AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್‌ಲೈನ್ vs ಆಫ್‌ಲೈನ್ ಟಿಕೆಟ್ ಬುಕಿಂಗ್: ಬಸ್ ಮತ್ತು ರೈಲಿನಲ್ಲಿ ಯಾವುದರಲ್ಲಿ ಬುಕ್ ಮಾಡಿದ್ರೆ ಹಣ ಉಳಿತಾಯ?

ಹಬ್ಬದ ಸಮಯದಲ್ಲಿ ಬಸ್, ರೈಲು ಟಿಕೆಟ್ ಬುಕಿಂಗ್‌ ಗೊಂದಲವಿದೆಯೇ? ರೈಲು ಟಿಕೆಟ್‌ಗೆ ಆಫ್‌ಲೈನ್ ಕೌಂಟರ್‌ಗಳು ಕನ್ವೀನಿಯನ್ಸ್ ಶುಲ್ಕ ಇಲ್ಲದೆ ಅಗ್ಗ. ಆದರೆ, ಬಸ್‌ಗೆ ಆನ್‌ಲೈನ್ ಬುಕಿಂಗ್‌ಗಳು ಪ್ರೋಮೋ ಕೋಡ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಮೂಲಕ ಹೆಚ್ಚು ಲಾಭದಾಯಕ. ಹಣ ಉಳಿಸಲು ಮತ್ತು ಉತ್ತಮ ಡೀಲ್‌ಗಳನ್ನು ಪಡೆಯಲು ಯಾವ ವಿಧಾನ ಸೂಕ್ತ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಆನ್‌ಲೈನ್ vs ಆಫ್‌ಲೈನ್ ಟಿಕೆಟ್ ಬುಕಿಂಗ್: ಬಸ್ ಮತ್ತು ರೈಲಿನಲ್ಲಿ ಯಾವುದರಲ್ಲಿ ಬುಕ್ ಮಾಡಿದ್ರೆ ಹಣ ಉಳಿತಾಯ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Sep 11, 2026 | 4:21 PM

Share

ಹಬ್ಬಗಳು ಶುರುವಾಗಿದೆ. ಊರಿಗೆ ಹೋಗಬೇಕು, ಈ ಸಮಯದಲ್ಲಿ ಬಸ್, ರೈಲುಗಳ ದರ ಖಂಡಿತ ಹೆಚ್ಚಾಗಿರುತ್ತದೆ. ಹಬ್ಬದ ದಿನ ಹೆಚ್ಚಿನ ಜನ ತಮ್ಮ ಊರಿನತ್ತ ಪ್ರಯಾಣ ಮಾಡುತ್ತಾರೆ ಎಂದು ಕೆಲವೊಂದು ಖಾಸಗಿ ಬಸ್ಸಿನವರು ದರವನ್ನು ಹೆಚ್ಚಿಸುತ್ತಾರೆ. ಅದಕ್ಕೆ ಕೆಲವರು ಆನ್​​​ ಲೈನ್​​​ನಲ್ಲಿ ಇನ್ನು ಕೆಲವರು ಆಫ್ ಲೈನ್​​​ನಲ್ಲಿ ಟಿಕೆಟ್​​ ಬುಕ್​​ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಯಾವುದರಲ್ಲಿ ಟಿಕೆಟ್​​ ಬುಕ್​​ ಮಾಡಿದ್ರೆ ಉತ್ತಮ ಎಂಬ ಗೊಂದಲಗಳು ಇರುತ್ತದೆ. ಯಾವ ಪ್ರಕಿಯೆಯಲ್ಲಿ ಕಡಿಮೆ ದರ ಸಿಗುತ್ತದೆ ಎಂಬ ಪ್ರಶ್ನೆಗಳು ಇರಬಹುದು. “ಬಸ್ ಅಥವಾ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಲಾಭದಾಯಕವೋ ಅಥವಾ ಆಫ್‌ಲೈನ್ ಕೌಂಟರ್‌ಗಳಲ್ಲಿ ಖರೀದಿಸುವುದು ಶ್ರೇಯಸ್ಕರವೋ?” ಎರಡೂ ಮಾಧ್ಯಮಗಳ ಟಿಕೆಟ್‌ನ ಮೂಲ ದರ ಒಂದೇ ಆಗಿದ್ದರೂ, ಅಂತಿಮವಾಗಿ ಪಾವತಿಸುವ ಮೊತ್ತದಲ್ಲಿ ವ್ಯತ್ಯಾಸವಿರುತ್ತದೆ. ಯಾವುದರಲ್ಲಿ ಬುಕ್ ಮಾಡಿದರೆ ಹಣ ಉಳಿತಾಯವಾಗುತ್ತದೆ ಎಂಬುದರ ಕುರಿತ ಇಲ್ಲಿದೆ ಮಾಹಿತಿ.

ರೈಲ್ವೇ ಟಿಕೆಟ್ ಬುಕಿಂಗ್ (IRCTC vs ರೈಲ್ವೇ ಕೌಂಟರ್)

ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಆಫ್‌ಲೈನ್ (PRS) ಕೌಂಟರ್ ಟಿಕೆಟ್‌ಗಳು ಆನ್‌ಲೈನ್ ಟಿಕೆಟ್‌ಗಿಂತ ಸ್ವಲ್ಪ ಅಗ್ಗವಾಗಿರುತ್ತವೆ. IRCTC ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಬುಕ್ ಮಾಡುವಾಗ ಮೂಲ ಟಿಕೆಟ್ ದರದ ಜೊತೆಗೆ ಸುಮಾರು ₹15 ರಿಂದ ₹30 ಕನ್ವೀನಿಯನ್ಸ್ ಶುಲ್ಕ (Convenience Fee) ಹಾಗೂ ಪೇಮೆಂಟ್ ಗೇಟ್‌ವೇ / ಯುಪಿಐ / ಕಾರ್ಡ್ ಸೇವಾ ಶುಲ್ಕ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತದೆ. ರೈಲ್ವೇ ರಿಸರ್ವೇಶನ್ ಕೌಂಟರ್‌ಗೆ ತೆರಳಿ ಫಾರ್ಮ್ ಭರ್ತಿ ಮಾಡಿ ಬುಕ್ ಮಾಡಿದರೆ ಯಾವುದೇ ಕನ್ವೀನಿಯನ್ಸ್ ಶುಲ್ಕವಿರುವುದಿಲ್ಲ. ಮೂಲ ಟಿಕೆಟ್ ದರವನ್ನು ಮಾತ್ರ ಪಾವತಿಸಬೇಕಾಗುತ್ತದೆ. ರೈಲಿನಲ್ಲಿ ಆಫ್‌ಲೈನ್ ಕೌಂಟರ್ ಟಿಕೆಟ್ ದರವೇ ಕಡಿಮೆ. ಆದರೆ, ಕ್ಯೂನಲ್ಲಿ ನಿಲ್ಲುವ ಶ್ರಮ ಮತ್ತು ಸಮಯವನ್ನು ಉಳಿಸಲು ಜನರು ಸಣ್ಣ ಪ್ರಮಾಣದ ಕನ್ವೀನಿಯನ್ಸ್ ಶುಲ್ಕ ನೀಡಿ ಆನ್‌ಲೈನ್ ಆಯ್ಕೆ ಮಾಡಿಕೊಳ್ಳುತ್ತಾರೆ.

ಬಸ್ ಟಿಕೆಟ್ ಬುಕಿಂಗ್ (KSRTC, ಪ್ರೈವೇಟ್ ಆಪರೇಟರ್ಸ್ ಮತ್ತು ಆ್ಯಪ್‌ಗಳು)

ಬಸ್ ಟಿಕೆಟ್‌ಗೆ ಬಂದಾಗ ಪರಿಸ್ಥಿತಿ ತದ್ವಿರುದ್ಧವಾಗಿದೆ. ಬಸ್‌ಗಳಲ್ಲಿ ಆನ್‌ಲೈನ್ ಬುಕಿಂಗ್ ಹೆಚ್ಚು ಲಾಭದಾಯಕ ಹಾಗೂ ಅಗ್ಗ. KSRTC, redBus, MakeMyTrip ನಂತಹ ಆ್ಯಪ್‌ಗಳಲ್ಲಿ ಬುಕ್ ಮಾಡುವಾಗ ಪ್ರೋಮೋ ಕೋಡ್‌ಗಳು, ಕ್ಯಾಶ್‌ಬ್ಯಾಕ್, ಮೊದಲ ಬುಕಿಂಗ್ ಡಿಸ್ಕೌಂಟ್ ಹಾಗೂ ಆನ್‌ಲೈನ್ ಆಫರ್‌ಗಳು ಸಿಗುತ್ತವೆ. ಉದಾಹರಣೆಗೆ, KSRTC ಯಲ್ಲಿ ಹೋಗಿ-ಬರುವ (Round Trip) ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ಸಿಗುತ್ತದೆ. ಬಸ್ ಸ್ಟ್ಯಾಂಡ್ ಕೌಂಟರ್‌ಗಳಲ್ಲಿ ಅಥವಾ ಟ್ರಾವೆಲ್ ಏಜೆಂಟರ ಬಳಿ ಬುಕ್ ಮಾಡಿದರೆ ಯಾವುದೇ ರಿಯಾಯಿತಿ (Discount) ಸಿಗುವುದಿಲ್ಲ. ಏಜೆಂಟರು ಹೆಚ್ಚುವರಿ ಕಮಿಷನ್ ಪಡೆಯುವ ಸಾಧ್ಯತೆಯೂ ಇರುತ್ತದೆ.

ಆನ್‌ಲೈನ್ vs ಆಫ್‌ಲೈನ್: ಪ್ರಮುಖ ವ್ಯತ್ಯಾಸ

ಲಕ್ಷಣಗಳು / ಸೌಲಭ್ಯಗಳು ಆನ್‌ಲೈನ್ ಬುಕಿಂಗ್ (Online) ಆಫ್‌ಲೈನ್ ಬುಕಿಂಗ್ (Offline)
ಬುಕಿಂಗ್ ಶುಲ್ಕ (Convenience Fee) ಹೆಚ್ಚುವರಿ ಸೇವಾ ಶುಲ್ಕ ಅನ್ವಯ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ
ಆಫರ್ / ಕ್ಯಾಶ್‌ಬ್ಯಾಕ್ (Discounts) ಬ್ಯಾಂಕ್ ಮತ್ತು ಆ್ಯಪ್ ಆಫರ್‌ಗಳು ಲಭ್ಯ ಯಾವುದೇ ಆಫರ್‌ಗಳು ಇರುವುದಿಲ್ಲ
ಸೀಟ್ ಆಯ್ಕೆ (Seat Selection) ಇಷ್ಟವಾದ ಸೀಟ್ ಆಯ್ಕೆ ಮಾಡುವ ಅವಕಾಶ ಸಿಬ್ಬಂದಿ ನೀಡುವ ಸೀಟ್ ಮಾತ್ರ
ಶ್ರಮ ಮತ್ತು ಸಮಯ ಮೊಬೈಲ್‌ನಲ್ಲೇ ತಕ್ಷಣ ಬುಕ್ ಮಾಡಬಹುದು ಕ್ಯೂನಲ್ಲಿ ನಿಲ್ಲಬೇಕು, ಸಮಯ ವ್ಯರ್ಥ
ಕ್ಯಾನ್ಸಲೇಶನ್ (Cancellation) ಆನ್‌ಲೈನ್‌ನಲ್ಲೇ ತಕ್ಷಣ ರದ್ದು ಮಾಡಬಹುದು ನೇರವಾಗಿ ಕೌಂಟರ್‌ಗೆ ಹೋಗಬೇಕು

ಇದನ್ನೂ ಓದಿ: ಶಾಲಾ ಅಂಗಳದಿಂದ ಮಾಯವಾಯ್ತು ‘ಸ್ಲೇಟ್-ಬಳಪ’: ಡಿಜಿಟಲ್ ಯುಗದಲ್ಲಿ ಇತಿಹಾಸದ ಪುಟ ಸೇರಿದ ಅಕ್ಷರಾಭ್ಯಾಸದ ಮೊದಲ ಹೆಜ್ಜೆ

ನಿಮಗೆ ಸಮಯವಿದ್ದು, ನೇರವಾಗಿ ರೈಲು ನಿಲ್ದಾಣದ ಕೌಂಟರ್‌ಗೆ ಹೋಗಲು ಸಾಧ್ಯವಾದರೆ ಆಫ್‌ಲೈನ್ ಕೌಂಟರ್‌ನಲ್ಲಿ ಬುಕ್ ಮಾಡುವುದು ಹಣದ ದೃಷ್ಟಿಯಿಂದ ಅಗ್ಗ. ವಿವಿಧ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಕೂಪನ್ ಕೋಡ್ ಮತ್ತು ಕ್ಯಾಶ್‌ಬ್ಯಾಕ್ ಬಳಸಿ ಆನ್‌ಲೈನ್‌ನಲ್ಲೇ ಬುಕ್ ಮಾಡುವುದು ಅತ್ಯಂತ ಲಾಭದಾಯಕ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us