Solo Trip: ಯುವತಿಯರೇ ಸೋಲೊ ಟ್ರಿಪ್ ಹೋಗಬೇಕೆಂದು ಬಯಸುತ್ತೀರಾ? ಈ ಸುರಕ್ಷಿತ ಕ್ರಮಗಳನ್ನು ತಿಳಿದುಕೊಳ್ಳಿ

ನೀವು ಮೊದಲ ಬಾರಿಗೆ ಏಕಾಂಗಿಯಾಗಿ ಟ್ರಿಪ್ ಹೋಗುತ್ತಿರಲಿ ಅಥವಾ ನೀವು ಅನುಭವಿ ಪ್ರವಾಸಿಗರಾಗಿರಲಿ, ಈ ಕೆಲವೊಂದು ಪ್ರವಾಸ ಸಲಹೆಗಳು ನಿಮಗೆ ಆತ್ಮವಿಶ್ವಾಸವನ್ನು ನೀಡುವುದರ ಜೊತೆಗೆ ನೀವು ಹೊಸ ಸ್ಥಳಗಳನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುತ್ತದೆ.

Solo Trip: ಯುವತಿಯರೇ ಸೋಲೊ ಟ್ರಿಪ್ ಹೋಗಬೇಕೆಂದು ಬಯಸುತ್ತೀರಾ? ಈ ಸುರಕ್ಷಿತ ಕ್ರಮಗಳನ್ನು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 14, 2023 | 11:29 AM

ಈಗಿನ ಜನತೆ ಹೆಚ್ಚಾಗಿ ಸ್ವಾತಂತ್ರ್ಯವನ್ನು ಬಯಸುವವರಾಗಿರುತ್ತಾರೆ. ಅದೇ ರೀತಿ ಒಂಟಿಯಾಗಿ ಎಲ್ಲಾದರೂ ದೂರ ಪ್ರವಾಸ ಹೋಗಬೇಕೆಂದು ಬಯಸುತ್ತಾರೆ. ಈ ಸೋಲೋ ಟ್ರಿಪ್ ಹೋಗುವುದರಿಂದ ಅವರಲ್ಲಿ ಆತ್ಮವಿಶ್ವಾಸ ಬೆಳೆಯುವುದರ ಜೊತೆಗೆ ಒಂಟಿಯಾಗಿ ಸವಾಲುಗಳನ್ನು ಎದದುರಿಸುವ ಛಲವನ್ನು ಬೆಳೆಸುತ್ತದೆ. ಇತ್ತೀಚಿಗೆ ಈ ಸೋಲೊ ಟ್ರಿಪ್ ಒಂದು ಟ್ರೆಂಡ್ ಆಗಿದೆ. ಮಹಿಳೆಯರು ಕೂಡಾ ಸೋಲೋ ಅಥವಾ ಏಕಾಂಗಿಯಾಗಿ ಟ್ರಿಪ್ ಹೋಗಲು ಬಯಸುತ್ತಾರೆ. ಹೆಚ್ಚಿನ ಮಹಿಳೆಯರು ಸಾಹಸಿ ಅನುಭವ, ಸ್ವಾತಂತ್ರ್ಯ ಮತ್ತು ಹೊಸ ಹೊಸ ಅನುಭವಗಳನ್ನು ಪಡೆಯಲು ಬಯಸುತ್ತಾರೆ. ಆದರೂ ಒಂಟಿಯಾಗಿ ಪ್ರಯಾಣಿಸುವುದು ಕೆಲವೊಂದು ಬಾರಿ ಕಷ್ಟಕರವಾಗಬಹುದು ಮತ್ತು ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಹಾಗಾಗಿ ಸರಿಯಾದ ಯೋಜನೆ, ಸಿದ್ದತೆ ಮತ್ತು ಸುರಕ್ಷಿತ ಕ್ರಮಗಳನ್ನು ಮುಂಚಿತವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಸುರಕ್ಷಿತ ಮತ್ತು ಆನಂದದಾಯಕ ಸೋಲೋ ಟ್ರಿಪ್ ಹೋಗಬಹುದು.

ಬಿಸಿನೆಸ್ ಡೆವಲಪ್ಮೆಂಟ್ ಜಂಪಿನ್ ಹೈಟ್ಸ್​​ನ ನಿರ್ದೇಶಕಿ ನಿಹಾರಿಕಾ ನಿಗಮ್ ಅವರು ಮಹಿಳೆಯರಿಗೆ ಸುಗಮ ಮತ್ತು ಆನಂದದಾಯಕ ಸೋಲೋ ಟ್ರಿಪ್ನ ಅನುಭವವನ್ನು ಪಡೆಯಲು ಸಹಾಯ ಮಾಡುವ ಕೆಲವೊಂದು ಸಲಹೆಗಳನ್ನು ತಿಳಿಸಿಕೊಟ್ಟಿಕೊಟ್ಟಿದ್ದಾರೆ.

ಮುಂಚಿತವಾಗಿ ಯೋಜನೆ ಮಾಡಿ: ಸಾಮಾನ್ಯವಾಗಿ ಪ್ರವಾಸ ಹೋಗುವಾಗ ಯಾವ ಸಾರಿಗೆ ವಿಧಾನವನ್ನು ಆಯ್ಕೆ ಮಾಡಬೇಕು?, ರಾತ್ರಿಯಲ್ಲಿ ರಸ್ತೆಗಳು ಎಷ್ಟು ಜನಸಂದಣಿಯಿಂದ ಕುಡಿರುತ್ತವೆ? ನೀವು ಪ್ರವಾಸ ಹೋಗಬೇಕೆಂದಿರು ಸ್ಥಳ ನಿಮ್ಮ ಮನೆಯಿಂದ ಎಷ್ಟು ದೂರದಲ್ಲಿದೆ ಎಂಬುವುದನ್ನು ಮುಂಚಿತವಾಗಿಯೇ ಯೋಜನೆ ಮಾಡಬೇಕಾಗುತ್ತದೆ.

ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಿ: ಪೆಪ್ಪರ್ ಸ್ಪ್ರೇ, ಹ್ಯಾಂಡ್ ಸ್ಯಾನಿಟೈಸರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕೈಯಲ್ಲಿ ಸ್ವಲ್ಪ ಹಣ. ಹೀಗೆ ಅಗತ್ಯವಾದ ಮೂಲಭೂತ ವಸ್ತುಗಳನ್ನು ನಿಮ್ಮ ಬ್ಯಾಗ್​​ನಲ್ಲಿ ಇಟ್ಟುಕೊಳ್ಳಿ.

ಇದನ್ನೂ ಓದಿ: Road Trip Tips: ಬೇಸಿಗೆಯಲ್ಲಿ ರೋಡ್ ಟ್ರಿಪ್ ಹೋಗಲು ಯೋಜಿಸುತ್ತಿದ್ದೀರಾ? ಈ ಸಲಹೆ ಪಾಲಿಸಿ

ಸಾಹಸ: ಪ್ರವಾಸದ ಸ್ಥಳಗಳಲ್ಲಿ ಸಾಹಾಸಿಮಯ ಚಟುವಟಿಕೆಗಳನ್ನು ಮಾಡುವಾಗ, ಅದಕ್ಕೆ ಬೇಕಾದ ಸಾಹಸ ನಿರ್ವಾಹಕರನ್ನು ಆಯ್ಕೆಮಾಡುವಾಗ, ಅವರ ಎಷ್ಟು ಪರಿಣಿತಿಯನ್ನು ಹೊಂದಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ನಿಮ್ಮ ಸುರಕ್ಷತೆಯ ಕಾರಣದಿಂದಾಗಿ ನಿರ್ವಾಹಕರ ಪರಿಣಿತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ವಸತಿ: ನೀವು ಪ್ರವಾಸಕ್ಕೆ ಹೋದ ಸಮಯದಲ್ಲಿ ನೀವು ಉಳಿದುಕೊಳ್ಳಲು ಸುರಕ್ಷಿತವಾದ ರೂಮ್ ಅಥವಾ ವಸತಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನೀವು ಮೊದಲೇ ರೂಮ್ ಗಳ ರಿವ್ಯೂ ಚೆಕ್ ಮಾಡಿ, ಒಳ್ಳೆಯ ರೇಟಿಂಗ್ಸ್ ಇದ್ದರೆ ಮಾತ್ರ ಅಂತಹ ರೂಮ್​​ಗಳನ್ನು ಆಯ್ಕೆ ಮಾಡಿ.

ಪಾನೀಯಗಳನ್ನು ನೀವೇ ತಯಾರಿಸಿಕೊಳ್ಳಿ: ಯಾವುದೇ ರೀತಿಯಲ್ಲಿ ಹೊರಗಡೆ ಸಿಗುವ ಪಾನೀಯಗಳನ್ನು ಕುಡಿಯದೇ ನೀವೇ ಸ್ವತಃ ಪಾನೀಯಗಳನ್ನು ತಯಾರಿಸಿಕೊಳ್ಳಿ. ಇದು ನಿಮ್ಮ ಸುರಕ್ಷಿತ ಮತ್ತು ಆರೋಗ್ಯದ ಕಾರಣದಿಂದ ತುಂಬಾ ಒಳ್ಳೆಯದು.

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ