
ಸಣ್ಣ ವಯಸ್ಸಿನಲ್ಲಿ ಕೂದಲು ಉದುರುವುದು, ಬೋಳು ತಲೆ ಸಮಸ್ಯೆ ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಕೆಲಸದ ಒತ್ತಡ, ಸರಿಯಾದ ಪೋಷಣೆಯ ಕೊರತೆ ಮತ್ತು ನಿದ್ರೆಯ ಕೊರತೆಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಒಮ್ಮೆ ಕೂದಲು ಉದುರಲು ಆರಂಭಿಸಿದರೆ ಅದನ್ನು ನಿಯಂತ್ರಿಸುವುದು ಕಷ್ಟ. ಆ ಜಾಗದಲ್ಲಿ ಕೂದಲು ಬೆಳೆಯುವುದೇ ಇಲ್ಲ. ಇದು ಸೌಂದರ್ಯವನ್ನು ಹಾಳು ಮಾಡುತ್ತದೆ. ಆದರೆ ಮನೆಯಂಗಳದಲ್ಲಿರುವ ಅಲೋವೆರಾ ಸಸ್ಯದಿಂದ ಜೆಲ್ (Aloevera Gel) ತೆಗೆದು ಕೂದಲಿಗೆ ಹಚ್ಚುವುದು ಪರಿಣಾಮಕಾರಿಯಾಗಿದೆಯಂತೆ. ಹಾಗಾದ್ರೆ ಬೋಳು ಸಮಸ್ಯೆಯಿದ್ದವರಿಗೆ ಅಲೋವೆರಾ ಜೆಲ್ ಹೇಗೆ ಪ್ರಯೋಜನಕಾರಿಯಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಿಮ್ಮ ಕಣ್ಣಿನ ಆಕಾರ ಯಾವುದು? ಸಣ್ಣ ಕಣ್ಣುಗಳು ನಿಮ್ಮದಾಗಿದ್ರೆ ನೀವು ಅತೀ ಬುದ್ಧಿವಂತರು
ಅಲೋವೆರಾ ಜೆಲ್ ಹಚ್ಚುವ ಮೊದಲು, ನಿಮ್ಮ ನೆತ್ತಿಯೂ ಸ್ವಚ್ಛವಾಗಿದೆಯೇ. ಕೊಳಕು, ಎಣ್ಣೆ ಮತ್ತು ಇತರ ಉತ್ಪನ್ನಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಹೀಗಾಗಿ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಆ ಬಳಿಕ ಒಂದರಿಂದ ಎರಡು ಚಮಚ ಅಲೋವೆರಾ ಜೆಲ್ ತೆಗೆದುಕೊಂಡು, ಅದನ್ನು ನೇರವಾಗಿ ನೆತ್ತಿಗೆ ಹಚ್ಚಿ. ನಿಮ್ಮ ಬೆರಳ ತುದಿಯನ್ನು ಬಳಸಿ, ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಈ ಜೆಲ್ ನಿಮ್ಮ ನೆತ್ತಿಯ ಮೇಲೆ ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೇ ಇರಲಿ. ಒಂದು ಗಂಟೆಯ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Thu, 6 March 25