AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fertility Health: ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳಿಯಲು ಬಯಸುವಿರಾ? ಮೊದಲು ಈ ನಿಯಮ ಅರ್ಥಮಾಡಿಕೊಳ್ಳಿ

ನಿಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಯಾವುದೇ ತೊಡಕುಗಳು ಆಗದಂತೆ ಸರಿಯಾದ ಸಮಯದಲ್ಲಿ ಗರ್ಭ ಧರಿಸಿ. ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

Fertility Health: ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳಿಯಲು ಬಯಸುವಿರಾ? ಮೊದಲು ಈ ನಿಯಮ ಅರ್ಥಮಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jan 25, 2023 | 6:46 PM

Share

ನಿಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಯಾವುದೇ ತೊಡಕುಗಳು ಆಗದಂತೆ ಸರಿಯಾದ ಸಮಯದಲ್ಲಿ ಗರ್ಭ ಧರಿಸಿ. ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಮತ್ತು ನಿಮಗೆ ಯಾವುದೇ ಸಂದೇಹಗಳಿದ್ದರೆ, ಯಾವುದೇ ವಿಳಂಬವಿಲ್ಲದೆ ಸಾಧ್ಯವಾದಷ್ಟು ಬೇಗ ತಜ್ಞರನ್ನು ಸಂಪರ್ಕಿಸಿ. ಸಂತಾನೋತ್ಪತ್ತಿ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮುಖ್ಯವಾಗಿದೆ.

ಫಲವತ್ತತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಜವಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ಹೆಚ್ಚಿನ ತೊಡಕುಗಳನ್ನು ತಪ್ಪಿಸಲು ಸರಿಯಾದ ಸಮಯದಲ್ಲಿ ಗರ್ಭಧರಿಸಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಮುಂಬೈನ ವಾಂಶಿಯಲ್ಲಿರುವ ನೊವಾ ಐ.ವಿ.ಎಫ್‌ನ ಫಲವತ್ತತೆ(ಫರ್ಟಿಲಿಟಿ) ಸಲಹೆಗಾರ ಡಾ. ಆಕಾಶ್ ಸುರಾನಾ ಫಲವತ್ತತೆಗೆ ಸಂಬಂಧಿಸಿದ ಅನೇಕ ವಿಷಯಗಳು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ಕೆಲವೊಂದು ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ಡಾ. ಆಕಾಶ ಸುರಾನಾ ಹೇಳಿರುವ ಫಲವತ್ತತೆಯ ನಿಯಮಗಳು

ಫಲವತ್ತಾತ ಕಿಟಕಿ: ಫಲವತ್ತತೆಯ ಅವಧಿಯು ಅಂಡಾನೋತ್ಪತ್ತಿ ಸಂಭವಿಸಿದಾಗ ಅಂಡಾಶಯದಿಂದ ಮೊಟ್ಟೆಯು ಬಿಡುಗಡೆಯಾಗುತ್ತದೆ. ಸಾಮಾನ್ಯವಾಗಿ ಋತುಚಕ್ರವು ಸುಮಾರು 21 ರಿಂದ 35 ದಿನಗಳವರೆಗೆ ಇರುತ್ತದೆ ಹಗೂ 14 ದಿನಗಳ ಮೊದಲು ಅಂಡಾನೋತ್ಪತ್ತಿ ಸಂಭವಿಸುತ್ತದೆ. ಉದಾಹರಣೆಗೆ ಮಹಿಳೆಯು 28 ದಿನಗಳ ಋತುಚಕ್ರವನ್ನು ಹೊಂದಿದ್ದರೆ, 14 ದಿನಗಳು ಅತ್ಯಂತ ಫಲವತ್ತಾದ ಅವಧಿಯಾಗಿದೆ. ಆದ್ದರಿಂದ ಅಂಡಾನೋತ್ಪತ್ತಿ ಸಮಯದಲ್ಲಿ ದಂಪತಿಗಳು ಲೈಂಗಿಕ ಸಂಭೊಗವನ್ನು ಹೊಂದಲು ಇದು ಸೂಕ್ತವಾಗಿದೆ. ಸಾಮಾನ್ಯವಾಗಿ ಮೊಟ್ಟೆ ಛಿದ್ರಗೊಂಡಾಗ ಅದು 24 ಗಂಟೆಗಳ ಕಾಲ ಜೀವಂತವಾಗಿರುತ್ತದೆ ಮತ್ತು ವೀರ್ಯವು 39 ರಿಂದ 72 ಗಂಟೆಗಳವರೆಗೆ ಜೀವಂತವಾಗಿರುತ್ತದೆ. ಹಾಗಾಗಿ ಈ ಅವದಿಯಲ್ಲಿ ಸಮಯೋಚಿತ ಸಂಭೋಗವು ಗರ್ಭಧರಿಸುವ ಗರಿಷ್ಠ ಅವಕಾಶವನ್ನು ಹೊಂದಿರುತ್ತದೆ.

ಮುಟ್ಟು: ಮಹಿಳೆಯರಿಗೆ ಈ ಹಂತದ ಬಗ್ಗೆ ಚೆನ್ನಾಗಿ ತಿಳಿದಿದೆ. ಋತುಚಕ್ರದ ನೋವು ಕೆಲವು ಮಹಿಳೆಯರಿಗೆ ಚಿಂತಾಜನಕವಾಗಿರಬಹುದು ಹಾಗೂ ಕೆಲವರಿಗೆ ಸುಲಭವಾಗಿ ಪಿರಿಯೆಡ್ಸ್ ಆಗುತ್ತದೆ. ಒಬ್ಬರು ಅಸಹಜ ರಕ್ತಸ್ರಾವ, ಮುಟ್ಟಿನ ಸೆಳೆತ, ವಾಕರಿಕೆ, ವಾಂತಿ ಮತ್ತು ಜಠರಗರುಳಿನ ತೊಂದರೆಗಳನ್ನು ಸಹ ಹೊಂದಿರುತ್ತಾರೆ. ನಿಮ್ಮ ಮುಟ್ಟನ್ನು ಪತ್ತೆ ಹಚ್ಚಲು ನೀವು ಡೈರಿಯನ್ನು ನಿರ್ವಹಿಸಬೇಕು ಮತ್ತು ನಿಮ್ಮ ದಿನಾಂಕಗಳು ಹಾಗೂ ರೋಗಲಕ್ಷಣಗಳನ್ನು ಬರೆಯಬೇಕು. ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಋತುಚಕ್ರದ ದಾಖಲೆಯು ಸಹಾಯಕವಾಗುತ್ತದೆ.

ಇದನ್ನು ಓದಿ;Women Health: ಸಂತಾನೋತ್ಪತ್ತಿಗೆ ಸಹಾಯಕವಾಗುವ ಯೋಗಾಸನದ ಭಂಗಿಗಳು ಇಲ್ಲಿವೆ

ಪೋಲಿಕ್ಯುಲರ್ ಹಂತ: ಇದು ಅಂಡಾಶಯದಲ್ಲಿ ಮೊಟ್ಟೆಯು ಪಕ್ವವಾಗುವುದು. ಇದು ಸಂತಾನೋತ್ಪತ್ತಿ ಯುಗದಲ್ಲಿ ದೇಹದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ಭಾಗವಾಗಿದೆ. ಇದು ಮೊಟ್ಟೆಯನ್ನು ಪಕ್ವಗೊಳಿಸುತ್ತದೆ. ಅದೇ ಸಮಯದಲ್ಲಿ ಎಂಡೊಮೆಟ್ರಿಯಮ್ ಒಳಪದರವು ಭ್ರೂಣ ನಿರ್ಮಿಸುತ್ತದೆ.

ಅಂಡೋತ್ಪತ್ತಿ: ಇದು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ನಿರ್ಧಿಷ್ಟ ಅವಧಿಯಾಗಿದೆ. ಇದು ಅತ್ಯಂತ ಫಲವತ್ತಾದ ಅವಧಿಯಾಗಿದೆ ಮತ್ತು ಮುಟ್ಟಿನ 14 ದಿನಗಳ ಮೊದಲು ಅಂಡೋತ್ಪತ್ತಿ ದಿನವಾಗಿದೆ.

ಲೂಟಿಯಲ್ ಹಂತ: ಇದು ಮೊಟ್ಟೆಯ ಛಿದ್ರದ ನಂತರದ ಹಂತವಾಗಿದೆ. ಇಲ್ಲಿ ದೇಹವು ಮುಂಬರುವ ಭ್ರೂಣಕ್ಕೆ ಸಿದ್ಧವಾಗಿರುತ್ತದೆ. ಯಾವುದೇ ಭ್ರೂಣದ ರಚನೆಯಿಲ್ಲದಿದ್ದರೆ, ತಯಾರಾದ ಎಂಡೋಮೆಟ್ರಿಯಮ್ ದಪ್ಪವು ಚೆಲ್ಲಿಹೋಗುತ್ತದೆ ಮತ್ತು ಮಹಿಳೆಯು ಮುಂದಿನ ಮುಟ್ಟನ್ನು ಪಡೆಯುತ್ತಾಳೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:46 pm, Wed, 25 January 23