆ ಏನಾದ್ರೂ ಸಿಗುತ್ತೆ ಅಂದ್ರೆ ಅದನ್ನು ಪಡೆಯಲು ಜನ ನಾಮುಂದು ತಾ ಮುಂದು ಅಂತ ಧಾವಿಸ್ತಾರೆ. ಈ ರೀತಿ ಉಚಿತವಾಗಿ ಪಡೆಯುವುದು ಮನಸ್ಸಿಗೆ ಖುಷಿಯನ್ನು ನೀಡಬಹುದು, ಆದ್ರೆ ಇದು ವ್ಯಕ್ತಿಯನ್ನು ಕ್ರಮೇಣ ದುರ್ಬಲಗೊಳಿಸುತ್ತದೆ ಎಂದು ಆಚಾರ್ಯ ಚಾಣಕ್ಯರು (Acharya Chanakya) ಎಚ್ಚರಿಕೆ ನೀಡಿದ್ದಾರೆ. ಉಚಿತವಾಗಿ ಏನಾದ್ರೂ ಸಿಗುತ್ತಿದೆ ಅಂದ್ರೆ ಅದನ್ನು ಪಡೆಯುವುದರಲ್ಲಿ ತಪ್ಪೇನಿದೆ ಎಂದು ಹಲವರು ಭಾವಿಸಬಹುದು ಆದ್ರೆ ಉಚಿತವಾಗಿ ಪಡೆಯುವ ಏನಾದರೂ ಸರಿ ಅದು ಮನುಷ್ಯನ ಸ್ವಾಭಿಮಾನಕ್ಕೆ ಹಾನಿಯುಂಟು ಮಾಡುತ್ತದೆ ಎಂದಿದ್ದಾರೆ. ಹಾಗಿದ್ರೆ ಉಚಿತವಾಗಿ ಲಭಿಸುವ ಸಂಗತಿಗಳು ಮನಷ್ಯನಿಗೆ ಯಾವೆಲ್ಲಾ ರೀತಿಯಲ್ಲಿ ಹಾನಿ ಮಾಡುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಪ್ರತಿಯೊಂದು ಉಚಿತವಾಗಿ ಲಭಿಸಿದರೆ ಏನಾಗುತ್ತೆ ಗೊತ್ತಾ?

ಕಠಿಣ ಪರಿಶ್ರಮದ ಅಭ್ಯಾಸ ಕೊನೆಗೊಳ್ಳುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಶ್ರಮವಿಲ್ಲದೆ ಏನನ್ನಾದರೂ ಪಡೆದಾಗ, ಅವನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮರೆತುಬಿಡುತ್ತಾನೆ, ಪ್ರತಿಯೊಂದು ಸುಲಭವಾಗಿ ಖರ್ಚಿಲ್ಲದೆ ದಕ್ಕಬೇಕು ಎಂದು ಬಯಸುತ್ತಾನೆ.  ಕಠಿಣ ಪರಿಶ್ರಮದ ಮೂಲಕ ಏನನ್ನಾದರೂ ಗಳಿಸಿದಾಗ ಮಾತ್ರ ಮನುಷ್ಯ ಬಲಶಾಲಿಯಾಗಲು ಸಾಧ್ಯ, ಅದೇ ಉಚಿತವಾಗಿ ಸಿಗುವ ಭಾಗ್ಯಗಳು ಆತನನ್ನು ಸೋಮಾರಿ ಮತ್ತು ದುರ್ಬಲನನ್ನಾಗಿ ಮಾಡುತ್ತವೆ.

ಸ್ವಾಭಿಮಾನಕ್ಕೆ ಹಾನಿ: ಚಾಣಕ್ಯ ನೀತಿಯ ಪ್ರಕಾರ, ನೀವು ಪದೇ ಪದೇ ಯಾವುದೇ ವಸ್ತು, ಸಂಗತಿಯನ್ನಾದರೂ ಉಚಿತವಾಗಿ ಸ್ವೀಕರಿಸಿದರೆ, ನಿಮ್ಮ ಸ್ವಾಭಿಮಾನ ಕ್ರಮೇಣ ಕುಸಿಯುತ್ತದೆ. ಪ್ರತಿಯೊಂದನ್ನೂ ಉಚಿತವಾಗಿ ಸಿಗಬೇಕೆಂದು ಬಯಸುವ ಜನರು ಇತರರನ್ನು ಅವಲಂಬಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳು ಜೀವನದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಿರಂತರವಾಗಿ ಇತರರಿಂದ ಬೆಂಬಲವನ್ನು ಬಯಸುತ್ತಾರೆ. ಕೊನೆಗೆ ಇದು ಅವರ  ವ್ಯಕ್ತಿತ್ವವನ್ನೇ ದುರ್ಬಲಗೊಳಿಸುತ್ತದೆ, ಸ್ವಾಭಿಮಾನವನ್ನೇ ಕಸಿದುಕೊಳ್ಳುತ್ತದೆ.

ದುರಾಸೆಗೆ ಕಾರಣವಾಗುತ್ತದೆ: ಚಾಣಕ್ಯ ನೀತಿಯ ಪ್ರಕಾರ, ನೀವು ಪ್ರತಿಯೊಂದನ್ನೂ ಉಚಿತವಾಗಿ ಪಡೆಯಲು ಪ್ರಾರಂಭಿಸಿದಾಗ, ದುರಾಸೆ ನಿಮ್ಮೊಳಗೆ ಹುಟ್ಟುತ್ತದೆ. ನೀವು ಎಲ್ಲವನ್ನೂ ಉಚಿತವಾಗಿಯೇ ಸಿಗಬೇಕೆಂದು ಬಯಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೀರಿ. ಯಾವುದೇ ಪ್ರಯತ್ನ, ಪರಿಶ್ರಮವಿಲ್ಲದೆ ಎಲ್ಲವೂ ಸಲುಭವಾಗಿ ದಕ್ಕಬೇಕು ಎಂದು ಬಯಸುತ್ತೀರಿ. ಚಾಣಕ್ಯರ ಪ್ರಕಾರ, ದುರಾಸೆಯು ವ್ಯಕ್ತಿಯ ದೊಡ್ಡ ಶತ್ರು. ದುರಾಸೆಯು ನಿಮ್ಮೊಳಗೆ ಬೆಳೆದಾಗ, ಅದು ವಂಚನೆ ಮತ್ತು ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮನುಷ್ಯನ ನೆಮ್ಮದಿ ಹಾಳಾಗಲು ಕಾರಣವೇ ಸಂಗತಿಗಳು

ಮೌಲ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ: ನೀವು ಎಲ್ಲವನ್ನೂ ಉಚಿತವಾಗಿ ಪಡೆಯಲು ಪ್ರಾರಂಭಿಸಿದಾಗ, ನೀವು ಮೌಲ್ಯವನ್ನು ಕಳೆದುಕೊಳ್ಳುತ್ತೀರಿ. ಕಷ್ಟಪಟ್ಟು ಸಂಪಾದಿಸಿದ ವಸ್ತುಗಳು ಮೌಲ್ಯಯುತವಾಗುತ್ತವೆ, ಅದೇ  ಏನನ್ನಾದರೂ ಉಚಿತವಾಗಿ ಪಡೆದಾಗ ನೀವು ಅವುಗಳನ್ನು ಬೇಗನೆ ವ್ಯರ್ಥ ಮಾಡುತ್ತೀರಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅಲ್ಲದೆ ಇದರಿಂದ ನಿಮ್ಮ ಮೌಲ್ಯವೂ ಕುಂಠಿತಗೊಳ್ಳುತ್ತದೆ.

ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಎದುರಾಗಬಹುದು:  ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಂದು ಉಚಿತವಾಗಿ ಸಿಗಬೇಕೆಂದು ಬಯಸುವವರು ಜೀವನದಲ್ಲಿ ಎಂದಿಗೂ ಪ್ರಗತಿ ಹೊಂದುವುದಿಲ್ಲ. ಅಂತಹ ಜನರಿಗೆ ಹೋರಾಟ ಮತ್ತು ಕಠಿಣ ಪರಿಶ್ರಮದ ಒಂದು ಚೂರು ಕಲ್ಪನೆಯೇ ಇರುವುದಿಲ್ಲ, ಹೋರಾಟದ ಸಂದರ್ಭ ಬಂದಾಗ ಅವರು ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಹ ಸಾಧ್ಯವಾಗುವುದಿಲ್ಲ, ಕೊನೆಗೆ ಅವರು ಜೀವನದಲ್ಲಿ ಸೋತು ಬಿಡುತ್ತಾರೆ. ಅದೇ ಕಷ್ಟಪಟ್ಟು ದುಡಿಯುವ ವ್ಯಕ್ತಿಯು ಪ್ರತಿಯೊಂದು ಪರಿಸ್ಥಿತಿಯಲ್ಲೂ ತನ್ನನ್ನು ತಾನು ನಿಭಾಯಿಸಿಕೊಂಡು, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ