Acidity: ಆಮ್ಲೀಯತೆ ಮತ್ತು ಹೊಟ್ಟೆಯುಬ್ಬುವಿಕೆ ಸಮಸ್ಯೆಗೆ ಕೊತ್ತಂಬರಿ ಮತ್ತು ಗುಲಾಬಿ ಚಹಾ ಉತ್ತಮ

ಒತ್ತಡದ ಜೀವನಶೈಲಿ, ವ್ಯಾಯಾಮದ ಕೊರತೆ ಮತ್ತು ಕಡಿಮೆ ಗುಣಮಟ್ಟದ ಆಹಾರವು ಆಮ್ಲೀಯತೆ ಮತ್ತ ಹೊಟ್ಟೆ ಉಬ್ಬುವಿಕೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

Acidity: ಆಮ್ಲೀಯತೆ ಮತ್ತು ಹೊಟ್ಟೆಯುಬ್ಬುವಿಕೆ ಸಮಸ್ಯೆಗೆ ಕೊತ್ತಂಬರಿ ಮತ್ತು ಗುಲಾಬಿ ಚಹಾ ಉತ್ತಮ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2023 | 7:42 PM

ಒತ್ತಡದ ಜೀವನಶೈಲಿ, ವ್ಯಾಯಾಮದ ಕೊರತೆ ಮತ್ತು ಕಡಿಮೆ ಗುಣಮಟ್ಟದ ಆಹಾರವು ಆಮ್ಲೀಯತೆ ಮತ್ತ ಹೊಟ್ಟೆ ಉಬ್ಬುವಿಕೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳಿಗೆ ಸಹಾಯ ಮಾಡಲು ಆಯುರ್ವೇದ ಚಿಕಿತ್ಸೆಗಳು ಇಲ್ಲಿವೆ. ಆಮ್ಲೀಯತೆ ಮತ್ತು ಹೊಟ್ಟೆಯುಬ್ಬರ ಹೆಚ್ಚಿನ ಜನರು ಪ್ರತಿದಿನ ಅನುಭವಿಸುವ ಸಾಮಾನ್ಯ ಅಸ್ವಸ್ಥತೆಗಳಲ್ಲಿ ಒಂದಾಗಿದೆ. ಉಬ್ಬುವಿಕೆಯು ಹೊಟ್ಟೆ ತುಂಬಿದ ಭಾವನೆ ಉಂಟು ಮಾಡಿದರೆ ಆಮ್ಲೀಯತೆಯು ಎದೆಯುರಿ ಅಥವಾ ಎದೆಯಲ್ಲಿ ಮಂದವಾದ ನೋವಿಗೆ ಕಾರಣವಾಗಬಹುದು. ಆಯುರ್ವೇದ ತಜ್ಞರಾದ ಡಾ. ಡಿಕ್ಸಾ ಭಾವಸರ್ ಸವಲಿಯಾ ಅವರು ತಮ್ಮ ಇನ್ಟಾಗ್ರಾಮ್ ಪೋಸ್ಟ್​ನಲ್ಲಿ ವಯಸ್ಕರರಲ್ಲಿ ಆಮ್ಲೀಯತೆಯನ್ನು ನಿವಾರಿಸಲು ಸಹಾಯ ಮಾಡುವ ಮೂರು ಚಿಕಿತ್ಸೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹಸಿವು, ಆಹಾರ ಗುಣಮಟ್ಟವನ್ನು ಪರಿಗಣಿಸದೆ ತಮ್ಮ ಜೀರ್ಣಕ್ರಿಯೆಯನ್ನು ಲಘುವಾಗಿ ತೆಗೆದುಕೊಂಡಿದ್ದಾರೆ ಮತ್ತು ಅವರು ಯಾವುದೇ ರೀತಿಯ ಆಹಾರ ಪದಾರ್ಥವನ್ನು ಸೇವಿಸುತ್ತಾರೆ. ಅಲ್ಲದೆ ಒತ್ತಡದ ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯು ಇಲ್ಲಿ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಎಲ್ಲಾ ವಯಸ್ಸಿನವರು ಸಹ ಈ ಆಮ್ಲೀಯತೆಯಿಂದ ಬಳಲುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ.

12 ವಾರಗಳ ಕಾಲ ಈ ಮೂರು ಆಯುರ್ವೇದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮನಸ್ಸು ಮತ್ತು ದೇಹದಲ್ಲಿ ಹೆಚ್ಚುವರಿ ಪಿತ್ತವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಆಸಿಡಿಟಿ ಸಮಸ್ಯೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಸಲಹೆ ನೀಡಿದರು.

ಕೊತ್ತಂಬರಿ ಚಹಾ: ಕೊತ್ತಂಬರಿ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಇದಕ್ಕಾಗಿ ಒಂದು ಲೋಟ ನೀರು ತೆಗೆದುಕೊಳ್ಳಿ, ಒಂದು ಚಮಚ ಕೊತ್ತಂಬರಿ ಬೀಜ, ೫ ಪುದೀನ ಎಲೆಗಳು ಮತ್ತು 15 ಕರಿಬೇವಿನ ಎಲೆಗಳನ್ನು ಸೇರಿಸಿ ಅದನ್ನು 5 ನಿಮಿಷಗಳ ಕಾಲ ಕುದಿಸಿ ಬೆಳಗ್ಗೆ ಕುಡಿಯಬೇಕು.

ಇದನ್ನು ಓದಿ:Lifestyle Tips: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ

ಸೋಂಪು ಕಾಳುಗಳು: ಸೋಂಪುಕಾಳುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಊಟದ ನಂತರ ಒಂದು ಟೀಸ್ಪೂನ್ ಸೋಂಪು ಕಾಳುಗಳನ್ನು ಸೇವಿಸುವಂತೆ ಡಾ. ಸವಲಿಯಾ ಸಲಹೆ ನೀಡಿದರು.

ಗುಲಾಬಿ ಚಹಾ: ಬೆಳಗ್ಗೆ ಕೊತ್ತಂಬರಿ ಚಹಾವನ್ನು ಸೇವಿಸಿದ ನಂತರ, ದಿನದ ಕೊನೆಯಲ್ಲಿ ಗುಲಾಬಿ ಚಹಾವನ್ನು ಕುಡಿಯಬೇಕು. ಅದಕ್ಕಾಗಿ ಒಂದು ಕಪ್ ನೀರು ತೆಗೆದುಕೊಂಡು ಅದನ್ನು 3 ನಿಮಿಷಗಳ ಕಾಲ ಕುದಿಸಿ, ನಂತರ ಅದರಲ್ಲಿ ಕೆಲವು ಒಣ ಗುಲಾಬಿದಳಗಳನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಕಾಯಿಸಿ. ನಂತರ ಮಲಗುವ 30 ನಿಮಿಷಗಳ ಮೊದಲು ಈ ಗುಲಾಬಿ ಚಹಾವನ್ನು ಕುಡಿಯಿರಿ ಎಂದು ಡಾ. ಸವಲಿಯಾ ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​