ಅಗರಬತ್ತಿ, ಸೊಳ್ಳೆ ಕಾಯಿಲ್ ಹೊಗೆಯಿಂದ ಕ್ಯಾನ್ಸರ್ ಬರುತ್ತದೆಯೇ? ವೈದ್ಯರು ಹೇಳುವುದೇನು?

ಅಗರಬತ್ತಿ ಅಥವಾ ಸೊಳ್ಳೆ ಕಾಯಿಲ್ ಬಳಸುವುದರಿಂದ ನೇರವಾಗಿ ಕ್ಯಾನ್ಸರ್ ಬರುತ್ತದೆ ಎಂಬ ಮಾತಿನ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಆದರೆ ಇವುಗಳಿಂದ ಹೊರಬರುವ ಹೊಗೆಯನ್ನು ನಿರಂತರವಾಗಿ ಉಸಿರಾಡುವುದು ಮನೆಯ ಒಳಗಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಿ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಸುರಕ್ಷಿತವಾಗಿ ಬಳಸಲು ವೈದ್ಯರು ನೀಡಿರುವ ಸಲಹೆಗಳೇನು? ಇಲ್ಲಿದೆ ಮಾಹಿತಿ.

ಅಗರಬತ್ತಿ, ಸೊಳ್ಳೆ ಕಾಯಿಲ್ ಹೊಗೆಯಿಂದ ಕ್ಯಾನ್ಸರ್ ಬರುತ್ತದೆಯೇ? ವೈದ್ಯರು ಹೇಳುವುದೇನು?
Sticks And Mosquito Coils
Edited By:

Updated on: Sep 20, 2026 | 12:33 PM

ಮುಖ್ಯಾಂಶಗಳು

  • ಅಗರಬತ್ತಿ-ಸೊಳ್ಳೆ ಕಾಯಿಲ್ ಹೊಗೆಯಿಂದ ಕ್ಯಾನ್ಸರ್ ಬರುತ್ತದೆಯೇ?
  • ಈ ಹೊಗೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳೇನು?
  • ಸೊಳ್ಳೆ ಕಾಯಿಲ್ ಅನ್ನು ರಾತ್ರಿ ಪೂರ್ತಿ ಉರಿಸುವುದು ಸುರಕ್ಷಿತವೇ?

ಮನೆಯ ಪೂಜಾ ಕೋಣೆಯಲ್ಲಿ ಅಗರಬತ್ತಿ ಹಚ್ಚುವುದು ಅಥವಾ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಕಾಯಿಲ್ ಬಳಸುವುದು ಸಾಮಾನ್ಯ. ಆದರೆ ಇವುಗಳಿಂದ ಹೊರಬರುವ ಹೊಗೆಯನ್ನು ಉಸಿರಾಡುವುದರಿಂದ ಕ್ಯಾನ್ಸರ್ (Cancer) ಬರುತ್ತದೆ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ಹಾಗಾದರೆ ಇದರಲ್ಲಿ ಎಷ್ಟು ಸತ್ಯವಿದೆ? ಅಗರಬತ್ತಿ ಮತ್ತು ಸೊಳ್ಳೆ ಕಾಯಿಲ್ ಹೊಗೆ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ವೈದ್ಯರು ವಿವರಿಸಿದ್ದಾರೆ.

ಅಗರಬತ್ತಿಯಿಂದ ಕ್ಯಾನ್ಸರ್ ಬರುತ್ತದೆಯೇ?

ವೈದ್ಯರ ಪ್ರಕಾರ, ಸಾಮಾನ್ಯವಾಗಿ ಅಗರಬತ್ತಿ ಅಥವಾ ಸೊಳ್ಳೆ ಕಾಯಿಲ್ ಬಳಸುವುದರಿಂದಲೇ ನೇರವಾಗಿ ಕ್ಯಾನ್ಸರ್ ಬರುತ್ತದೆ ಎಂದು ಹೇಳಲು ಸ್ಪಷ್ಟವಾದ ಸಾಕ್ಷ್ಯಗಳಿಲ್ಲ. ಕ್ಯಾನ್ಸರ್ ಉಂಟಾಗಲು ಅನುವಂಶಿಕ ಅಂಶಗಳು, ತಂಬಾಕು ಸೇವನೆ, ಮದ್ಯಪಾನ, ಕೆಲವು ಸೋಂಕುಗಳು ಹಾಗೂ ಜೀವನಶೈಲಿಗೆ ಸಂಬಂಧಿಸಿದ ಹಲವು ಅಂಶಗಳು ಕಾರಣವಾಗಬಹುದು. ಹೀಗಾಗಿ ಪೂಜೆಯ ಸಂದರ್ಭದಲ್ಲಿ ಅಗರಬತ್ತಿ ಹಚ್ಚಿದ ಮಾತ್ರಕ್ಕೆ ಕ್ಯಾನ್ಸರ್ ಬರುತ್ತದೆ ಎಂದು ಭಯಪಡುವ ಅಗತ್ಯವಿಲ್ಲ.

ಆದರೆ ಹೊಗೆಯಿಂದ ಆರೋಗ್ಯಕ್ಕೆ ತೊಂದರೆಯಾಗಬಹುದು

ಕ್ಯಾನ್ಸರ್‌ಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ, ಅಗರಬತ್ತಿ ಮತ್ತು ಸೊಳ್ಳೆ ಕಾಯಿಲ್ ಉರಿಯುವಾಗ ಹೊಗೆಯೊಂದಿಗೆ ಸೂಕ್ಷ್ಮ ಕಣಗಳು ಹಾಗೂ ವಿವಿಧ ರಾಸಾಯನಿಕಗಳು ಗಾಳಿಗೆ ಸೇರುತ್ತವೆ. ವಿಶೇಷವಾಗಿ ಗಾಳಿ ಸರಿಯಾಗಿ ಹರಿಯದ ಸಣ್ಣ ಕೊಠಡಿಯಲ್ಲಿ ಇವುಗಳನ್ನು ಹೆಚ್ಚು ಸಮಯ ಉರಿಸಿದರೆ ಹೊಗೆ ಒಳಗಡೆಯೇ ಸಂಗ್ರಹವಾಗಬಹುದು. ಇದರಿಂದ ಮನೆಯ ಒಳಗಿನ ಗಾಳಿಯ ಗುಣಮಟ್ಟ ಹದಗೆಡಬಹುದು.

ಈ ಹೊಗೆಯನ್ನು ನಿರಂತರವಾಗಿ ಉಸಿರಾಡುವುದರಿಂದ ಕೆಲವರಿಗೆ ಕೆಮ್ಮು, ಗಂಟಲು ಕಿರಿಕಿರಿ, ಕಣ್ಣು ಉರಿ, ತಲೆನೋವು ಅಥವಾ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಆಸ್ತಮಾ ಅಥವಾ ಅಲರ್ಜಿಯಂತಹ ಉಸಿರಾಟದ ಸಮಸ್ಯೆ ಇರುವವರಿಗೆ ಹೊಗೆ ಹೆಚ್ಚು ಕಿರಿಕಿರಿ ಉಂಟುಮಾಡಬಹುದು. ಮಕ್ಕಳು ಮತ್ತು ವೃದ್ಧರಂತರು ಮನೆಯಲ್ಲಿ ವಿಶೇಷ ಎಚ್ಚರಿಕೆ ವಹಿಸುವುದು ಉತ್ತಮ.

ವರ್ಷಗಳ ಬಳಿಕ ವ್ಯಾಯಾಮ ಮಾಡಿದರೆ ಹೃದಯದಲ್ಲಿ ಏನಾಗುತ್ತದೆ? ಈ ವಿಷಯ ಗಮನಿಸಿ

ಸೊಳ್ಳೆ ಕಾಯಿಲ್ ಬಳಸುವಾಗ ಈ ಎಚ್ಚರಿಕೆ ಇರಲಿ

ಸೊಳ್ಳೆ ಕಾಯಿಲ್ ಅನ್ನು ಮುಚ್ಚಿದ ಕೊಠಡಿಯಲ್ಲಿ ಇಟ್ಟುಕೊಂಡು ರಾತ್ರಿ ಪೂರ್ತಿ ಉರಿಸುವುದನ್ನು ತಪ್ಪಿಸುವುದು ಉತ್ತಮ. ಬಳಸುವಾಗ ಕಿಟಕಿ ಅಥವಾ ಬಾಗಿಲಿನ ಮೂಲಕ ಗಾಳಿ ಒಳಗೆ ಮತ್ತು ಹೊರಗೆ ಹೋಗುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಲ್ಲಿ ಸೊಳ್ಳೆ ಪರದೆ, ಕಿಟಕಿಗಳಿಗೆ ಜಾಲರಿ ಅಥವಾ ಹೊಗೆರಹಿತ ಸೊಳ್ಳೆ ನಿಯಂತ್ರಣ ವಿಧಾನಗಳನ್ನು ಬಳಸಬಹುದು.

ಅಗರಬತ್ತಿಯನ್ನೂ ಅಗತ್ಯಕ್ಕಿಂತ ಹೆಚ್ಚು ಹಚ್ಚುವ ಬದಲು ಕಡಿಮೆ ಪ್ರಮಾಣದಲ್ಲಿ ಬಳಸುವುದು ಹಾಗೂ ಗಾಳಿ ಹರಿಯುವ ಸ್ಥಳದಲ್ಲಿ ಹಚ್ಚುವುದು ಉತ್ತಮ. ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳ ಲೇಬಲ್ ಮತ್ತು ನೋಂದಣಿ ವಿವರಗಳನ್ನು ಪರಿಶೀಲಿಸುವುದು ಕೂಡ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us