Summer Solstice 2023: ವರ್ಷದ ಅತೀ ದೀರ್ಘ ದಿನದ ಬಗ್ಗೆ ನಿಮಗೆಷ್ಟು ಗೊತ್ತು? ಈ ದಿನದಂದು ಹಗಲು ಕಡಿಮೆಯಾಗಿ, ರಾತ್ರಿ ಹೆಚ್ಚಾಗಲು ಕಾರಣವೇನು?
ಜೂನ್ 21ರಿಂದ ಹಗಲು ಕಡಿಮೆಯಾಗಿ, ರಾತ್ರಿ ಹೆಚ್ಚಾಗಲು ಶುರುವಾಗುತ್ತದೆ. ಇದನ್ನೇ ನಾವು ಬೇಸಿಗೆ ಅಯನ ಸಂಕ್ರಾಂತಿ ಎನ್ನುತ್ತೇವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಅಯನ ಸಂಕ್ರಾಂತಿ (Solstice) ಎಂದರೇನು? ಈ ಬಗ್ಗೆ ನಿಮಗೆಷ್ಟು ಗೊತ್ತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜೂನ್ 21ರಿಂದ ಹಗಲು ಕಡಿಮೆಯಾಗಿ, ರಾತ್ರಿ ಹೆಚ್ಚಾಗಲು ಶುರುವಾಗುತ್ತದೆ. ಇದನ್ನೇ ನಾವು ಬೇಸಿಗೆ ಅಯನ ಸಂಕ್ರಾಂತಿ ಎನ್ನುತ್ತೇವೆ. ಉತ್ತರ ಗೋಳಾರ್ಧದಲ್ಲಿ ಬೇಸಿಗೆ ಅಯನ ಸಂಕ್ರಾಂತಿಯು ಜೂನ್ 21 ರಿಂದ 23 ರವರೆಗೆ ಮತ್ತು ಚಳಿಗಾಲದ ಅಯನ ಸಂಕ್ರಾಂತಿಯು ಡಿಸೆಂಬರ್ 21 ರಿಂದ 23 ರವರೆಗೆ ನಡೆಯುತ್ತದೆ. ಭೂಮಿಯ ಜ್ಯಾಮಿತಿ ಮತ್ತು ಸೂರ್ಯನ ಸುತ್ತ ಅದರ ಚಲನೆಯಿಂದಾಗಿ, ದಕ್ಷಿಣ ಗೋಳಾರ್ಧದಲ್ಲಿ ಬೇಸಿಗೆಯ ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅಯನ ಸಂಕ್ರಾಂತಿ ಸಂಭವಿಸುತ್ತದೆ.
ದಕ್ಷಿಣ ಗೋಳಾರ್ಧದಲ್ಲಿ ಅತಿ ದೀರ್ಘ ಹಗಲುಳ್ಳ ದಿನ ಎಂದು ಹೇಳಲಾಗುತ್ತದೆ. ಹಾಗೆಯೇ ಉತ್ತರ ಗೋಳಾರ್ಧದಲ್ಲಿ ವರ್ಷದ ಕಡಿಮೆ ರಾತ್ರಿ ಹೊಂದಿರುವ ದಿನವನ್ನು ಸೂಚಿಸುತ್ತದೆ. ಹಾಗಾಗಿ ಬೇಸಿಗೆಯ ಅಯನ ಸಂಕ್ರಾಂತಿಯ ದಿನದಂದು ಸೂರ್ಯೋದಯ ಬೇಗ ಆಗಿ, ಸೂರ್ಯಾಸ್ತವು ಬಹಳ ತಡವಾಗಿ ಆಗುವುದು ವಾಡಿಕೆ. ಸೂರ್ಯನು ಕಾಲ್ಪನಿಕ ಉಷ್ಣವಲಯದ ಕರ್ಕಾಟಕ ವೃತ್ತ ಅಥವಾ 23.5 N ಅಕ್ಷಾಂಶದ ಮೇಲೆ ನೇರವಾಗಿ ಬೀಳುವಾಗ ಈ ಸಂಕ್ರಾಂತಿ ಸಂಭವಿಸುವುದು. ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಗೋಳಾರ್ಧದಲ್ಲಿ ಅತ್ಯಂತ ಚಿಕ್ಕ ಹಗಲು ದಾಖಲಾಗುತ್ತದೆ. ಅತಿ ಚಿಕ್ಕ ಹಗಲು, ಅತಿದೊಡ್ಡ ರಾತ್ರಿಗೆ ಡಿಸೆಂಬರ್ 21 ಸಾಕ್ಷಿಯಾಗುತ್ತದೆ. ಹಾಗಾಗಿ ಆ ದಿನವನ್ನು ಅತಿದೊಡ್ಡ ರಾತ್ರಿಯನ್ನು ಹೊಂದಿರುವ ದಿನ ಎಂದು ಕರೆಯಲಾಗುತ್ತದೆ.
ಇದನ್ನು ಓದಿ:Summer Solstice 2022: ‘ಸಮ್ಮರ್ ಸೋಲ್ಟಿಸ್’ ಇಂದು ಅಯನ ಸಂಕ್ರಾಂತಿ
ಭೂಮಿಯ ಪರಿಭ್ರಮಣೆ ಮತ್ತು ಸೂರ್ಯನ ಪಥ ಬದಲಾವಣೆಯಿಂದ ಉತ್ತರ ಗೋಳಾರ್ಧದಲ್ಲಿ ಚಳಿಗಾಲವಿದ್ದರೆ ದಕ್ಷಿಣ ಗೋಳಾರ್ಧದಲ್ಲಿ ಬೇಸಿಗೆ ಕಾಲವಿರುತ್ತದೆ. ಪ್ರತಿ ವರ್ಷವೂ ಡಿಸೆಂಬರ್ 21 ರಂದು ದೀರ್ಘ ಹಗಲು ಅಥವಾ ದೀರ್ಘ ರಾತ್ರಿ ಆಯಾ ಗೋಳಗಳಲ್ಲಿ ಕಂಡುಬರುತ್ತದೆ. ಅಂದರೆ ಡಿಸೆಂಬರ್ 21ರಂದು ಸೂರ್ಯನು ತನ್ನ ಪಥ ಬದಲಾಯಿಸುತ್ತಾನೆ ಎಂದು ಹೇಳಲಾಗುತ್ತದೆ. ಜೂನ್ ಅಯನ ಸಂಕ್ರಾಂತಿ ಅಥವಾ ಬೇಸಿಗೆ ಅಯನ ಸಂಕ್ರಾಂತಿಯ ಸಮಯವೆಂದರೆ, ಯುಕೆ, ಯುಎಸ್ಎ, ಕೆನಡಾ, ರಷ್ಯಾ, ಭಾರತ ಮತ್ತು ಚೀನಾದಲ್ಲಿ ಬೇಸಿಗೆಯ ಸಮಯವಾಗಿರುವುದಲ್ಲದೇ ನಮಗೆ ವರ್ಷದ ದೀರ್ಘ ಹಗಲುಳ್ಳ ದಿನವಾಗಿದೆ. ಹಾಗೆಯೇ ಆಸ್ಟ್ರೇಲಿಯಾ, ಅರ್ಜೆಂಟೀನಾ, ಚಿಲಿ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಗಳಲ್ಲಿ ಚಳಿಗಾಲದ ಸಮಯವಾಗಿದ್ದು, ಇದು ವರ್ಷದ ಕಡಿಮೆ ಹಗಲುಳ್ಳ ದಿನವಾಗಿದೆ. ಡಿಸೆಂಬರ್ ಅಯನ ಸಂಕ್ರಾಂತಿ, ಚಳಿಗಾಲದ ಅಯನ ಸಂಕ್ರಾಂತಿಯ ಸಮಯದಲ್ಲಿ, ಯುಕೆ, ಯುಎಸ್ಎ, ಕೆನಡಾ, ರಷ್ಯಾ, ಭಾರತ ಮತ್ತು ಚೀನಾದಲ್ಲಿ ಚಳಿಗಾಲದ ಸಮಯವಾಗಿದ್ದು, ವರ್ಷದ ಅತ್ಯಂತ ಕಡಿಮೆ ಹಗಲುಳ್ಳ ದಿನವಾಗಿದೆ.